ಸಂಪಿಗೆ ಬಿದ್ದು ಮಗು ಸಾವು

ತುಮಕೂರು, ಫೆ. ೨೩- ಮನೆಯ ಮುಂದಿನ ನೀರಿನ ಸಂಪಿಗೆ ಬಿದ್ದು ಮಗು ಸಾವನ್ನಪ್ಪಿರುವ ಘಟನೆ ನಗರದ ಹನುಮಂತಪುರದಲ್ಲಿರುವ ಬೈಲಾಂಜನೇಯ ಸ್ವಾಮಿ ದೇವಾಲಯದ ಹತ್ತಿರ ನಡೆದಿದೆ.
ಮನೆಯ ಹೊರಗೆ ಆಟವಾಡುತ್ತಿದ್ದ ಅರನಾ (೨) ಎಂಬ ಮಗುವೇ ಮೃತಪಟ್ಟಿರುವ ದುರ್ದೈವಿ. ಮನೆಯ ಮುಂಭಾಗದಲ್ಲಿದ್ದ ನೀರಿನ ತೊಟ್ಟಿಗೆ ಮಗು ಆಟವಾಡುತ್ತಲೇ ಹೋಗಿ ಬಿದ್ದಿದೆ. ಮನೆಯ ಒಳಗೆ ಕೆಲಸ ಮಾಡುತ್ತಿದ್ದ ತಾಯಿ ಕಾವ್ಯ ಹೊರಗೆ ಬಂದು ನೋಡಿದಾಗ ಮಗು ನೀರಿನ ತೊಟ್ಟಿಯೊಳಗೆ ಬಿದ್ದಿರುವುದನ್ನು ನೋಡಿ ಗಾಬರಿಗೊಂಡು ಅಕ್ಕಪಕ್ಕದವರನ್ನು ಕರೆದಿದ್ದಾರೆ.
ಸ್ಥಳೀಯರು ಮಗುವನ್ನು ನೀರಿನ ತೊಟ್ಟಿಯಿಂದ ತೆಗೆದು ದೇಹದಲ್ಲಿ ಸೇರಿದ್ದ ನೀರನ್ನು ಹೊರಗೆ ತೆಗೆಯಲು ಪ್ರಯತ್ನ ಮಾಡಿದ್ದಾರೆ. ಅಷ್ಟೊತ್ತಿಗಾಗಲೇ ಸಮಯ ಮೀರಿದ್ದರಿಂದ ಮಗು ಕೊನೆಯುಸಿರೆಳೆದಿತ್ತು. ವಿಜಯೇಂದ್ರ ಮತ್ತು ಕಾವ್ಯ ದಂಪತಿಗಳ ಮುದ್ದಿನ ಹೆಣ್ಣು ಮಗು ಅರನಾಗೆ ೨ ವರ್ಷ ೨ ತಿಂಗಳು. ಮಗುವನ್ನು ಕಳೆದುಕೊಂಡ ಪೋಷಕರ ಹಾಗೂ ಸಂಬಂಧಿಗಳ ರೋಧನ ಮುಗಿಲು ಮುಟ್ಟಿತ್ತು.
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.

 

Leave a Comment