ಸಂಪುಟ  ವಿಸ್ತರಣೆ ಸಿಎಂ ಮಾತು ಉಳಿಸಿಕೊಳ್ಳಲಿದ್ದಾರೆ:  ಡಿವಿಎಸ್

ಉಡುಪಿ, ಜ 20 – ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ  ಸಂಪುಟ  ವಿಸ್ತರಣೆ ಕುರಿತು ನೀಡಿರುವ ಎಲ್ಲಾ ಭರವಸೆ  ಈಡೇರಿಸಲಿದ್ದಾರೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಸದಾನಂದ ಗೌಡ ಆಶಯ ವ್ಯಕ್ತಪಡಿಸಿದ್ದಾರೆ .

ಕೃಷ್ಣ ಮಠಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರಿಗೆ  ಈ ವಿಷಯ ತಿಳಿಸಿದರು., ಸಂಪುಟ  ವಿಸ್ತರಣೆಗೆ ಸಂಬಂಧಿಸಿದ ನಿರ್ಧಾರವನ್ನು ಪಕ್ಷದ ಹಿರಿಯ ನಾಯಕರ ಅನುಮೋದನೆ ಪಡೆದು ತೀರ್ಮಾನಿಸಲಾಗುವುದು ಸಿಎಂ  ವಿದೇಶ ಪ್ರವಾಸದಿಂದ ಹಿಂದಿರುಗಿದ ನಂತರ ವಿಸ್ತರಣೆ ನಡೆಯಲಿದೆ ಎಂದು ಹೇಳಿದರು.

ಪ್ರಸ್ತುತ ಸಿಎಎ ವಿರೋಧಿ ಮತ್ತು ಎನ್‌ಆರ್‌ಸಿ ಪ್ರತಿಭಟನೆಗಳ ಕುರಿತು ಮಾತನಾಡಿದ ಅವರು, ಕಾನೂನಿನ ಅರಿವಿನ ಕೊರತೆಯಿಂದಾಗಿ ಕೆಲವರು ಇದನ್ನು ವಿರೋಧಿಸುತ್ತಿದ್ದಾರೆ ಎಂದರು.

ಈ ನಡುವೆ  ಉಪ ಮುಖ್ಯಮಂತ್ರಿ  ಗೋವಿಂದ್ ಕಾರಜೋಳ,  ಹೊಸ, ಹೆಚ್ಚುವರಿ ಉಪಮುಖ್ಯುಮಂತ್ರಿ  ಹುದ್ದೆ ಕುರಿತು ಮಾತನಾಡಿ,  ಈ ವಿಷಯದ ಬಗ್ಗೆ ಪಕ್ಷದ ಹೊರಗೆ ಚರ್ಚೆ ನಡೆಯುತ್ತಿದೆ ಆದರೆ  ಪಕ್ಷ ಈ ವಿಚಾರವಾಗಿ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ಎಲ್ಲ ನಾಯಕರು ತಲೆಭಾಗಲಿದ್ದಾರೆ ಎಂದು ಅವರು ಹೇಳಿದರು.

 

Leave a Comment