ಸಂಸ್ಕಾರವಿಲ್ಲದ ಸಂಪತ್ತಿಗೆ ಅರ್ಥವಿಲ್ಲ

(ನಮ್ಮ ಪ್ರತಿನಿಧಿಯಿಂದ)
ಬಳ್ಳಾರಿ(ಕಂಪ್ಲಿ): ಫೆ, ೧೩- ಜೀವನಕ್ಕೆ ಸಂಪತ್ತು ಬೇಕು ಆದರೆ ಸಂಸ್ಕಾರವಿಲ್ಲದ ಸಂಪತ್ತಿಗೆ ಅರ್ಥವಿಲ್ಲ ಎಂದು ರಾಜ್ಯಪಾಲ ವಜುಭಾಯಿ ವಾಲ ಹೇಳಿದರು.

ಅವರಿಂದು ಜಿಲ್ಲೆಯ ಕಂಪ್ಲಿ ಪಟ್ಟದ ಬಳ್ಳರಿ ರಸ್ತೆಯಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಸ್ವರಿ ವಿಶ್ವ ವಿದ್ಯಾಲಯ ಹಮ್ಮಿಕೊಂಡಿದ್ದ 83 ನೇ ಶಿವರಾತ್ರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.

ಧನ ಕನಕದಿಂದ ಶ್ರೀಮಂತರಾದರೆ ಸಾಲದು.ಆದ್ಯಾತ್ಮಿಕ, ಆತ್ಮ ಜ್ಞಾನದಿಂದ  ಕೂಡಿದ ಜೀವನ ಮಾತ್ರ ಶ್ರೀಮಂತವಾದುದು. ಪ್ಯಾಷನ್ ಮತ್ತು ವ್ಯಸನ ಭ್ರಷ್ಟತೆ ಮಾಡದಿದ್ದರೆ ನಿರ್ಭಯ, ಭಲವಂತ ಮತ್ತು ಶ್ರೀಮಂತರಾಗಲು ಸಾದ್ಯ. ಹಾಗೆ ಯಾರಿಂದಲೂ ಏನೂ ಬೇಡದ ಗುಣ ಇರುವ ಮತ್ತು ಆಧ್ಯಾತ್ಮ ಜ್ಞಾನವನ್ನು ಕೊಡುವುದನ್ನು ಮಾತ್ರ ಮಾಡುತ್ತಿರುವ ಬ್ರಹ್ಮ ಕುಮಾರಿಯರು ಎಲ್ಲರಿಗೂ ಶ್ರೀಮಂತರೆಂದರು.

ಮಾನವೀಯ ಮೌಲ್ಯಗಳನ್ನು ತುಂಬುವ ಕಾರ್ಯದಲ್ಲಿ ವಿಶ್ವದ 140 ದೇಶಗಳಲ್ಲಿ ತಮ್ಮ ಕೇಂದ್ರಗಳನ್ನು ಮತ್ತು ದೇಶದಲ್ಲಿ 4500 ಕೇಂದ್ರಗಳ ಮೂಲಕ ಆದ್ಯಾತ್ಮ ಚಿಂತನೆಯನ್ನು ಭೋದಿಸುವ ಮೂಲಕ ಜನರಿಗೆ  ಸಂಸ್ಕಾರ ನೀಡುವ ಕಾರ್ಯವನ್ನು ಬ್ರಹ್ಮಕುಮಾರಿಯವರು ಮಾಡುತ್ತಿದ್ದು ಅವರ ಕಾರ್ಯ ಶ್ಲಾಘನೀಯವಾದುದು ಎಂದರು.

ಸದಾ ಹಸನ್ಮುಖಿಯಾರಾಗಿರುವ ಅವರ ಮುಖದಲ್ಲು ಕ್ರೋದ ಕಾಣಲು ಅಸಾದ್ಯ ಇಂತಹ ಬದುಕು ನಮ್ಮಲ್ಲಿ ನಾವು ಕಂಡು ಕೊಳ್ಳಬೇಕು.

ತಾಯಿ ಸಂಸ್ಕಾರಳಾದರೆ ಮಕ್ಕಳೂ ಸಂಸ್ಕಾರವಂತರಾಗುತ್ತಾರೆ. ಇದಕ್ಜೆ. ಛತ್ರಪತಿ ಶಿವಾಜಿ. ಭಗವಾನ್ ಶ್ರೀಕೃಷ್ಣ ರನ್ನು ಉದಾಹರಿಸಿದ ಅವರು. ಮಾತೃ ಶಕ್ತಿ ಪ್ರಬಲವಾದರೇ ಪುರುಷ ಶಕ್ತಿಯೂ ಸಂಸ್ಕಾರವಂತವಾಗಲಿದೆಂದು ಅಭಿಪ್ರಾಯ ಪಟ್ಟರು.

ಟೀಕೆ ಬಿಟ್ಟು ಸಮಯವನ್ನು ಹಾಳುಮಾಡದೆ ಉತ್ತಮರ ಸಂಗ ಮಾಡಿ. ಉತ್ತಮ ಕೃತಿಗಳ ಆಬ್ಯಾಸದಿಂದ ಕಳೆಯಬೇಕು‌ ಎಂದ ಅವರು ಬ್ರಹ್ಮ ಕುಮಾರಿಯರು ಜೀವನವನ್ನು ಹೇಗೆ ಕಳೆಯಬೇಕು ಎಂಬುದನ್ನು ಸಮಾಜದ ಜನತೆಗೆ ಕಲಿಸಲು ಬಂದಿರುವ ದೇವದೂತರು ಅವರುಗೆ ಎಲ್ಲರೂ ಸಹಕರಿಸಿ ಉತ್ತಮ ಸಮಾಜ ನಿರಗಮಾಣಕ್ಕೆ ಮುಂದಾಗಲು‌ಕರೆ ನೀಡಿದರು.
ಈಶ್ವರಿ ವಿವಿಯ ಹುಬ್ಬಳ್ಳಿ ವಲಯದ ನಿರ್ದೇಕ ಡಾ. ಬಸವರಾಜ್ ರಾಜ ಋಷಿ ಮಾತನಾಡಿ ಭಾರತ ಸಮೃದ್ಧವಾಗಿದ್ದ ದೇವಲಾಯಗಳ ಸ್ವರ್ಗೀಯ ದೇವ ಭೂಮಿ. ನಮ್ಮ ಶಿಕ್ಷಣ ಇನ್ನೂ ಆಂಗ್ಲರ ವ್ಯವಸ್ಥೆಯನ್ನೇ ಇಟ್ಟುಕೊಂಡಿದ್ದೇವೆ. ಶಿಕ್ಷಣದಲ್ಲಿ ಮನಶಾಸ್ತ್ರ ಇಲ್ಲದೆ ಆದ್ಯಾತ್ಮಿಕ, ಆತ್ಮಜ್ಞಾನದ ಕೊರತೆಯಿಂದ ಅಶಾಂತಿಗೆ ಕಾರಣವಾಗಿದೆ.
ದೇಹದಲ್ಲಿ ಆದ್ಯಾತ್ಮಿಕ ಜ್ಞಾನವಿಲ್ಲದೆ ಇದ್ದರೆ. ನೈತಿಕತೆ ಕೊರತೆ ಹೆಚ್ಚಾಗಿ. ಭ್ರಷ್ಟಾಚಾರ ಹೆಚ್ಚಲು ಕಾರಣ. ಅದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರ ಶಿಕ್ಷಣದಲ್ಲಿ ಆದ್ಯಾತ್ಮ ಚಿಂತನೆಯ ಶಿಕ್ಷಣ ನೀಡಬೇಕೆಂದು ಮನವಿ ಮಾಡಿದರು
ಈ ಸಂದರ್ಭದಲ್ಲಿ ಯುವ ಗಾಯಕ ಚಿನ್ಮಯ ಮತ್ತು ಕಂಪ್ಲಿ ಪುರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಒಇಬಳಮ್ಮ ಅವರನ್ನು ರಾಜ್ಯಪಾಲರು ಸನ್ಮಾನಿಸಿ ಗೌರವಿಸಿದರು.
ಇದಕ್ಕೂ ಮುನ್ನ ಅವರು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವ ವಿದ್ಯಾಲಯದ ಕಟ್ಟಡದಲ್ಲಿ ಲಿಂಗಕ್ಕೆ ಮುಂಬತ್ತಿ ಬೆಳಗುವುದರ ಮೂಲಕ ಇಂದಿನ ಶಿವರಾತ್ರಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಪುರಸಭೆ ಅಧ್ಯಕ್ಷ ಎಂ ಸುಧೀರ್. ಶಾಸಕ ಸುರೇಶ್  ಬಾಬು ಸ್ವಾಗತಿಸಿದರು. ಬ್ರಹ್ಮಕುಮಾರಿ ಭಾರತಿ ಕಾರ್ಯಕ್ರಮ ನಡೆಸಿಕೊಟ್ಟರು.

Leave a Comment