ಸಂಪೂರ್ಣ್‌ನಿಂದ ಕ್ರಿಸ್ಮಸ್ ಮೇಳ

ಕರಕುಶಲ ವಸ್ತುಗಳು ಹಾಗೂ ಕರಕುಶಲ ಕರ್ಮಿಗಳಿಗಾಗಿಯೇ ರಚಿಸಿರುವ ಸೊಸೈಟಿಯಾಗಿರುವ ಸಂಪೂರ್ಣ್, ಡಿ ೧ರಂದು ಜಯಮಹಲ್ ಪ್ಯಾಲೇಸ್ ಹೋಟೆಲ್‌ನಲ್ಲಿ ಕ್ರಿಸ್ಮಸ್ ಹಬ್ಬದ ಅಂಗವಾಗಿ “ಸೋಲ್ ಫ್ಲೀ’ ಮಾರುಕಟ್ಟೆ ಮೇಳವನ್ನು ಆಯೋಜಿಸಿದೆ. ಬೆಳಗ್ಗೆ ೧೧ ಗಂಟೆಗೆ ಆರಂಭಗೊಂಡು ರಾತ್ರಿ ೯ ಗಂಟೆಯವರೆಗೆ ಈ ಮೇಳ ನಡೆಯಲಿದೆ. ಗೃಹಾಲಂಕಾರ ವಸ್ತುಗಳು, ಆಭರಣಗಳು ಹಾಗೂ ಕರಕುಶಲ ವಸ್ತುಗಳನ್ನು ಮಾರಾಟ ಮಾಡುವ ಸುಮಾರು ೧೦೦ಕ್ಕೂ ಅಧಿಕ ಮಳಿಗೆಗಳು ಈ ಸೋಲ್ ಫ್ಲೀ ಮಾರ್ಕೇಟ್‌ನಲ್ಲಿ ಸ್ಥಾಪನೆಯಾಗಲಿದ್ದು, ಭಾನುವಾರದ ಡೇಔಟ್‌ಗೆ ಪ್ರಶಸ್ತ ತಾಣವಾಗಿ ಮಾರ್ಪಾಟಾಗಲಿದೆ ಹಾಗೂ ಕೊಳ್ಳುವಿಕೆಯ ನಿರೀಕ್ಷೆಯನ್ನು ತಣಿಸಬಲ್ಲ ಜಾಗವಾಗಿರಲಿದೆ.

ಕ್ರಿಸ್ಮಸ್ ಹಾಗೂ ಹೊಸ ವರ್ಷದಲ್ಲಿ ಆಯೋಜಿಸುವ ಪಾರ್ಟಿಗಳಲ್ಲಿ ಪಾಲ್ಗೊಳ್ಳಲು ವೆಸ್ಟರ್ನ್ ಬಟ್ಟೆಗಳನ್ನು ಧರಿಸುವ ಉದ್ದೇಶವಿದ್ದರೆ ಸೋಲ್ ಫ್ಲೀ ಮಾರ್ಕೆಟ್‌ನಲ್ಲಿ ಮಕ್ಕಳು, ಮಹಿಳೆಯರು ಹಾಗೂ ಪುರುಷರಿಗೆ ಅತ್ಯುತ್ತಮ ವಸ್ತ್ರಗಳು ಲಭ್ಯ ಇರಲಿವೆ. ಭಾರತೀಯ ವರ್ಣಾಲಂಕಾರದ ಬಟ್ಟೆಗಳು ಬೇಕಾದರೆ ಇಲ್ಲಿ ಸ್ಥಾಪನೆಯಾಗುವ ಅಮೊದ್ ಮಳಿಗೆಗೆ ಭೇಟಿ ನೀಡಿ ವಿಶಾಲ ಶ್ರೇಣಿಯ ಶರ್ಟ್‌ಗಳು ಹಾಗೂ ಸ್ಕರ್ಟ್‌ಗಳನ್ನು ಖರೀದಿಸಬಹುದು.

ಕ್ರಿಸ್ಮಸ್ ಆಚರಣೆಯ ಅಲಂಕಾರಕ್ಕಾಗಿ ಇನ್ನೂ ಯಾವುದೇ ವಸ್ತುಗಳನ್ನು ಖರೀದಿ ಮಾಡಿಲ್ಲವೇ? ಹಾಗಾದರೆ ಖಂಡಿವಾಗಿಯೂ ಸೋಲ್ ಫ್ಲೀ ಮಾರ್ಕೆಟ್‌ಗೆ ಭೇಟಿ ನೀಡಿ. ಕ್ರಿಸ್ಮಸ್ ಥೀಮ್ ಹೊಂದಿರುವ ನಾನಾ ಬಗೆಯ ಪಿಲ್ಲೊಗಳು, ಕ್ಯಾಂಡಲ್‌ಗಳು, ಗೋಡೆ ವರ್ಣಗಳು, ವ್ರೇತ್‌ಗಳು ಸೇರಿದಂತೆ ಇನ್ನಲವು ವಸ್ತುಗಳು ದೊರೆಯುತ್ತವೆ. ಒಳಾಂಗಣ ವಿನ್ಯಾಸದಲ್ಲಿ ಖ್ಯಾತಿ ಪಡೆದಿರುವ ಸಂಸ್ಥೆಯಾಗಿರುವ ಲ್ಯಾಂಡ್ ಸ್ಟುಡಿಯೊ ಕೂಡ ಮೇಳದಲ್ಲಿ ಮಳಿಗೆಯನ್ನು ಸ್ಥಾಪನೆ ಮಾಡಲಿದ್ದು, ಅಡುಗೆಮನೆಯ ವಸ್ತುಗಳು, ಟ್ರಿಂಕೆಟ್‌ಗಳು ಹಾಗೂ ಇನ್ನಿತರ ಅಲಂಕಾರಿಕ ವಸ್ತುಗಳು ದೊರೆಯಲಿದೆ.

ಪುಸ್ತಕ ಪ್ರೇಮಿಗಳಿಗೂ ಇಲ್ಲೊಂದು ಸದಾವಕಾಶ ಇದೆ. “ಹುಕ್ಡ್ ಆನ್ ಬುಕ್ಸ್” ಸ್ಟೋರ್‌ನಿಂದ ನೀವು ಪುಸ್ತಕವನ್ನು ಖರೀದಿ ಮಾಡಬಹುದು, ಬಾಡಿಗೆಗೆ ಪಡೆದುಕೊಳ್ಳಬಹುದು. ಓದಿ ಆನಂದಿಸಲೂ ಅವಕಾಶವಿದೆ.

ದಿನ ಪೂರ್ತಿ ಶಾಪಿಂಗ್ ಮಾಡಿ ಸುಸ್ತಾದರೆ ಒಂದು ಕಡೆ ಬೆನ್ನೊರಗಿಸಿ ಕುಳಿತುಕೊಳ್ಳಿ. ಬ್ಯಾಂಡ್ಸ್ ಸೇರಿದಂತೆ ನಿಮಗೆ ಪ್ರಿಯವಾಗುವ ಲೈವ್ ಮ್ಯೂಸಿಕ್‌ಗಳು ಪ್ರದರ್ಶನಗೊಳ್ಳಲಿವೆ. ಇನ್ನೂ ಬೇಕಾದರೆ ನಾಲಗೆಯಲ್ಲಿ ನೀರೂರಿಸುವ ಆಹಾರವೂ ನಿಮಗೆ ದೊರೆಯಲಿದೆ. ಸುಂದರ ಭಾನುವಾರವನ್ನು ಸವೆಯಲು ಸೋಲ್ ಫ್ಲೀ ಮಾರ್ಕೆಟ್‌ಗಾಗಿ ನಿಮ್ಮ ದಿನವನ್ನು ಮೀಸಲಿಡಿ.

ಡಿಸೆಂಬರ್ ೧ರಂದು
ಸಮಯ: ಬೆಳಗ್ಗೆ ೧೧- ರಾತ್ರಿ ೯ ಗಂಟೆಯವರೆಗೆ
ಎಲ್ಲಿ: ಜಯಮಹಲ್ ಪ್ಯಾಲೇಸ್ ಹೋಟೆಲ್,
ಸಂಪರ್ಕ: ೯೭೪೨೨೦೪೦೦೨

Leave a Comment