ಸಂವಿಧಾನದ ಮೂರು ಆಧಾರ ಸ್ತಂಭಗಳು ಸಮತೋಲನ ಕಾಯ್ದುಕೊಂಡಿವೆ-ಪ್ರಧಾನಿ ಮೋದಿ

ನವದೆಹಲಿ, ಫೆ 22- ಎಲ್ಲ ಸವಾಲುಗಳ ಮಧ್ಯೆ, ರಾಷ್ಟ್ರಕ್ಕೆ ಮಾರ್ಗದರ್ಶನ ತೋರಲು ಸಂವಿಧಾನದ ಮೂರು ಆಧಾರ ಸ್ತಂಭಗಳಾದ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ಸಮತೋಲನವನ್ನು ಕಾಯ್ದುಕೊಂಡಿದ್ದು, ದೇಶವನ್ನು ಸರಿಯಾದ ಹಾದಿಯಲ್ಲಿ ಸಾಗಿಸಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಶನಿವಾರ ಇಲ್ಲಿ ನಡೆದ ಅಂತಾರಾಷ್ಟ್ರೀಯ ನ್ಯಾಯಾಂಗ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ದೇಶದಲ್ಲಿ ಕಾನೂನು ನಿಯಮ ಭಾರತದ ಸಾರ್ವಜನಿಕ ನೀತಿಯ ಮೂಲಾಧಾರವಾಗಿದೆ ಎಂದು ಹೇಳಿದ್ದಾರೆ.

‘ಎಲ್ಲ ಸವಾಲುಗಳ ಮಧ್ಯೆ, ಸಂವಿಧಾನದ ಮೂರು ಆಧಾರ ಸ್ತಂಭಗಳು ಅನೇಕ ಬಾರಿ ದೇಶಕ್ಕೆ ಸರಿಯಾದ ಮಾರ್ಗವನ್ನು ತೋರಿಸಿಕೊಟ್ಟಿವೆ. ಇಂತಹ ಶ್ರೀಮಂತ ಸಂಪ್ರದಾಯ ಭಾರತದಲ್ಲಿ ಬೆಳೆದಿದೆ ಎಂಬ ನಮಗೆ ಹೆಮ್ಮೆ ಇದೆ. ಕಳೆದ ಐದು ವರ್ಷಗಳಲ್ಲಿ ದೇಶದ ವಿವಿಧ ಸಂಸ್ಥೆಗಳು ಈ ಸಂಪ್ರದಾಯವನ್ನು ಬಲಪಡಿಸಿವೆ’ ಎಂದು ಅವರು ಶ್ಲಾಘಿಸಿದ್ದಾರೆ.

Leave a Comment