ಸಂಶಿಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಮನೆ ಜಲಾವೃತ

ಹುಬ್ಬಳ್ಳಿ,ಅ21: ಮಳೆರಾಯನ ಅವಾಂತರಕ್ಕೆ ಕುಂದಗೋಳ ತಾಲೂಕಿನ ಸಂಶಿ ಗ್ರಾಮದ 20 ಕ್ಕೂ ಹೆಚ್ಚು ಮನೆಗಳು ಜಲಾವೃತ್ತಗೊಂಡಿದೆ.
ಸಂಶಿ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ವಾಸವಾಗಿದ್ದ ಮನೆಗಳು ಸಂಪೂರ್ಣವಾಗಿ ಮಳೆಯಿಂದ ಮುಳುಗಿ ಹೋಗಿರುವುದು ಸಾರ್ವಜನಿಕ ಸಂಕಷ್ಟಕ್ಕೆ ಕಾರಣವಾಗಿದೆ.
ಸಂಶಿ ಗ್ರಾಮದ ಗ್ರಾಮಸ್ಥರು ಬೇಜಾವಾಬ್ದಾರಿ ಅಧಿಕಾರಿಗಳು ಹಾಗೂ  ಜನಪ್ರತಿನಿಧಿಗಳ ವಿರುದ್ಧ ಜನಾಕ್ರೋಶ ವ್ಯಕ್ತಪಡಿಸಿ ಹುಬ್ಬಳ್ಳಿ-ಲಕ್ಷ್ಮೇಶ್ವರ ರಸ್ತೆತಡೆದು ಪ್ರತಿಭಟನೆಗೆ  ಮುಂದಾದರು.

Leave a Comment