ಸಂಡೂರಿನ ನ್ಯಾಯಾಲಯದಲ್ಲಿ ಈ-ಲೈಬ್ರರಿ ಚಾಲನೆ ಜ್ಞಾನಾರ್ಜನೆಗಾಗಿ ಇಂಗ್ಲೀಷ್ ಕಲಿಯಬೇಕೀದೆ:ಜಿ.ನರೇಂದರ್

ಸಂಡೂರು, ಸೆ.8: ಸಂಡೂರಿನ ವಕೀಲರ ಸಂಘದಲ್ಲಿ ಈ-ಲೈಬ್ರರಿ ಉದ್ಘಾಟನೆಯಾಗುತ್ತಿರುವ ಪ್ರಮುಖ ಗುರಿ ಇಂಗ್ಲೀಷ್ ಭಾಷೆಯ ಕಲಿಕೆಗಾಗಿ. ಕೆಳ ನ್ಯಾಯಾಲಯದಲ್ಲಾಗಲಿ, ಉಚ್ಛನ್ಯಾಯಾಲಯದಲ್ಲಿ ಆಗಲಿ ನ್ಯಾಯಾಧೀಶರು ಕನ್ನಡದಲ್ಲಿ ತೀರ್ಪು ಕೊಡಲು ಸಾಧ್ಯವಿಲ್ಲ. ಕಕ್ಷಿದಾರರಿಗೆ ನ್ಯಾಯ ಒದಗಿಸಲು ವಕೀಲರ ಶ್ರಮ ಅಗತ್ಯವಿದ್ದು ಇಂಗ್ಲೀಷ್ ಭಾಷೆಯನ್ನು ಜ್ಞಾನಾರ್ಜನೆಗೆ ಕಲಿಯಬೇಕಾಗಿದೆ. ನಾನು ಕನ್ನಡ ಭಾಷೆ, ಸಾಹಿತ್ಯದ ಅಭಿಮಾನಿ ನಿಮ್ಮ ಜ್ಞಾನಾರ್ಜನೆಗಾಗಿ ನಾನು ಇಂಗ್ಲೀಷ್ ಭಾಷೆಯನ್ನ ಮಾತನಾಡಿದ್ದೇನೆ ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳು, ಬಳ್ಳಾರಿ ಜಿಲ್ಲೆಯ ಆಡಳಿತಾತ್ಮಕ ನ್ಯಾಯಮೂರ್ತಿಗಳು ಆದ ಜಿ.ನರೇಂದರ್ ಅವರು ತಿಳಿಸಿದರು.

ಅವರು ಸಂಡೂರಿನ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಜಿಲ್ಲೆಯ ಮೊದಲ ನ್ಯಾಯಾಂಗ ಇಲಾಖೆ ಮತ್ತು ವಕೀಲರ ಸಂಘ ಸಂಡೂರು ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಇ-ಲೈಬ್ರರಿ ಉದ್ಘಾಟಿಸಿ ಮಾತನಾಡಿದರು.

ನಾನು ಸಂಡೂರಿಗೆ 15-20 ವರ್ಷಗಳ ಹಿಂದೆ ಬಂದಿದ್ದೆ ತದನಂತರ ಸಂಡೂರಿಗೆ ಸೆಪ್ಟೆಂಬರ್ ತಿಂಗಳು ಶ್ರಾವಣ ಮಾಸದಲ್ಲಿ ಮತ್ತೆ ಬಂದಿದ್ದೇನೆ. ನಾನು ಪರಿಸರ ಪ್ರೇಮಿ ಎಂದು ಜಿ.ನರೇಂದರ್ ತಿಳಿಸಿದರು.

ಸಂಡೂರಿನ ಜನ ಸಂಸ್ಕೃತಿ ಉಳ್ಳವರು. ನಿಜ ಕಾನೂನನ್ನ ಹೇಗೆ ಅರಿಯಬೇಕಾಗಿದೆ. ಕಾನೂನು ಹೇಗಿದೆ ಎಂದು ತಿಳಿಸುವ ವಿಧಾನ ಇ-ಲೈಬ್ರರಿಯ ಮುಖ್ಯ ಉದ್ದೇಶವಾಗಿದೆ. ಕಲಿಕೆಗೆ ಒತ್ತಾಯ ಇಲ್ಲ. ಇಂಗ್ಲೀಷ್ ಭಾಷೆ ಬಗ್ಗೆ ಅರಿವು ಬಹಳ ಮುಖ್ಯ ಇ-ಲೈಬ್ರರಿಯಿಂದ ಕೈ ಬೆರಳಿಗೆ ಜ್ಞಾನಾರ್ಜನೆಗೆ ಸಿಗಲು ಸಾಧ್ಯ ಸಂಡೂರಿನ ಜನತೆ ನಾಗರೀಕತೆಗೆ ಹೆಸರು ವಾಸಿಯಾಗಿದ್ದು ಕಿರೀಟ ಪ್ರಾಯರಾಗಿದ್ದರೆಂದು ತಿಳಿಸಿದರು.

ಪ್ರಧಾನ ಜಿಲ್ಲಾ ಮತ್ತು ಸತ್ರನ್ಯಾಯಾಧೀಶ ಬಳ್ಳಾರಿಯ ಬಿ.ಸಿ.ಬಿರಾದಾರ್ ಮಾತನಾಡಿ, ಬೆಂಗಳೂರಿನ ನ್ಯಾಯಮೂರ್ತಿಗಳು ಬಳ್ಳಾರಿ-ಕೊಪ್ಪಳ ಆಡಳಿತಾತ್ಮಕವಾಗಿ ಕರ್ವತ್ಯ ನಿರ್ವಹಿಸುತ್ತಿದ್ದು ಆಡಳಿತಾತ್ಮಕವಾಗಿ ಬಳ್ಳಾರಿ ಜಿಲ್ಲೆಗೆ ಆಗಮಿಸಿ ಸಂಡೂರಿನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿರುವುದು ಸಂತಸ ತಂದಿದೆ. ಜ್ಞಾನದ ದೀವಿಗೆಯನ್ನು ಸಂಡೂರಿನ ಜನತೆಗೆ ತೋರಿಸಿದ ಹರಿಕಾರರು ಎಂದು ತಿಳಿಸಿದರು.

ಕರ್ನಾಟಕ ವಕೀಲ ಪರಿಷತ್ ಸದಸ್ಯ ಜೆ.ಎಂ.ಅನಿಲ್ ಕುಮಾರ ಮಾತನಾಡಿ, ಒಗ್ಗಟ್ಟು-ಶಿಸ್ತು-ಸೃಜನಾತ್ಮಕವಿದ್ದಲ್ಲಿ ಎಲ್ಲಾ ಕಾರ್ಯಗಳು ಸುಗಮವಾಗಲು ಸಾಧ್ಯ ಎಂದು ತಿಳಿಸಿದರು.

ಬಾರ್ ಅಸೋಷಿಯೇಷನ್ ಅಧ್ಯಕ್ಷ ಬಿ.ನಾರಾಯಣಾಚಾರ್ ಮಾತನಾಡಿ, ಸಂಡೂರಿನಲ್ಲಿ ಕೇವಲ 2 ದಿನ ಮಾತ್ರ ಸಿನಿಯರ್ ಡಿವಿಜನ್ ಕರ್ತವ್ಯ ನಿರ್ವಹಿಸುತ್ತಿದ್ದು ಪ್ರತಿದಿನ ಕರ್ತವ್ಯ ನಿರ್ವಹಿಸುವಂತಾಗಬೇಕು ಎಂದು ಮನವಿ ಮಾಡಿದರು.

ಹೊಸಪೇಟೆಯ ಸಹಾಯಕ ನ್ಯಾಯಮೂರ್ತಿ ರಾಜಶೇಖರ, ಉಪಾಧ್ಯಕ್ಷ ಅರಳಿ ಮಲ್ಲಪ್ಪ, ಕಾರ್ಯದರ್ಶಿ ದಾದಾಪೀರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದರು. ಗುಡೇಕೋಟೆ ನಾಗರಾಜ ನಿರೂಪಿಸಿದರೆ ಟಿ.ಎಂ.ಶಿವಕುಮಾರಸ್ವಾಮಿ ಸ್ವಾಗತಿಸಿದರು. ಹೆಚ್.ಕುಮಾರಸ್ವಾಮಿ ವಂದಿಸಿದರೆ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಮಕ್ಕಳಿಂದ ನಾಡಗೀತೆ ಬಿ.ಎಸ್.ಮಂಜುನಾಥ, ವಕೀಲರಿಂದ ಪ್ರಾರ್ಥನೆ ನೆರವೇರಿತು.

Leave a Comment