ಸಂತ್ರಸ್ಥರಿಗೆ ಬ್ರಾಹ್ಮಣ ಸಮಾಜದ ನೆರವು

ದಾವಣಗೆರೆ, ಆ. 14 – ವರುಣನ ಅವಕೃಪೆಯಿಂದ ಹಾನಿಗೊಳಗಾದ ಸಂತ್ರಸ್ಥರಿಗೆ ಹರಿಹರ ಬ್ರಾಹ್ಮಣ ಸಮಾಜದಿಂದ ನೆರವು ನೀಡಲಾಗುತ್ತಿದೆ ಎಂದು ಸಂಘದ ಜಿಲ್ಲಾ ಉಪಾಧ್ಯಕ್ಷ ಎಸ್.ಕೆ.ಕೊಣ್ಣೂರು ಸುದ್ದಿಗೋಷ್ಟಿಯಲ್ಲಿಂದು ತಿಳಿಸಿದರು.
ಸಂತ್ರಸ್ಥರ ನೆರವಿಗೆ ನಾವುಗಳು ಸದಾ ಸಿದ್ದರಿದ್ದೇವೆ. ಈಗಾಗಲೇ 25 ಸಾವಿರ ಚಪಾತಿ, ರೊಟ್ಟಿ, ಚಟ್ನಿಪುಡಿಗಳು, ನೀರು, ಬಟ್ಟೆ ಸೇರಿದಂತೆ ಅವಶ್ಯಕವಿರುವ ಸಾಮಗ್ರಿಗಳನ್ನು ಸಂಗ್ರಹಿಸಿ ಜಿಲ್ಲಾಡಳಿತಕ್ಕೆ ನೀಡುತ್ತಿದ್ದೇವೆ. ನಮ್ಮ ಸಮಾಜ ಬಾಂಧವರು ಸೇರಿದಂತೆ ಸಾರ್ವಜನಿಕರೂ ಸಹ ಈ ಕಾರ್ಯಕ್ಕೆ ಕೈಜೋಡಿಸಿದ್ದಾರೆ ಎಂದರು.ಸುದ್ದಿಗೋಷ್ಟಿಯಲ್ಲಿ ಎಂ.ಆರ್.ಸತ್ಯನಾರಾಯಣ, ಬಿ.ಜಿ.ಜೋಶಿ, ಅನಂತನಾಯ್ಕ್, ಎಸ್.ಆರ್.ನಾಡಿಗ್ ಸಿ.ಜಿ.ಕುಲಕರ್ಣಿ, ಸೂಗುರು ಉಪಸ್ಥಿತರಿದ್ದರು.

Leave a Comment