ಸಂಚಾರ ನಿಯಂತ್ರಣಕ್ಕೆ ಹೊಸ ನಿಯಮ

ಶಿರಹಟ್ಟಿ,ಜು17: ತಾಲೂಕಾ ಕೇಂದ್ರವಾದ ಶಿರಹಟ್ಟಿಯಲ್ಲಿ ಇತ್ತೀಚೆಗೆ ಪೋಲೀಸ್ ಇಲಾಖೆಯಿಂದ ಸಾರ್ವಜನಿಕರಲ್ಲಿ ಸಂಚಾರ ನಿಯಂತ್ರಣದ ಬಗ್ಗೆ ಅರಿವು ಮೂಡಿಸಿ ಪಟ್ಟಣದಲ್ಲಿ ಸಂಚಾರ ನಿಯಂತ್ರಣ ಮಾಡುವದಕ್ಕೋಸ್ಕರ ವಾಹನ ದಟ್ಟಣೆಯನ್ನು ಹಾಗೂ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸುವದನ್ನು ತಪ್ಪಿಸಲು ಪೋಲೀಸ್ ಇಲಾಖೆಯು ಹೊಸ ನಿಯಮಗಳನ್ನು ತಂದಿದೆ.
ಸೋಮವಾರ, ಬುಧವಾರ, ಶುಕ್ರವಾರ ಹಾಗೂ ರವಿವಾರ ಒಂದು ಬದಿಗೆ ಹಾಗೂ ಮಂಗಳವಾರ, ಗುರುವಾರ, ಶನಿವಾರ ಮತ್ತೊಂದು ಬದಿಗೆ ವಾಹನಗಳನ್ನು ಕಡ್ಡಾಯವಾಗಿ ನಿಲ್ಲಿಸುವಂತೆ ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ. ಇದರಿಂದ ಪಟ್ಟಣದಲ್ಲಿ ಇತ್ತೀಚೆಗೆ ವಾಹನ ದಟ್ಟಣೆ ಹಾಗೂ ಸುಗಮ ಸಂಚಾರದಲ್ಲಿ ಉತ್ತಮ ಪ್ರಗತಿ ಕಾಣುತ್ತಿದೆ ಎಂದು ಪಿಎಸ್‍ಐ ಬಸವರಾಜ ತಿಪ್ಪರಡ್ಡಿ ಅವರು ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.

Leave a Comment