ಸಂಚಾರಿ ದುಬಾರಿ ದಂಡ ಇಳಿಕೆ ಸಂಜೆ ಆದೇಶ

ಬೆಂಗಳೂರು, ಸೆ. ೨೧- ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸಲಾಗುತ್ತಿರುವ ದಂಡದ ಪ್ರಮಾಣ ಇಳಿಕೆ ಬಗ್ಗೆ ಚರ್ಚೆ ನಡೆದಿದ್ದು, ಈ ಸಂಬಂಧ ಇಂದು ಸಂಜೆ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

ಡಾಲಱ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಚಾರ ನಿಯಮ ಉಲ್ಲಂಘನೆಗೆ ದಂಡ ಇಳಿಕೆ ಬಗ್ಗೆ ಈ ಹಿಂದೆಯೇ ಹೇಳಿದ್ದೆ. ಈ ಬಗ್ಗೆ ಚರ್ಚೆಗಳು ನಡೆದಿದ್ದು, ಇಂದು ಆದೇಶ ಹೊರ ಬೀಳಲಿದೆ ಎಂದರು.

ಸಂಚಾರ ನಿಯಮ ಉಲ್ಲಂಘನೆಗೆ ಈಗ ವಿಧಿಸುತ್ತಿರುವ ದಂಡ ಪ್ರಮಾಣವನ್ನು ಸ್ವಲ್ಪ ಇಳಿಕೆ ಮಾಡಿ ಆದೇಶ ಹೊರಡಿಸಲಾಗುವುದು ಎಂದು ಅವರು ಹೇಳಿದರು.

ರಾಜ್ಯದಲ್ಲಿ ಸಂಚಾರಿ ನಿಯಮ ಉಲ್ಲಂಘನೆ ದಂಡ ದುಬಾರಿಯಾದ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಟೀಕೆ ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಗುಜರಾತ್ ನಲ್ಲಿ ದಂಡ ಕಡಿಮೆ ಮಾಡಿರುವ ಮಾದರಿಯನ್ನು ಅನುಸರಿಸಿ ಕಡಿತ ಮಾಡಲು ನಿರ್ಧರಿಸಿದ್ದವು.

ಅದಕ್ಕೆ ಈಗ ಸಂಜೆ ಅಧಿಕೃತ ಮೊಹರು ಒತ್ತುವ ಸಾಧ್ಯತೆಗಳಿವೆ. ಈ ನಡುವೆ ಕಾನೂನು ಇಲಾಖೆ ದಂಡ ಇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿತು. ಸಂಜೆ ವೇಳೆಗೆ ಈ ಸಂಬಂಧ ಅಧಿಕೃತ ಮಾಹಿತಿ ಹೊರ ಬೀಳುವ ಲಕ್ಷಣಗಳಿವೆ.

Leave a Comment