ಸಂತ್ರಸ್ತರಿಗೆ ಅಗತ್ಯ ವಸ್ತುಗಳ ಪೂರೈಕೆ

ದಾವಣಗೆರೆ.ಆ.23; ಕಳೆದ ಕೆಲವು ವಾರಗಳಿಂದ ಆದ ಮಳೆ ವೈಪರೀತ್ಯಕ್ಕೆ ಕೇರಳ ಹಾಗೂ ಕೊಡಗು ನೆರೆ ಹಾವಳಿಯಿಂದ ನಲುಗಿಹೋಗಿದೆ ಅಪಾರ ಪ್ರಮಾಣದ ಜೀವಹಾನಿಯೂ ಸಂಭವಿಸಿದ್ದು ಸುಮಾರು ಕುಟುಂಬಗಳು ಮನೆಗಳನ್ನು ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಈ ಹಿನ್ನಲೆಯಲ್ಲಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯೂನಿಷ್ಟ್) ಪಕ್ಷವು ಕೇರಳ ಹಾಗೂ ಕೊಡಗಿನ ನೆರೆ ಸಂತ್ರಸ್ತರ ಸಹಾಯಾರ್ಥ ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ನೆರವು ನೀಡಿದೆ. ಉತ್ತಮವಾಗಿ ಸ್ಪಂದಿಸಿದ ನಗರದ ಜನತೆ ನೆರೆ ಸಂತ್ರಸ್ತರಿಗೆ ಅಪಾರವಾದ ಆಹಾರ ಸಾಮಗ್ರಿಗಳು, ಬಟ್ಟೆಗಳು ಹಾಗೂ ಇನ್ನಿತರ ಅಗತ್ಯ ವಸ್ತುಗಳನ್ನು ನೀಡುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ ಎಂದು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯೂನಿಷ್ಟ್) ಪಕ್ಷದ ಜಿಲ್ಲಾ ಸಂಚಾಲಕರಾದ ಕಾಂ.ಮಂಜುನಾಥ್ ಕೈದಾಳೆ ತಿಳಿಸಿದರು
ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯೂನಿಷ್ಟ್) ಪಕ್ಷದವತಿಯಿಂದ ಶೇಖರಣೆಯಾದ ಒಟ್ಟು ಸಾಮಾಗ್ರಿಗಳನ್ನು ರೈಲಿನ ಮುಖಾಂತರ ಕೇರಳದ ಕೊಟ್ಟಾಯಂ ನಗರಕ್ಕೆ ಕಳುಹಿಸಲಾಯಿತು ಹಾಗೂ ನೆರೆ ಸಂತ್ರಸ್ತರ ಸಹಾಯಕ್ಕಾಗಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯೂನಿಷ್ಟ್) ಪಕ್ಷದ ಕಾರ್ಯಕರ್ತರಾದ ಪರಶುರಾಮ್, ಗುರು ಹರಿಪ್ರಸಾದ್, ಹಾಗೂ ಚಂದ್ರಶೇಖರನ್ ರವರನ್ನು 10ದಿನಗಳವರೆಗೆ ಕೊಟ್ಟಾಯಂ ನಗರಕ್ಕೆ ಕಳುಹಿಸಾಗಿದೆ ಎಂದು ಹೇಳಿದರು.

Leave a Comment