ಸಂಸದ ದೇವೇಂದ್ರಪ್ಪಗೆ ಬಸವ ಭವನದಲ್ಲಿ ಅದ್ದೂರಿ ಸನ್ಮಾನ

ಬಳ್ಳಾರಿ:ಜೂ.10- ನಗರದ ಬಸವ ಭವನದಲ್ಲಿಂದು ನೂತನವಾಗಿ ಸಂಸದರಾಗಿ ಆಯ್ಕೆಯಾಗಿರುವ ವೈ ದೇವೇಂದ್ರಪ್ಪ ಅವರಿಗೆ ಅದ್ದೂರಿಯಿಂದ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಭವನಕ್ಕೆ ಮಾಜಿ ಮುಖ್ಯ ಮಂತ್ರಿ ಜಗದೀಶ್ ಶೆಟ್ಟರ್ ಅವರೊಂದಿಗೆ ಬಂದ ಅವರ ಮೇಲೆ ಪುಷ್ಪ ಮಳೆಗರೆಯುವ ಮೂಲಕ ಸ್ವಾಗತಿಸಲಾಯಿತು.

ಸಮಾರಂಭ ಆರಂಭಕ್ಕೂ ಮುನ್ನ ಗಿರೀಶ್ ಕಾರ್ನಾಡ್ ಅವರ ನಿಧನಕ್ಕೆ ಮೌನಾಚರಣೆ ಮಾಡಲಾಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಪಕ್ಷದ ಜಿಲ್ಲಾ ಅಧ್ಯಕ್ಷ ಚೆನ್ನಬಸವನಗೌಡ, ಕಳೆದ ಉಪ‌ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಸೋಲು‌ ಕಂಡಾಗಲೂ ಪಕ್ಷದ ಕಾರ್ಯಕರ್ತರು ಎದೆಗುಂದದೆ ಕಳೆದ ಮೂರು ತಿಂಗಳಿಂದ ಹಗಲು ರಾತ್ರಿ ಶ್ರಮಿಸಿ ಪಕ್ಷವನ್ನು ಮತ್ತಷ್ಟು ಸಂಘಟನೆ ಮಾಡಿ, ನರೇಂದ್ರ ಮೋದಿ ಅವರನ್ನು‌ಮತ್ತೆ ಪ್ರಧಾನಿ‌ ಮಾಡಲು ಪಕ್ಷದ ಅಭ್ಯರ್ಥಿ ವೈ. ದೇವೇಂದ್ರಪ್ಪ ಅವರನ್ನು ಆಯ್ಕೆ ಮಾಡಿದ್ದಕ್ಕೆ ಧನ್ಯವಾದಗಳೆಂದರು.

ಜಿಲ್ಲೆಯ ವಿವಿಧಡೆಯಿಂದ ಬಂದಿದ್ದ ನೂರಾರು ಜನ ದೇವೇಂದ್ರಪ್ಪ ಅವರಿಗೆ ಹೂ ಮಾಲೆ ಅರ್ಪಿಸಿ ಅಭಿನಂದಿಸಿದರು.

ಸಮಾರಂಭದಲ್ಲಿ ಮಾತನಾಡಿದ ಮಾಜಿ ಶಾಸಕರುಗಳಾದ ಮೃತ್ಯಂಜಯ ಜಿನಗ ಅವರು, ಜಿಲ್ಲೆಯಲ್ಲಿ ಮತ್ತೆ ಬಿಜೆಪಿ ಪಕ್ಷ ಮತ್ತಷ್ಟು ಗಟ್ಟಿಗೊಳ್ಳುತ್ತಿದೆ. ಇದಕ್ಕೆ ದೇವೇಂದ್ರಪ್ಪ ಅವರ ಗೆಲುವೇ ಉದಾಹರಣೆಯಾಗಿದೆ. ಇದಕ್ಕೆ ಶೆಟ್ಟರ್ ಅವರ ಮಾರ್ಗದರ್ಶನದಲ್ಲಿ ಚುನಾವಣೆ ಎದಿರಿಸಿದ್ದು‌ ಸೂಕ್ತವಾಗಿತ್ತು. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲೂ ಸಂಡೂರಿನಲ್ಲಿ ಒಂದು ಸ್ಥಾನದಿಂದ ‌ಲಾಟರಿ‌ ಮೂಲಕ ಅಧಿಕಾರ ವಂಚನೆಯಾಗಿದೆ‌. ಹಡಗಲಿಯಲ್ಲೂ ಹೆಚ್ಚಿನ ಸ್ಥಾನ ಪಡೆದಿದೆ, ಕಮಲಾಪುರದಲ್ಲಿ ಹೆಚ್ಚು ಶ್ರಮವಹಿಸಬೇಕಿದೆಂದರು.
ಎಣಿಕೆಯ ದಿನವೂ ನಾನು ಉಗ್ರಪ್ಪ ಅವರಿಗೆ ನಮ್ಮ ಅಭ್ಯರ್ಥಿ ಗೆಲುವು ಎಂದು ಹೇಳಿದ್ದೆ. ಅದಕ್ಕೆ ನಮ್ಮ ಕಾರ್ಯಕರ್ತರ ಶ್ರಮವೇ ಕಾರಣ ಎಂದು ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಹೇಳಿದರು.

ವಚನಗಳ ಮೂಲಕವೇ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುವ ಸಾಮರ್ಥ್ಯ ಹೊಂದಿದ್ದಾರೆಂದ ಅವರು ನಗರ ಕ್ಷೇತ್ರದಲ್ಲಿ ಇನ್ನೂ ಜನ‌ಬದಲಾಗಿಲ್ಲ, ನನಗೆ ಭರ್ಜರಿ ಬಹುಮತ ನೀಡಿದ್ದ ಜನ ದೇವೇಂದ್ರಪ್ಪ ಅವರಿಗೆ ಕಡಿಮೆ ಮತ ನೀಡಿರುವುದು ನೋವು ತಂದಿದೆ. ಬರುವ ನಗರ ಪಾಲಿಕೆ ಚುನಾವಣೆಯಲ್ಲಿ ಮತ್ತು ಪಕ್ಷ ಸಂಘಟನೆಯಿಂದ ಗೆಲುವು ನಮ್ಮದಾಗಿಸಿ ಕೊಳ್ಳಲು ಶ್ರೀರಾಮುಲು ಮತ್ತು ದೇವೇಂದ್ರಪ್ಪ ಅವರ ಸಹಕಾರ ಅಗತ್ಯ ಎಂದರು.

ಮೊಳಕಾಲ್ಮುರು ಶಾಸಕ ಶ್ರೀರಾಮಯಲು ‌ಮಾತನಾಡಿ, ನಾವು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 22 ಸ್ಥಾನ ಬರುತ್ತದೆಂದು ಹೇಳುತ್ತಿತ್ತು. ಸಮೀಕ್ಷೆಗಳು 16_17 ಎಂದವು. ಆದರೆ ಜನತೆ 25 ಕ್ಷೇತ್ರದಲ್ಲಿ ಗೆಲುವು ತಂದುಕೊಟ್ಟಿದ್ದಾರೆ. ಇದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರ ಹಗಲು ಇರುಳು ದೇಶದ ಪ್ರಗತಿಗೆ ಶ್ರಮಿಸುತ್ತಿರುವುದನ್ನು ಕಂಡ ಜನ ನೋಡಿ ನಮಗೆ ಮತ ನೀಡಿದ್ದಾರೆಂದರು.

ಒಂದು ಲಕ್ಷ ಬಹುಮತದಿಂದ ಜಯ ನಮ್ಮದೆನ್ನುವ ಕಾಂಗ್ರೆಸ್ ನವರೇ ಹೇಳಿ ನಿಮ್ಮ ಸೋಲಿಗೆ ಕಾರಣ ಏನೆಂದು. ಡಿ.ಕೆ.ಶಿವಕುಮಾರ್ ಮತ್ತು ಉಗ್ರಪ್ಪ ಅವರಿಗೆ ಹೇಳಿದ್ದೆ ಈ ಬಾರಿ ನಮ್ಮ ಕಾರ್ಯಕರ್ತರು ಎದ್ದಿದ್ದಾರೆ. ನೀವು ಮಲಗಲೇ ಬೇಕೆಂದು ಅದನ್ನು ನೀವು ತೋರಿಸಿಕೊಟ್ಟಿದ್ದೀರಿ ಎಂದು ಕಾರ್ಯಕರ್ತರ ಬೆನ್ನು ತಟ್ಟಿದರು.

ಇಡೀ ರಾಜ್ಯದಲ್ಲಿ ಘಟಾನುಘಟಿ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಮುನಿಯಪ್ಪ ಮೊದಲಾದವರ ಸೋಲಿಗೆ ಕಾರಣ ಮುಖಂಡರಾದ ನಾವಲ್ಲ ಕಾರ್ಯಕರ್ತರಾದ ನೀವು ಎಂದರು.

ಉದ್ಘಾಟನಾ ಭಾಷಣ ಮಾಡಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ದೇಶದಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅವರ ಉತ್ತಮ ಆಡಳಿತದಿಂದ ಬಿಜೆಪಿ ಗಾಳಿ ಇದೆ. ಇನ್ನು ಮುಂದೆ ದೇಶದಲ್ಲಿ ಬಿಜೆಪಿಯದ್ದೇ ಹವಾ ಎಂದ ಅವರು. ಕಳೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಡೆದ ಮತಗಳ ಅಂತರದಿಂದ ನಾವು ಎದೆಗುಂದಲಿಲ್ಲ. ಕ್ಷೇತ್ರದ ಉಸ್ತುವಾರಿ ನೀಡಿದಾಗ ನಾನು ಇಲ್ಲಿಗೆ ಬಂದು ಮುಖಂಡರ ಸಭೆ ನಡೆಸಿದಾಗ ಸಂಘಟಿತ ಹೋರಾಟಕ್ಕೆ ಮುಂದೆ ಹೆಜ್ಜೆ ಇಟ್ಟಿದ್ದು ಗೆಲುವಿಗೆ ಸಹಕಾರಿಯಾಯಿತು ಎಂದರು. ಇದೆ ಸಂಘಟಿತ ಹೋರಾಟ ಯಾವಾಗಲೂ ಇರಬೇಕು. ಬರುವ ಪಾಲಿಕೆ ಚುನಾವಣೆಯಲ್ಲಿ ಸಂಘಟಿತ ಹೋರಾಟ ಮಾಡಿ ಜಯ ಬಿಜೆಪಿಯದ್ದಾಗ ಬೇಕು ಎಂದು ಆಶಿಸಿದರು.

ಸಮಾರಂಭದಲ್ಲಿ ಮಾಜಿ ಮುಖ್ಯ ಮಂತ್ರಿ ಜಗದೀಸ್ ಶೆಟ್ಟರ್, ನಗರದ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ, ಮಾಜಿ ಶಾಸಕರಾದ ಮೃತ್ಯಂಜಯ ‌ಜಿನಗ, ಚಂದ್ರನಾಯ್ಕ, ಪಾಟೀಲ್ ಸಿದ್ದಾರೆಡ್ಡಿ, ಹೆಚ್.ಹನುಮಂತಪ್ಪ, ಗುತ್ತಿಗನೂರು ವಿರೂಪಾಕ್ಷಗೌಡ, ಅನಿಲ್ ನಾಯ್ಡು, ಎರ್ರಂಗಳಿ ತಿಮ್ಮಾರೆಡ್ಡಿ, ಸಂಡೂರಿನ ರಾಘವೇಂದ್ರ, ಓದೋ ಗಂಗಪ್ಪ ಮೊದಲಾದವರು ಇದ್ದರು.

ರೇಣುಕಮ್ಮ ಅವರು ಪ್ರಾಥನೆ ನಡೆಸಿಕೊಟ್ಟರೆ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಮುರಹರಗೌಡ ಸ್ವಾಗತಿಸಿದರೆ, ಕೆ.ಎ.ರಾಮಲಿಂಗಪ್ಪ. ಕಾರ್ಯಕ್ರ ನಿರೂಪಿಸಿದರು.

Leave a Comment