ಸಂವಿಧಾನಬದ್ಧವಾಗಿ ಕೆಲಸ‌ ಮಾಡುತ್ತೇನೆ: ಸ್ಪೀಕರ್

ಬೆಂಗಳೂರು, ಜು 9 – ತಾವು ಇಂದು ವಿಧಾನಸೌಧದ  ಕಚೇರಿಯಲ್ಲಿ ಇರುತ್ತಿದ್ದು, ಯಾವುದೇ ಶಾಸಕರು ತಮ್ಮನ್ನು ಕಚೇರಿಯಲ್ಲಿ ಭೇಟಿ ಯಾಗಬಹುದು ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.

ನಗರದಲ್ಲಿಂದು ಬೆಳಿಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದುವರೆಗೂ ತಮ್ಮನ್ನು ಯಾವ ಶಾಸಕರು ಸಂಪರ್ಕ ಮಾಡಿ ಕಾಲಾವಕಾಶ ಕೇಳಿಲ್ಲ. ಸಂವಿಧಾನ ಬದ್ಧವಾಗಿ ನಿಯಮಾನುಸಾರ ತಾವು ತಮ್ಮ ಜವಾಬ್ದಾರಿ ನಿರ್ವಹಿಸುವುದಾಗಿ ಪುನರುಚ್ಚರಿಸಿದರು.

 ಅತೃಪ್ತ ಶಾಸಕರ ವಿರುದ್ದ ಕ್ರಮ ಕೈಗೊಳ್ಳುವ  ಸಂಬಂಧಿಸಿದಂತೆ ಯಾವುದೇ ದೂರು ಬಂದಿಲ್ಲ. ಒಂದು ವೇಳೆ ಸ್ಪೀಕರ್ ಕಚೇರಿಗೆ ಯಾರಾದರೂ ದೂರು‌ ನೀಡಿದ್ದರೆ ಅದನ್ನು ಪರಿಶೀಲಿಸುತ್ತೇನೆ ಎಂದರು.

Leave a Comment