ಸಂಜೆ ಮಳೆಗೆ ಬೆಚ್ಚಿದ ಜನರು

 

ಬೆಂಗಳೂರು. ಮೇ, 26- ನಗರದಲ್ಲಿ ವರುಣ ಮತ್ತೆ ಆರ್ಭಟಿಸಿದ್ದು. ಸಂಜೆ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಗೆ ಜನರು ಬೆಚ್ಚಿ ಬಿದ್ದಿದ್ದಾರೆ

ಸಂಜೆ ವೇಳೆ ಗುಡುಗು ಸಹಿತ ಬಂದ ಮಳೆಗೆ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದವರು ದಾರಿಯಲ್ಲಿಯೇ ಸಿಲುಕಿ ನೆನೆದು ತೊಪ್ಪೆ ಯಾಗಿದ್ದಾರೆ.

ಕಚೇರಿಯಿಂದ ಹೊರಡುವ ವೇಳೆಗೆ ಸರಿಯಾಗಿ ಅಬ್ಬರಿಸಿದ ವರುಣನ ರಭಸಕ್ಕೆ ಬೆಚ್ಚಿ ಬಿದ್ದ ಜನತೆ ಬಸ್ ಸ್ಟಾಂಡ್. ಮರ ಗಳ ಆಶ್ರಯ ಪಡೆದರು.

ಶಿವಾನಂದ. ಕೆ ಆರ್ ವೃತ್ತ. ಹಡ್ಸನ್ ವೃತ್ತ, ಬಸವನಗುಡಿ ರಾಜಾಜಿನಗರ, ಮೆಜೆಸ್ಟಿಕ್ ಕೊರಮಂಗಲ. ಬಿಟಿಎಂ ಲೇ ಔಟ್ ಅಲ್ಲದೆ ಯಶವಂತಪುರ. ನಾಗರ ಬಾವಿ ಕೆಂಗೇರಿ ಮೈಸೂರು ರಸ್ತೆ ಸೇರಿದಂತೆ ನಗರದ ಹಲವು ಭಾಗಗಳಲ್ಲಿ ಧಾರಾಕಾರ ಮಳೆ ಸುರಿದು ರಸ್ತೆಗಳೆಲ್ಲ ಜಲಾವೃತಗೊಂಡು ವಾಹನ ಸವಾರರು ಪರದಾಡ ಬೇಕಾಯಿತು.

Share

Leave a Comment