ಸಂಯೋಗಿತಾ ಆದ ವಿಶ್ವ ಸುಂದರಿ

ಮುಂಬೈ, ಜ 24 – ವಿಶ್ವ ಸುಂದರಿ – 2017 ಮಾನುಷಿ ಚಿಲ್ಲರ್, ಇದೇ ಮೊದಲ ಬಾರಿಗೆ ಬಣ್ಣದ ಲೋಕಕ್ಕೆ ಪ್ರವೇಶಿಸುತ್ತಿದ್ದಾರೆ.
ಶೀಘ್ರದಲ್ಲಿಯೇ ಖ್ಯಾತ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಮುಂಬರುವ ‘ಪೃಥ್ವಿರಾಜ್’ ಚಿತ್ರದಲ್ಲಿ ಮಾನುಷಿ ಸಂಯೋಗಿತಾ ಆಗಿ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಚಿತ್ರದಲ್ಲಿನ ತಮ್ಮ ಪಾತ್ರದ ಮೊದಲ ಲುಕ್ ಅನ್ನು ಮಾನುಷಿ, ಇನ್ ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿ, ಸಂಯೋಗಿತಾ, ಪೃಥ್ವಿರಾಜ್ ! ಎಂದು ಬರೆದುಕೊಂಡಿದ್ದಾರೆ.
ಯಶ್ ರಾಜ್ ಅವರ ಚಿತ್ರಸಂಸ್ಥೆಯಡಿ ಪೃಥ್ವಿರಾಜ್ ಚಿತ್ರ ಹೊರಬರಲಿದ್ದು, ಅಕ್ಷಯ್, ಮಾನುಷಿ ಹೊರತಾಗಿ ಈ ಚಿತ್ರದಲ್ಲಿ ನಟರಾದ ಮಾನವ ರಾಜ್, ಅಶುತೋಷ್ ರಾಣಾ ಹಾಗೂ ಸೋನು ಸುಧ್ ಕಾಣಿಸಿಕೊಳ್ಳಲಿದ್ದಾರೆ.
ನವೆಂಬರ್ 13ರಂದು ಈ ಚಿತ್ರ ತೆರೆಗೆ ಬರಲಿದೆ.

Leave a Comment