ಸಂಚಾರಿ ಪೊಲೀಸರಿಗಾಗಿ ಹೆಲ್ತ್ ಕ್ಯಾಂಪ್

ಕೆಆರ್‌ಪುರ, ಆ.೧೦-ಪ್ರತಿಯೊಬ್ಬರೂ ಆರೋಗ್ಯ ಕಾಪಾಡಿಕೊಂಡು ಕಾರ್ಯನಿರ್ವಹಿಸಬೇಕು ಎಂದು ಕೆಆರ್‌ಪುರ ಸಂಚಾರಿ ವೃತ್ತ ನಿರೀಕ್ಷಕ ಸಂಜೀವರಾಯಪ್ಪ ಇಂದಿಲ್ಲಿ ತಿಳಿಸಿದರು.
ಕೆಆರ್‌ಪುರ ಸಂಚಾರಿ ಠಾಣೆ ಆವರಣದಲ್ಲಿ ಈಸ್ಟ್‌ಪಾಯಿಂಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ತಮ್ಮ ಆರೋಗ್ಯವನ್ನು ಲೆಕ್ಕಿಸದೆ ರಸ್ತೆ ಮಧ್ಯೆ ನಿಂತು ನಮ್ಮ ಸ್ಟಾಪ್ ಟ್ರಾಫಿಕ್ ಇಲ್ಲದಂತೆ ನೋಡಿಕೊಳ್ಳುವ ಕೆಲಸ ಮಾಡುತ್ತದೆ. ಆದೇ ರೀತಿ ಅವರ ಆರೋಗ್ಯವನ್ನೂ ಸಹ ಆಗಾಗ ಪರೀಕ್ಷಿಸಿಕೊಳ್ಳುತ್ತಿದ್ದರೆ ಉತ್ತಮ ಎಂದು ಹೇಳಿದರು.
ಆರೋಗ್ಯ ಕಾಪಾಡಿಕೊಳ್ಳುವುದು ಎಷ್ಟು ಮುಖ್ಯವೋ ಅದೇ ರೀತಿ ಬೈಕ್ ಸವಾರರು ಹೆಲ್ಮೆಟ್ ಧರಿಸಿ ವಾಹನ ಚಾಲಿಯಿಸುವುದು ಅಷ್ಟೇ ಮುಖ್ಯ. ನಿಮ್ಮ ಮೇಲೆ ಇಡೀ ಕುಟುಂಬವೇ ಅವಲಂಭಿಸಿರುತ್ತದೆ. ಅಪಘಾತದಲ್ಲಿ ತೊಂದರೆಯಾದರೆ ಆ ಕುಟುಂಬವೇ ಬೀದಿಗೆ ಬೀಳುತ್ತದೆ. ಆದ್ದರಿಂದ ಹೆಲ್ಮೇಟ್ ಧರಿಸಿ ಆರೋಗ್ಯ ಕಾಪಾಡಿಕೊಳ್ಳಿ ಎಂದರು.
ಕಾರ್ಯಕ್ರಮ ಆಯೋಜಕರಾದ ಉಮಾಕಿರಣ್ ಮಾತನಾಡಿ, ಸಾರ್ವಜನಿಕರ ಹಿತಕ್ಕಾಗಿ ದಿನವಿಡೀ ಬಿಸಿಲೆನ್ನದೆ, ಮಳೆ ಎನ್ನದೆ ಸಂಚಾರ ದಟ್ಟಣೆ ಮುಕ್ತ ಮಾಡುವ ಪೊಲೀಸರ ಆರೋಗ್ಯ ರಕ್ಷಣೆ ಮಾಡುವುದು ನಮ್ಮದೊಂದು ಸಣ್ಣ ಕರ್ತವ್ಯ ಎಂದು ಹೇಳಿದರು.
ಪೊಲೀಸರಿಗೆ ಸಹಕರಿಸುತ್ತಾ ಅವರ ನಿಯಮಗಳನ್ನು ಪಾಲಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.

Leave a Comment