ಸಂಸದೆ ಶೋಭಾ ಕರಂದ್ಲಾಜೆ ಬ್ಯಾಂಕ್ ಖಾತೆ ಹ್ಯಾಕ್

 

 

 

ಬೆಂಗಳೂರು, ಫೆ 12- ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆಯವರ ಬ್ಯಾಂಕ್ ಖಾತೆ ಹ್ಯಾಕ್ ಆಗಿದ್ದು, ಹ್ಯಾಕರ್ ಗಳು ಸುಮಾರು 20 ಲಕ್ಷ ರೂಪಾಯಿಗಳಿಗೆ ಕನ್ನ ಹಾಕಿದ್ದಾರೆಂದು ಹೇಳಲಾಗಿದೆ.

 

ಸಂಸತ್ ಭವನದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಶೋಭಾ ಕರಂದ್ಲಾಜೆಯವರು ಹೊಂದಿರುವ ಖಾತೆ ಹ್ಯಾಕ್ ಆಗಿದೆ ಎಂದು ಹೇಳಲಾಗಿದೆ.

 

ಹಣ ವಂಚನೆಯಾಗಿರುವುದರ ಕುರಿತು ಶೋಭಾ ಕರಂದ್ಲಾಜೆಯವರು ಸಂಸತ್ ಮಾರ್ಗದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆನ್ನಲಾಗಿದೆ.

Leave a Comment