ಸಂಸದ ಶ್ರೀರಾಮುಲು ಸಮ್ಮುಖದಲ್ಲಿ  ಸಂಡೂರಿನ ಅನೇಕ ಧುರೀಣರು ಬಿಜೆಪಿ ಸೇರ್ಪಡೆ

ಬಳ್ಳಾರಿ, ಸೆ.8: ಜಿಲ್ಲೆಯ ಸಂಡೂರು ತಾಲ್ಲೂಕಿನ ಸುಶೀಲ ನಗರ ಮಾಜಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಅಮರೇಶ್ ಸೇರಿದಂತೆ ಇತರೆ ಅನೇಕ ಪ್ರಮುಖರು ಇಂದು ಬಳ್ಳಾರಿಯಲ್ಲಿ ಸಂಸದ ಬಿ.ಶ್ರೀರಾಮುಲು ಸಮ್ಮುಖದಲ್ಲಿ ಬಿಜೆಪಿ ಯುವ ಧುರೀಣ ಕೆ.ಎಸ್.ದಿವಾಕರ್ ಮುಂದಾಳತ್ವದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.

ವಿ.ಅಮರೇಶ್ ಸೇರಿದಂತೆ ವಿ.ವಿ.ಶ್ರೀನಿವಾಸುಲು ಮತ್ತಿತರೆ ನೂರಾರು ಜನರು ಬಳ್ಳಾರಿ ಸಂಸದ ಬಿ.ಶ್ರೀರಾಮುಲು ಅವರ ಜನಪರ ಕಾಳಜಿ, ಪ್ರಧಾನಿ ಮೋದಿ ಅವರ ಪ್ರಬಲ ನಾಯಕತ್ವ, ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ, ಬಿಜೆಪಿ ಮುಖಂಡರಾದ ಕೆ.ಎಸ್.ದಿವಾಕರ್ ಮುಂದಾಳತ್ವದಲ್ಲಿ ವಿಶ್ವಾಸವಿಟ್ಟು ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸಂಡೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಸಹಕರಿಸಿ, ಶ್ರಮಿಸುವುದಾಗಿ ತಿಳಿಸಿದರು. ಸಂಸದ ಶ್ರೀರಾಮುಲು ಮಾತನಾಡಿ, ಕೇಂದ್ರದಲ್ಲಿನ ಬಿಜೆಪಿ ಸರ್ಕಾರದ ಜನಪರ, ಜನಪ್ರಿಯ ಕಾರ್ಯಕ್ರಮಗಳ ಬಗ್ಗೆ ಜನತೆಗೆ ತಿಳಿಸಬೇಕು, ಬಿಜೆಪಿಯ ಪ್ರಬಲ ಸಂಘಟನೆಗೆ ಶ್ರಮಿಸಬೇಕು ಎಂದರು.

ಸಂಡೂರು ತಾಲ್ಲೂಕು ಬಿಜೆಪಿ ಅಧ್ಯಕ್ಷ ನೀಲಕಂಠಪ್ಪ ಹಾಗೂ ಧುರೀಣ ಕೆ.ಎಸ್.ದಿವಾಕರ್ ಅವರು ಮಾತನಾಡಿ, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಇನ್ನೂ ಹಲವಾರು ಧುರೀಣರು ಬಿಜೆಪಿ ಸೇರಿಕೊಳ್ಳಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಹನುಮಂತಪ್ಪ, ನಾಗರಾಜ್, ಸಿದ್ದಪ್ಪ, ನಾಗರಾಜ್, ಯಶವಂತ್, ನಗರದ ನಾಗರಾಜ, ಸುಶೀಲನಗರ ರಾಮಪ್ಪ, ಸಿದ್ದಾಪುರ ವೆಂಕಟೇಶ್ ಮತ್ತಿತರೆ ಅನೇಕರು ಉಪಸ್ಥಿತರಿದ್ದರು.

Leave a Comment