ಸಂಸತ್ ನಲ್ಲಿ ನಿಮ್ಮ ಸಮಸ್ಯೆಗಳ ಚರ್ಚೆ ಮಾಡಲು ಸಮರ್ಥರಿಗೆ ಮತ ನೀಡಿ:ಈಶ್ವರರೆಡ್ಡಿ

ಬಳ್ಳಾರಿ, ಏ.7: ನಮ್ಮ ಸಮಸ್ಯೆಗಳ ಬಗ್ಗೆ ಅರಿತುಕೊಂಡು ಅವನ್ನು ನಿವಾರಿಸಲು ಸಂಸತ್ ನಲ್ಲಿ ಪ್ರಶ್ನೆಗಳ ಮೂಲಕ ಚರ್ಚೆ ನಡೆಸಿ ಬಗೆಹರಿಸುವ ಸಮರ್ಥರಿರುವ ವಿದ್ಯಾವಂತ ಅಭ್ಯರ್ಥಿಗೆ ಮತ ನೀಡಿ ಎಂದು ಯುವಸೇನ ಸೋಷಲ್ ಯಾಕ್ಷನ್ ಕ್ಲಬ್ ನ ಅಧ್ಯಕ್ಷ ಮೇಕಲ ಈಶ್ವರರೆಡ್ಡಿ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಅವರು, ನಗರ ಮತ್ತು ಗ್ರಾಮೀಣ ಕ್ಷೇತ್ರದಲ್ಲಿ ಅನೇಕ ಸಮಸ್ಯೆಗಳು ಇಂದಿಗೂ ನಿರಂತರವಾಗಿ ಕಾಡುತ್ತಿವೆ. ನಗರದ ಕನಕ ದುರ್ಗಮ್ಮ ದೇವಸ್ಥಾನದ ಬಳಿಯ ರೈಲ್ವೆ ಕೆಳ ಸೇತುವೆ ಮತ್ತು ಮೇಲೆ ಟಾಕೀಸ್ ಬಳಿಯ ಮೇಲ್ಸೇತುವೆ ವಿಸ್ತರಣೆ ಆಗಬೇಕು.

ನಿರ್ಮಿಸಿ ವರ್ಷಗಳೇ ಕಳೆದರೂ ಸತ್ಯನಾರಾಯಣಪೇಟೆ, ಕೌಲ್ ಬಜಾರ್ ಮೊದಲಗೇಟ್ ನ ಮೇಲ್ಸೇತುವೆ ಈ ವರೆಗೆ ಪಾಲಿಕೆಗೆ ಹಸ್ತಾಂತರವಾಗದೆ. ರಾತ್ರಿ ವೇಳೆ ಕನಿಷ್ಟ ಬೀದಿ ದೀಪ ಇಲ್ಲದಂತಾಗಿದೆ, 2 ಮತ್ತು 3ನೇ ಗೇಟ್ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ನೆನೆಗುದಿಗೆ ಬಿದ್ದಿದೆ.

ಡಾ.ರಾಜಕುಮಾರ್ ರಸ್ತೆ, ರೂಪನಗುಡಿ ರಸ್ತೆ, ವಿಸ್ತರಣೆ ಪಾಲಿಕೆಯ ಪೌರ ಕಾರ್ಮಿಕರ ಸಮಸ್ಯೆಗಳ ನಿರಂತರವಾಗಿ ಕಾಡುತ್ತಿವೆ. ಅದಕ್ಕಾಗಿ ಪಕ್ಷ ಪಕ್ಷದ ಮುಖಂಡರ ಮುಖ ನೋಡಬೇಡಿ, ಮನೆ ಬಳಿಗೆ ಹೋದರೆ ಗೌರವ ಕೊಡುವಂತಹ, ನಿಮ್ಮ ಸಮಸ್ಯೆಗೆ ಸ್ಪಂದಿಸುವ, ವ್ಯಕ್ತಿಗೆ ಮತ ನೀಡಿ ನೋಟಾಗೆ ಮತ ಹಾಕದೆ ತಪ್ಪದೇ ಅರ್ಹ ವ್ಯಕ್ತಿಗೆ ಮತ ನೀಡಿ ಎಂದ ಅವರು ವಯಕ್ತಿಕವಾಗಿ ತಾವು ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪಗೆ ಮತ ಹಾಕುವ ಬಗ್ಗೆ ಚಿಂತನೆ ಮಾಡಿರುವುದಾಗಿ ಹೇಳಿದರು.

 ಯಾಕೆಬೇಕು
ಇದೇ ವೇಳೆ ಅವರು ಪಾಲಿಕೆ ಕಟ್ಟಡದಲ್ಲಿ ಗ್ರಾಮೀಣ ಶಾಸಕ ನಾಗೇಂದ್ರರಿಗಾಗಿ 15-20 ಲಕ್ಷ ರೂ ವೆಚ್ಚ ಮಾಡಿ ಶಾಸಕರ ಕೊಠಡಿ ಅಗತ್ಯವಿತ್ತೆ, ನಿರ್ಮಿಸಿ ತಿಂಗಳುಗಳೇ ಕಳೆದರೂ ಅದರ ಬಳಕೆ ಇಲ್ಲದಾಗಿದೆಂಬ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಶಾಸಕರಾದವರು ಸಹ ಸಮಸ್ಯೆಗಳ ನಿವಾರಣೆಗೆ ಪ್ರಯತ್ನಿಸಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಎಸ್.ಕೃಷ್ಣ, ಜಿ.ಎಂ.ಭಾಷ, ಸಲಾವುದ್ದೀನ್, ಎಸ್.ಆರ್.ಕೆ.ದುರುಗಪ್ಪ, ಎಂ.ರಾಮಕ್ರಿಷ್ಣ, ಶಿವಾನಂದ, ಎಂ.ಕೆ.ಜಗನ್ನಾಥ, ಪಿ.ನಾರಾಯಣ, ಶ್ರೀನಿವಾಸ, ಕೆ.ವೆಂಕಟೇಶ, ಶ್ರೀಧರ್, ಎಂ.ಎಱ್ರಿಸ್ವಾಮಿ, ಮತ್ತಿತರರು ಇದ್ದರು.

Leave a Comment