ಸಂಚಾರಿ ಪೋಲಿಸರಿಂದ ಕಣ್ಣಿನ ತಪಾಸಣೆ

ಬೆಂಗಳೂರು, ಆ ೫- ರಸ್ತೆ ಸುರಕ್ಷತೆ ಮಾಸಾಚರಣೆ ಅಂಗವಾಗಿ ಬೆಂಗಳೂರು ಸಂಚಾರ ಪೊಲೀಸರು ಓಲಾದ ಸಹಯೋಗದೊಂದಿಗೆ ಚಾಲಕ-ಪಾಲುದಾರರ ಮತ್ತು ಅವರ ಕುಟುಂಬಗಳಿಗಾಗಿ ಕಣ್ಣಿನ ತಪಾಸಣಾ ಶಿಬಿರವನ್ನು ಆಯೋಜಿಸಿ ಗಮನ ಸೆಳೆದಿದ್ದಾರೆ.

ಈ ಶಿಬಿರ ರಸ್ತೆ ಮತ್ತು ಸವಾರಿಗಳನ್ನು ಸುರಕ್ಷಿತವಾಗಿಸಲು ಓಲಾ, ಈ ವರ್ಷದ ಮೇನಲ್ಲಿ ಪ್ರಾರಂಭಿಸಲಾದ ರಾಷ್ಟ್ರೀಯ ಕಾರ್ಯಕ್ರಮವಾದ ’ಸ್ಟ್ರೀಟ್ ಸೇಫ್’ಯ ಒಂದು ಭಾಗವಾಗಿದೆ .ಈ ಕಾರ್ಯಕ್ರಮದ ಭಾಗವಾಗಿ, ಕಣ್ಣಿನ ಚಿಕಿತ್ಸೆ ನೀಡುವಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ ’ವಿಷನ್ ಎಕ್ಸ್ಪ್ರೆಸ್’ ನೊಂದಿಗೆ ಶಿಬಿರವನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಉಚಿತ ಕಣ್ಣಿನ ಆರೈಕೆ ಮತ್ತು ಚಿಕಿತ್ಸೆಯ ಭಾಗವಾಗಿ ಓಲಾ ಚಾಲಕ-ಪಾಲುದಾರರು ಮತ್ತು ಅವರ ಕುಟುಂಬಗಳಿಗೆ ಹೆಚ್ಚಿನ ಸಬ್ಸಿಡಿ ದರದಲ್ಲಿ ಕನ್ನಡಕಗಳನ್ನು ಒದಗಿಸುವುದು ಈ ಕಾರ್ಯಕ್ರಮದ ಭಾಗವಾಗಿತ್ತು. ಭಾರತದಾದ್ಯಂತ ೧೦ ಲಕ್ಷ ಚಾಲಕ-ಪಾಲುದಾರರಿಗಾಗಿ ಸಮಗ್ರ ಆರೋಗ್ಯ ತಪಾಸಣೆಗಳನ್ನು ನಡೆಸುವ ಓಲಾದ ಬದ್ಧತೆಯ ಭಾಗವಾಗಿ ಈ ಕಾರ್ಯಕ್ರಮ ನಡೆಯಿತು.

ಕ್ಯಾಬ್ ಮತ್ತು ಆಟೋ ಚಾಲಕರು ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಅವಿಭಾಜ್ಯ ಭಾಗವಾಗಿದ್ದಾರೆ ಮತ್ತು ಅವರಿಗೆ ರಸ್ತೆ ಸುರಕ್ಷತೆ ಬಗ್ಗೆ ಉತ್ತಮ ಅರಿವು ಮೂಡಿಸುವುದು ಕಡ್ಡಾಯ ಎಂದು ಭಾವಿಸಬೇಕು ಎಂದರು. ಆಗಾಗ ಕಣ್ಣಿನ ಪರಿಕ್ಷೆ ಮಾಡಿಸಿಕೊಳ್ಳುವುದು, ರಸ್ತೆಯ ಮೇಲೆ ಚಾಲನೆ ಮಾಡುವ ಪ್ರತಿಯೊಬ್ಬ ವ್ಯಕ್ತಿಗೂ ಮುಖ್ಯವಾಗಿದೆ, ನಮ್ಮ ರಸ್ತೆಗಳು ಸುರಕ್ಷಿತವಾಗಿವೆಯೆಂದು ಖಚಿತಪಡಿಸಿಕೊಳ್ಳಲು ಮತ್ತು ಈ ಸಮಗ್ರ ಪರಿಶೀಲನೆಗೆ ಪೂರಕವಾಗಿ ಓಲಾ ಈ ಕಾರ್ಯಕ್ರಮವನ್ನು ಆಯೋಜಿಸಿರುವುದು ಸಂತಸ ತಂದಿದೆ ಎಂದು ಡಿಸಿಪಿ ಅನುಪಮ್ ಅಗರ್ವಾಲ್‌ಹೇಳಿದರು. ಓಲಾದ ಮುಖ್ಯಸ್ಥ ಎ.ಎಂ.ಅಕ್ತೀರ್ ಉದ್ದೀನ್ ಹಾಜರಿದ್ದರು

Leave a Comment