ಸಂತ್ರಸ್ತರ ನೆರವಿಗಾಗಿ ಹಾಸ್ಯ ಕಾರ್ಯಕ್ರಮ

ಬೆಂಗಳೂರು, ಸೆ. ೪- ಕೊಡಗು ಮತ್ತು ಕೇರಳದಲ್ಲಿ ನಡೆದ ನೈಸರ್ಗಿಕ ವಿಕೋಪಕ್ಕೆ ತುತ್ತಾಗಿರುವವರಿಗೆ ನೆರವು ನೀಡುವ ಉದ್ದೇಶದಿಂದ ನಿಧಿ ಸಂಗ್ರಹಿಸಲು ಇಂದು ಸಂಜೆ ನಗರದ ಮಲ್ಲೇಶ್ವರಂನ ಸೇವಾ ಸದನದಲ್ಲಿ ಹಾಸ್ಯ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಶಿವಮೊಗ್ಗದ ಕಲಾ ಸಂಸ್ಥೆ “ಕಲಾ ಜ್ಯೋತಿ” ಯ ಆಶ್ರಯದಲ್ಲಿ ಸಂಜೆ 6 ರಿಂದ 9 ಗಂಟೆಯವರೆಗೆ ಈ ಕಾರ್ಯಕ್ರಮ ನ‌ಡೆಯಲಿದೆ.
ಹಾಸ್ಯ ಪಟುಗಳಾದ ಮಾತನಾಡುವ ಗೊಂಬೆ ಖ್ಯಾತಿಯ ಇಂದುಶ್ರೀ, ಹನಿಗವನ ಸರದಾರ ದುಂಡಿ ರಾಜ್, ನಟ ಬಾಬು ಹಿರಣ್ಣಯ್ಯ, ಅಣಕು ರಾಮನಾಥ್, ಮತ್ತು ಇತರರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ರಮೇಶ್ ಜೋಯಿಸ್ ಮೊ. 94483 53960 ಇಲ್ಲಿಗೆ ಸಂಪರ್ಕಿಸುವಂತೆ ಕೋರಲಾಗಿದೆ.

Leave a Comment