ಸಂಜನಾ ಹಾಟ್ ಪೋಟೋ ಶೂಟ್ ವೈರಲ್

 

ಬೆಂಗಳೂರು, ನ ೨೭- ಗಂಡ-ಹೆಂಡತಿ ಚಿತ್ರದಲ್ಲಿ ಬೋಲ್ಡ್ ಆಗಿ ನಟಿಸಿ ಭಾರಿ ಸುದ್ದಿ ಮಾಡಿದ್ದ ನಟಿ ಸಂಜನಾ ಗಲ್ರಾನಿ ಇತ್ತೀಚೆಗೆ ಮತ್ತೆ ಬೋಲ್ಡ್ ಆಗಿ ಪೋಟೋಶೂಟ್ ಮಾಡಿಸಿ ಗಮನ ಸೆಳೆದಿದ್ದಾರೆ.

ಗಂಡಹೆಂಡತಿ ಚಿತ್ರ ಬಳಿಕ ಸ್ಯಾಂಡಲ್‌ವುಡ್‌ನಿಂದ ಹಿಡಿದು ಎಲ್ಲಾ ಚಿತ್ರರಂಗದಲ್ಲಿ ಭಾರಿ ಸುದ್ದಿ ಮಾಡಿದ್ದ ಸಂಜನಾ ಕಳೆದ ವರ್ಷ ದಿಡೀರ್‌ನೇ ಮೀಟೂ ಆರೋಪ ಮಾಡಿ ವಿವಾದ ಸೃಷ್ಟಿಸಿ, ಕ್ಷಮೆಯಾಚಿಸಿದ್ದರು. ಆ ಬಳಿಕ ಕೆಲದಿನಗಳಿಂದ ಮೌನವಹಿಸಿದ್ದರು, ಇದೀಗ ಸಾಮಾಜಿಕ ಜಾಲತಾಣದಲ್ಲಿ ತರಾವೇರಿ ಪೋಟೋಗಳನ್ನು ಹಂಚಿಕೊಂಡು ಗಮನ ಸೆಳೆದಿದ್ದಾರೆ.

ಕನ್ನಡ, ತಮಿಳು, ತೆಲುಗು ಭಾಷೆಯಲ್ಲಿ ನಟಿಸಿರುವ ಸಂಜನಾ ಗಲ್ರಾನಿಗೆ ಇತ್ತೀಚಿನ ವರ್ಷಗಳಲ್ಲಿ ಅದೃಷ್ಟ ಕೈಕೊಟ್ಟಿದೆ. ನೀಳಕಾಯದ ಈ ಚೆಲುವೆ ಗೆ ಹೇಳಿಕೊಳ್ಳುವಂತ ಯಾವುದೇ ಆಫರ್ ಬರ್ತಿಲ್ಲ. ಹೀಗಾಗಿ ಮತ್ತೆ ಬೋಲ್ಡ್ ಕಮ್ ಬ್ಯಾಕ್‌ಗೆ ಸಿದ್ಧತೆ ನಡೆಸಿರುವ ಸಂಜನಾ ಮೈಚಳಿ ಬಿಟ್ಟು ಹಾಟ್ ಹಾಟ್ ಪೋಸು ಕೊಟ್ಟು ಪೋಟೋಶೂಟ್ ಮಾಡಿಸುವ ಮೂಲಕ ಸುದ್ದಿಯಾಗಿದ್ದಾರೆ. ಅವರ ಈ ಮತ್ತೇರಿಸುವ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ.

ಕಳೆದ ನವಂಬರ್ ತಿಂಗಳಿನಲ್ಲಿ ತರಾವೇರಿಯಲ್ಲಿ ಪೋಟೋಶೂಟ್ ಮಾಡಿಸಿರುವ ಸಂಜನಾ ಟ್ವೀಟರ್‌ನಲ್ಲಿ ಹಂಚಿಕೊಂಡು ಗಮನ ಸೆಳೆದಿದ್ದಾರೆ. ಅದರಲ್ಲೂ ಇತ್ತೀಚೆಗೆ ವೈರಲ್ ಆಗಿರುವ ಪೋಟೋಗಳಲ್ಲಿ ಬ್ಲಾಕ್ ಜಾಕೆಟ್, ಚೀತಾ ಪ್ರಿಂಟ್ ನ ಮೈಕ್ರೋ ಮಿನಿ ಧರಿಸಿ ತಮ್ಮ ದೇಹ ಸೌಂದರ್ಯವನ್ನು ಧಾರಾಳವಾಗಿ ಪ್ರದರ್ಶಿಸಿ ರಗಡ್ ಲುಕ್ ನಲ್ಲಿ ಪೋಟೋ ಶೂಟ್ ಮಾಡಿಸಿದ್ದು, ಒಂದಕ್ಕಿಂತ ಒಂದು ಪೋಟೋಗಳು ಮಾದಕವಾಗಿ ಮೂಡಿಬಂದಿವೆ. ಹಿರಿಯ ಫ್ಯಾಶನ್ ಪೋಟೋಗ್ರಾಫರ್ ಮುನ್ನಾ ಈ ಪೋಟೋಗಳಿಗೆ ಕ್ಯಾಮರಾ ಹಿಡಿದಿದ್ದರೇ,ಅಜಯ್ ಶೇಲಾರ್‌ಸಂಜನಾ ಹೇರ್ ಸ್ಟೈಲ್ ಮಾಡಿದ್ದಾರೆ.ಇನ್ನು ನಿಶ್ಚಯ್ ನಿಯೋಗಿ ಸಂಜನಾ ಇನ್ನಷ್ಟು ಬೋಲ್ಡ್ ಆಗಿ ಕಾಣಿಸುವಂತ ವಸ್ತ್ರ ವಿನ್ಯಾಸಮಾಡಿದ್ದಾರೆ.

ಈ ಪೋಟೋಶೂಟ್ ಕಂಡ ಅಭಿಮಾನಿಗಳು ಸಂಜನಾಳ ಮಾದಕತೆಗೆ ಮಾರು ಹೋಗಿದ್ದು, ಹಾಟ್ ಲುಕ್ ಸೂಪರ್ ಎಂದು ದಕ್ಷಿಣ ಭಾರತ ಚಿತ್ರರಂಗದ ಅಭಿಮಾನಿಗಳು ಅನಿಸಿಕೆ ಹಂಚಿಕೊಂಡಿದ್ದಾರೆ. ಸಂಜನಾರ ಈ ಹಾಟ್ ಪೋಟೊಶೂಟ್ ಮತ್ತೆ ಚಿತ್ರರಂಗದಲ್ಲಿ ಅವಕಾಶಗಟ್ಟಿಸಿಕೊಳ್ಳವ ಪ್ರಯತ್ನ ಆಗಿರಬಹುದು ಎಂದು ಹೇಳಲಾಗಿದೆ. ಇದರ ಮಧ್ಯೆ ಸಂಜನಾ ಪ್ಯಾರಾ ಅಥ್ಲೇಟ್‌ಗಳ ಅನುಕೂಲಕ್ಕಾಗಿ ಆದಿತ್ಯಮೆಹ್ತ ಪೌಂಡೇಶನ್‌ಗೆ ೧ಲಕ್ಷ ರೂ ಹಣವನ್ನು ಪರಿಹಾರ ನಿಧಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.

Leave a Comment