ಸಂಘನಿಕೇತನ ೭೧ನೇ ಗಣೇಶೋತ್ಸವಕ್ಕೆ ಚಾಲನೆ

ಮಂಗಳೂರು, ಸೆ.೧೪- ಗಣೇಶ ಚತುರ್ಥಿ ಪ್ರಯುಕ್ತ ೭೧ನೇ ಸಾರ್ವಜನಿಕ ಗಣೇಶೋತ್ಸವ ಸಂಘನಿಕೇತನ ಪ್ರತಾಪನಗರ ಇದರ ಮಹಾಗಣಪತಿ ದೇವರ ವಿಗ್ರಹದ ಪ್ರತಿಷ್ಠಾಪನೆ ಹಾಗೂ ಉತ್ಸವದ ಉದ್ಘಾಟನೆ ಗುರುವಾರ ವಿಜೃಂಭಣೆಯಿಂದ ನೆರವೇರಿತು. ಉದ್ಘಾಟನೆಯನ್ನು ಕಚ್ಚೂರು ಮಾಲ್ದಿ ದೇವಿ ದೇವಸ್ಥಾನ ಹಾಗೂ ಬಬ್ಬುಸ್ವಾಮಿ ಮೂಲ ಕ್ಷೇತ್ರ ಬಾರ್ಕೂರು ಇದರ ಪ್ರಧಾನ ಕಾರ್ಯದರ್ಶಿ ಗೋಕುಲದಾಸ್ ಬಾರ್ಕೂರು ದೀಪ ಪ್ರಜ್ವಲನೆಯ ಮುಖಾಂತರ ನೆರವೇರಿಸಿದರು. ಬಳಿಕ ಧ್ವಜಾರೋಹಣ, ವಂದೇಮಾತರಂ, ಗಣಹೋಮ ನೆರವೇರಿತು. ಗಣೇಶೋತ್ಸವ ಕಾರ್ಯಕ್ರಮವು ಸಂಘನಿಕೇತನದಲ್ಲಿ ೫ ದಿನಗಳ ಕಾಲ ನಡೆಯಲಿದೆ. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ಈ ಸಂದರ್ಭ ಗಣೇಶನನ್ನು ಹೊರುವ ಮೂಲಕ ಹೆಗಲು ಸೇವೆ ನೆರವೇರಿಸಿದರು.

Leave a Comment