ಸಂಭ್ರಮದಿಂದ ಜರುಗಿದ ಗೌರಸಮುದ್ರ ಮಾರಮ್ಮ ಜಾತ್ರೆ

ಚಳ್ಳಕೆರೆ.ಸೆ.12; ಜಿಲ್ಲೆಯ ಎರಡನೆ ದೊಡ್ಡ ಜಾತ್ರೆ ಗೌರಸಮುದ್ರ ಮಾರಮ್ಮ ಗೌರಚಂದ್ರ ಮಾರಮ್ಮ ಎಂದೆ ಕರಸಕೋಳ್ಳುವ ಈ ಜಾತ್ರೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.
ಮಧ್ಯಾಹ್ನ ಗೌರಸಮುದ್ರದ ಗರ್ಭ ಗುಡಿಯಿಂದ ಜಾತ್ರೆ ನಡೆಯುವ ಸ್ಥಳ ತುಮಲಿಗೆ 1ಕ್ಕೆ ಮೆರವಣೆಗೆ ಮೂಲಕ ಮಾರಿ ದೇವತೆಯ ಉತ್ಸವಮೂರ್ತಿಯನ್ನು ಭಕ್ತರು ಹೊತ್ತು ಜನಪದ ವಾದ್ಯಮೇಳದೊಂದಿಗೆ ತರಲಾಯಿತು. ಮಾರಿದೇವತೆ ತವರು ಮನೆಯಾದ ನಿಡಗಲ್ಲಿನಿಂದ ತಂದಿದ್ದ ಮೀಸಲು ಹಸಿಹಾಲು ಬೆಳ್ಳಿಕಣ್ಣು ಕೋರೆಮೀಸೆ ದೇವಿಗೆ ಅರ್ಪಿಸಿದರು. ಬೇವಿನ ಸೊಪ್ಪು ಸುತ್ತಿಕೊಂಡು ದೇವಸ್ಥಾನ ಸುತ್ತುವ ಪದ್ದತಿ ನಿಷೇದಾಜ್ಞೆಯ ನಡುವೆಯು ಕೆಲವರು ಬೆತ್ತಲೆ ಬೇವಿನ ಉಡುಗೆಯೊಂದಿಗೆ ಸುತ್ತುವರನ್ನು ಪೊಲೀಸರು ತಪಾಸಣೆ ನಡೆಸಿ, ಬೆತ್ತಲೆ ಮಾಡದೆ ತಲೆ ಮೇಲೆ ಬೇವಿನ ಸೊಪ್ಪು ಹೊತ್ತು ತಮ್ಮ ಇಷ್ಟಾರ್ಥ ಹರಕೆ ಹೊತ್ತು ಸೇವೆ ತೀರಿಸಿಕೊಳ್ಳಿ ಎಂದು ಸಲಹೆ ನೀಡಿದರು, ಆದರೂ ಸಹ ಭಕ್ತರು ತಮ್ಮ ಮಕ್ಕಳಿಗೆ ಅರೆ ಬೆತ್ತಲೆಯಲ್ಲಿ ಬೇವಿನ ಉಡುಗೆ ತೊಡಿಸುವ ಮೂಲಕ ತಮ್ಮ ಹರಕೆಯನ್ನು ತೀರಿಸಿದರು. ತುಮಲಿನ ಮಾರಮ್ಮನ ದೇವಸ್ಥಾನಕ್ಕೆ ಭಕ್ತರು ಮೂರು ಸುತ್ತು ಪ್ರದಕ್ಷಣೆ ಹಾಕುವ ಕಾಯಕವಿದ್ದು. ಅದರಂತೆ ಪೂರೈಸಿದರು. ತುಮುಲು ದೇವಸ್ಥಾನದ ಸುತ್ತ ಪ್ರಾಣಿ ಬಲಿ ನಿಷೇದವಿದ್ದ ಕಾರಣ ಭಕ್ತರು 4 ಕಿಮಿ ದೂರದಲ್ಲಿ ಮರ ಗಿಡದ ಆಸರೆ ಪಡೆದು ಹರಕೆ ತೀರಿಸಿ ಪ್ರಸಾದ ಸ್ವಿಕರಿಸಿದರು. ಈ ಜಾತ್ರೆಯಲ್ಲಿ ಚಿತ್ರದುರ್ಗದ ಸಂಸದ ಚಂದ್ರಪ್ಪ ,ಎಂಎಲ್‍ಸಿ ಜಯಮ್ಮ ಬಾಲರಾಜ್, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ , ಎಸ್ ಪಿ ಶ್ರೀನಾಥಜೋಷಿ ತಹಸೀಲ್ದಾರ ಟಿಸಿ. ಕಾಂತರಾಜ್, ಡಿವೈಎಸ್ಪಿ ರೋಷನ್ ಜಮೀರ್ ವೃತ್ತ ನಿರೀಕ್ಷಕ ಎನ್ ತಿಮ್ಮಣ್ಣ ಜನಪ್ರತಿನಿದಿಗಳು ಪಾಲ್ಗೋಡಿದ್ದರು.

Leave a Comment