ಸಂಭಾವನೆ ವಿಚಾರ ಬಾಲಿವುಡ್ ಚಿತ್ರದಿಂದ ರಶ್ಮಿಕಾ ಔಟ್

ಮುಂಬೈ, ಅ ೨೩-ದಕ್ಷಿಣ ಭಾರತದಲ್ಲಿ ಟಾಪ್ ನಟಿಯಾಗಿ ಮೆರೆಯುತ್ತಿದ್ದ ಕನ್ನಡದ ರಶ್ಮಿಕಾ ಮಂದಣ್ಣಗೆ ಸದ್ಯಕ್ಕೆ ವಿವಾದಗಳು ಬಿಡುವಂತೆ ಕಾಣುತ್ತಿಲ್ಲ, ಇದೀಗ ನನಗೆ ಇಷ್ಟೆ ಸಂಭಾವನೆ ಬೇಕು ಎಂದು ಬಾಲಿವುಡ್ ನ ಆಫರ್‌ನ್ನು ತಳ್ಳಿ ಹಾಕುವ ಮೂಲಕ ಮತ್ತೆ ಸುದ್ದಿ ಮಾಡಿದ್ದಾರೆ.

ಗೀತ ಗೋವಿಂದಂ ಹಾಗೂ ಡಿಯರ್ ಕಾಮ್ರೆಡ್ ಚಿತ್ರಗಳಲ್ಲಿ ಅಭಿನಯ ಕಂಡು ಬಾಲಿವುಡ್ ರಶ್ಮಿಕಾಗೆ ಬುಲಾವ್ ನೀಡಿತ್ತು. ಆದರೆ ರಶ್ಮಿಕಾ ಕೇಳಿದ ಸಂಭಾವನೆಯಿಂದ ಆಕೆಯನ್ನು ಚಿತ್ರಯನ್ನು ಚಿತ್ರದಿಂದ ಕೈಬಿಟ್ಟಿದೆ.

ದಕ್ಷಿಣ ಭಾರತದ ನಟಿಯರಿಗೆ ಬಾಲಿವುಡ್‌ನಲ್ಲಿ ನಟಿಸಿ ಸೈಎನಿಸಿಕೊಳ್ಳಬೇಕೆಂಬ ಆಸೆ ಇದ್ದೆ ಇರುತ್ತದೆ. ಆದರೆ ರಶ್ಮಿಕಾ ಮಾತ್ರ ಸಂಭಾವನೆ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುತ್ತಿಲ್ಲ ಎಂದು ಕಾಣಿಸುತ್ತಿದೆ.
ಶಾಹಿದ್ ಜೊತೆ ಟಾಲಿವುಡ್‌ನ ಜರ್ಸಿ ಸಿನಿಮಾದಲ್ಲಿ ನಟಿಸುವಂತೆ ರಶ್ಮಿಕಾ ಆಫರ್ ಬಂದಿತ್ತು. ಈ ಚಿತ್ರದಲ್ಲಿ ನಟಿಸಲು ನನಗೆ ಅಷ್ಟೇ ಸಂಭಾವನೆ ಬೇಕು ಅಂತ ಡಿಮ್ಯಾಂಡ್ ಮಾಡಿದ್ರಂತೆ. ಹೀಗಾಗಿ ನೀವ್ ಕೆಳಿದಷ್ಟೆಲ್ಲಾ ಕೊಡೋಕಾಗಲ್ಲಾ ಅಂತ ರಶ್ಮಿಕಾಗೆ ಶಾಹಿದ್ ಮೂವಿಯಿಂದ ಗೆಟ್ಪಾಸ್ ಕೊಡಲಾಗಿದೆ. ಆಕೆ ಜಾಗಕ್ಕೆ ಮತ್ತೊಬ್ಬ ನಾಯಕಿಯನ್ನು ಆಯ್ಕೆ ಮಾಡಿದೆಯಂತೆ ಚಿತ್ರತಂಡ.

ಅಷ್ಟೆ ಅಲ್ಲ ಬಿಟೌನ್ ಆಫರ್ ಕೈ ಚೆಲ್ಲಿರೋ ರಶ್ಮಿಕಾ ಮಂದಣ್ಣ ಇತ್ತ ಕಾಲಿವುಡ್‌ನಲ್ಲಿ ಮತ್ತೊಂದು ಭರ್ಜರಿ ಅವಕಾಶವನ್ನು ಕಳೆದುಕೊಂಡಿದ್ದಾರೆ. ಕಾಲಿವುಡ್ ಸ್ಟಾರ್ ಹೀರೋ ಇಳಯ ದಳಪತಿ ವಿಜಯ್ ಜೊತೆ ರಶ್ಮಿಕಾ ಸಿನಿಮಾ ಮಾಡುವ ಅವಕಾಶದಿಂದಲೂ ವಂಚಿತರಾಗಿದ್ದಾರೆ. ಕಿರಿಕ್ ಬ್ಯೂಟಿ ರಶ್ಮಿಕಾ ಮಂದಣ್ಣ ಸೂಪರ್ ಸ್ಟಾರ್ ಮಹೇಶ್ ಬಾಬು ’ಸರಿಲೇರು ನೀಕೆವರು’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾದ ಜೊತೆಗೆ ರಶ್ಮಿಕಾಗೆ ಮತ್ತೊಂದು ಆಫರ್ ಹುಡುಕಿಕೊಂಡು ಬಂದಿತ್ತು. ನಾಗಚೈತ್ಯ ಸಿನಿಮಾದಲ್ಲಿ ರಶ್ಮಿಕಾಗೆ ನಿರ್ಮಾಪಕ ದಿಲ್ ರಾಜ ಆಫರ್ ಕೊಟ್ಟಿದ್ದರು. ಅಲ್ಲಿಯೂ ಮತ್ತದೇ ಸಂಭಾವನೆ ವಿಚಾರಕ್ಕೆ ಕಿರಿಕ್ ಆಗಿದೆ. ಹೀಗಾಗಿ ನಾಗಚೈತ್ಯ ಸಿನಿಮಾದಿಂದಲೂ ಔಟ್ ಆಗಿದ್ದಾರೆ.

Leave a Comment