ಸಕ್ಕರೆ ನಾಡಿನಲ್ಲಿ ವೈಕುಂಠ ಏಕಾದಶಿ

ಮಂಡ್ಯ: ಜ.6- ಇಂದು ರಾಜ್ಯಾದ್ಯಂತ ವಿಷ್ಣುವಿನ ದೇವಸ್ಥಾನಗಳಲ್ಲಿ ವೈಕುಂಠ ಏಕಾದಶಿಯ ಸಂಭ್ರಮ ಮನೆ ಮಾಡಿದೆ. ಸಕ್ಕರೆ ನಾಡು ಮಂಡ್ಯದಲ್ಲೂ ಕೂಡ ಮುಂಜಾನೆ ಮೂರು ಗಂಟೆಯಿಂದಲೇ ವಿಷ್ಣುವಿನ ದೇವಸ್ಥಾನಗಳಲ್ಲಿ ಪೂಜಾ ಕೈಂಕರ್ಯಕಗಳು ಜರುಗುತ್ತಿವೆ.
ವೈಂಕುಂಠ ಏಕಾದಶಿಯ ದಿನದಂದು ವಿಷ್ಣುವಿನ ನಾನಾ ರೂಪಗಳ ದೇವಸ್ಥಾನದಲ್ಲಿ ದರ್ಶನ ಪಡೆದರೆ ಮೋಕ್ಷ ಸಿಗುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ ಬೆಳಗ್ಗೆಯಿಂದಲೇ ಜನರು ದೇವಸ್ಥಾನಗಳಿಗೆ ಆಗಮಿಸಿ ವಿಷ್ಣುವಿನ ಕೃಪೆಗೆ ಪಾತ್ರರಾಗುತ್ತಿದ್ದಾರೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇವಸ್ಥನಾದಲ್ಲೂ ಮುಂಜಾನೆ 2 ಗಂಟೆಯಿಂದ ಸುಪ್ರಭಾತ ಸೇವೆ, ವಿಷ್ಣು ಸಹಸ್ರನಾಮಾರ್ಚನೆ, ಅಭಿಷೇಕ ಹಾಗೂ ಮಹಮಂಗಳಾರತಿ ನೆರವೇರಿಸಲಾಗುತ್ತಿದೆ. ವೈಕುಂಠ ಏಕದಶಿಯ ದಿನದಂದು ಎಲ್ಲಾ ವಿಷ್ಣುವಿನ ದೇವಸ್ಥಾನದಲ್ಲಿ ಸ್ವರ್ಗದ ಬಾಗಿಲು ತೆರೆದು ಜನರಿಗೆ ಮೋಕ್ಷದ ದಾರಿಯನ್ನು ತೋರಿಸಲಾಗುತ್ತದೆ. ಆದರೆ ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಸಂಕ್ರಾಂತಿ ಹಬ್ಬದ ದಿನದಂದು ಸ್ವರ್ಗದ ಬಾಗಿಲು ತೆರೆಯುವುದು ವಿಶೇಷವಾಗಿದೆ.

Leave a Comment