ಸಂಭ್ರಮದಿಂದ ಈಸ್ಟರ್ ಹಬ್ಬ ಆಚರಣೆ

ಬೆಂಗಳೂರು, ಏ ೨೧- ಕೈಸ್ತರ ಅತ್ಯಂತ ಪ್ರಮುಖ ಹಬ್ಬವೆಂದರೆ ಈಸ್ಟರ್. ಗುಡ್‌ಪ್ರೈಡೇ ನಂತರ ಬರುವ ರವಿವಾರವೇ ಈಸ್ಟರ್ ಹಬ್ಬ. ಇಂದು ರಾಜ್ಯ ಸೇರಿದಂತೆ ವಿಶ್ವದೆಲ್ಲೆಡೆ ಕ್ರೈಸ್ತ ಭಾಂದವರು ಅತ್ಯಂತ ಭಕ್ತಿಯಿಂದ ಈಸ್ಟರ್ ಹಬ್ಬವನ್ನು ಆಚರಿಸಿದರು.  ಬೆಂಗಳೂರಿನ ಸೆಂಟೆ ಮೇರಿ ಚರ್ಚ್, ಸೆಂಟ್ ಫಿಲೋಮಿನಾ ಚರ್ಚ್ ಸೇರಿಮಂತೆ ರಾಜ್ಯಾದ್ಯಾದಂತ ಅನೇಕ ಚರ್ಚ್‌ಗಳಲ್ಲಿ ಕೈಸ್ತ ಬಾಂಧವರು ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರು. ಇನ್ನು ಈಸ್ಟರ್ ಹಬ್ಬಕ್ಕಾಗಿ ಮೊಟ್ಟೆಗೆ ಭಾರಿ ಬೇಡಿಕೆ ಇರುವುದು ಕಂಡು ಬಂತು.

ಯುರೋಪ್ ರಾಷ್ಟ್ರಗಳಲ್ಲಿ ಆಚರಿಸಲಾಗುವ ಒಸ್ಟಾರಾ ಮತ್ತು ಇಸ್ಟಾರ್ ಹಬ್ಬಗಳನ್ನು ಒಂದುಗೂಡಿಸಿ ಈಸ್ಟರ್ ಹಬ್ಬವನ್ನು ಆಚರಿಸಲಾಗುತ್ತದೆ. ಕ್ರಿಸ್ತನ ಪುನರುತ್ಥಾನದ ವಾರ್ಷಿಕ ಸ್ಮರಣೆಗಾಗಿ ಈಸ್ಟರ್ ಹಬ್ಬ ಆಚರಿಸಲಾಗುತ್ತದೆ.

ಭೂಮಿಯ ಮೇಲಿನ ಮನುಷ್ಯರೆಲ್ಲರೂ ಪಾಪದಿಂದ ವಿಮೋಚನೆ ಹೊಂದಲು ಯೇಸು ಕ್ರಿಸ್ತ ಶುಕ್ರವಾರದಂದು ಮರಣಕ್ಕೆ ಅರ್ಪಿಸಿಕೊಂಡರು. ಈಸ್ಟರ್ ಅನ್ನುವುದು ಯೇಸು ಕ್ರಿಸ್ತ ಮನುಷ್ಯರೊಂದಿಗೆ ಸದಾಕಾಲ ಜೀವಿಸುವುದಕ್ಕೆ ಮರಣ ಹೊಂದಿದ ಮೂರನೇ ದಿನ ಪುನರುತ್ಥಾನ ಹೊಂದಿ ಬಂದ ದಿನವಾಗಿದೆ. ಹೀಗಾಗಿ ಇದು ಅತ್ಯಂತ ಮಹತ್ವ ಪಡೆದಿದೆ.

ಮೇಣದ ಬತ್ತಿಗಳನ್ನು ಹಚ್ಚಿ  ಆಚರಣೆ

ಈಸ್ಟರ್ ಹಬ್ಬದ ಪೂರ್ವಭಾವಿಯಾಗಿ ಶನಿವಾರ ರಾತ್ರಿ ಚರ್ಚ್‌ಗಳಲ್ಲಿ ಈಸ್ಟರ್ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ವಿಶೇಷ ಪ್ರಾರ್ಥನೆ ಮತ್ತು ಸಂಭ್ರಮದ ಬಲಿಪೂಜೆ ನೆರವೇರಿತು. ಮಂಗಳೂರಿನ ರೊಜಾರಿಯೊ ಕೆಥೆಡ್ರಲ್‌ನಲ್ಲಿ ಬಿಷಪ್ ರೈ| ರೆ| ಡಾ| ಪೀಟರ್ ಪಾವ್ ಸಲ್ಡಾನ್ಹಾ ಅವರು ಹೊಸ ಅಗ್ನಿಯನ್ನು ಆಶೀರ್ವಚನ ಮಾಡಿ ಈಸ್ಟರ್ ಮೋಂಬತ್ತಿಯನ್ನು ಉರಿಸಿದರು. ಧರ್ಮ ಪ್ರಾಂತದ ಎಲ್ಲ ಚರ್ಚ್ ಗಳಲ್ಲಿ ಮತ್ತು ಪ್ರಾರ್ಥನಾ ಮಂದಿರಗಳಲ್ಲಿ ಶನಿವಾರ ರಾತ್ರಿ ಈಸ್ಟರ್ ಜಾಗರಣೆ ಕಾರ್ಯಕ್ರಮಗಳು ಜರಗಿದ್ದು, ಸಂಬಂಧ ಪಟ್ಟ ಧರ್ಮಗುರುಗಳು ನೇತೃತ್ವ ವಹಿಸಿದ್ದರು. ಬಲಿ ಪೂಜೆಯ ಬಳಿಕ ಎಲ್ಲ ಕ್ರೈಸ್ತರು ಹಬ್ಬದ ಶುಭಾಶಯಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು.

21a2

ಈಸ್ಟರ್ ಮೊಟ್ಟೆ ಆಕರ್ಷಣೆ

ಈ ಹಬ್ಬದಲ್ಲಿ ಈಸ್ಟರ್ ಎಗ್‌ಗೆ ಬಹಳ ಪ್ರಾಮುಖ್ಯತೆ ಇದೆ. ಈಸ್ಟರ್ ಎಗ್ ಅಂದರೆ ತಿನ್ನುವ ಮೊಟ್ಟೆಯಲ್ಲ. ಬದಲಾಗಿ ಮೊಟ್ಟೆಯಾಕಾರದ ಅಲಂಕಾರಿಕ ವಸ್ತುಗಳು. ಈ ಹಬ್ಬದಲ್ಲಿ ಅಲಂಕಾರಿಕ ಮೊಟ್ಟೆಗಳನ್ನು ಉಡುಗೊರೆಯಾಗಿ  ನೀಡುವ ಪದ್ಧತಿ ಇದೆ. ಇದು ಅಲಂಕಾರಿಕ ಉದ್ದೇಶಕ್ಕೆ ಮಾತ್ರ. ಕೆಲವರು ಮೊಟ್ಟೆಯಾಕಾರದ ಚಾಕ್ಲೇಟ್‌ಗಳನ್ನೂ ಕೊಡುತ್ತಾರೆ. ಇನ್ನು ಕೆಲವು ಮೊಟ್ಟೆಯಾಕಾರದ ಡಬ್ಬಿಯೊಳಗೆ ಚಾಕ್ಲೇಟ್, ಕುಕೀಸ್ ಮುಂತಾದವುಗಳನ್ನು ಇಟ್ಟು ಉಡುಗೊರೆ ನೀಡುವುದು ವಾಡಿಕೆ.

Leave a Comment