ಸಂಘದ ಪದಾಧಿಕಾರಿಗಳು

ಬೆಂಗಳೂರು, ಸೆ ೧೦- ಕರ್ನಾಟಕ ಪತ್ರಕರ್ತರ ಸಹಕಾರ ಸಂಘ ಮುಂದಿನ ಐದು ವರ್ಷದ ಅವಧಿಗೆ ಈ ಕೆಳಕಂಡವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷರಾಗಿ ರಾಜೇಂದ್ರ ಕುಮಾರ್ ಎಂ.ಎಸ್, ಉಪಾಧ್ಯಕ್ಷರಾಗಿ ಲಕ್ಷ್ಮೀನಾರಾಯಣ.ಎಸ್. ಖಚಾಂಚಿಯಾಗಿ ಯತಿರಾಜು ಅವರು ಆಯ್ಕೆಯಾಗಿದ್ದು, ನಿರ್ದೇಶಕರಾಗಿ ರಾಘವೇಂದ್ರ.ಕೆ, ಶಿವಕುಮಾರ್ ಎಂ.ಡಿ.(ಬೆಳ್ಳಿತಟ್ಟೆ), ಸುರೇಶ್ ಎ.ಎಂ, ಶಿವಣ್ಣ, ಸಚ್ಚಿದಾನಂದ ಕರಗುಂದ, ಮೋಹನ್ ಕುಮಾರ್ ಬಿ.ಎನ್, ಅನಿತಾ ಎಚ್, ಮುಂಜಾನೆ ಸತ್ಯ, ಸುಮನಾ ಲಕ್ಷ್ಮೀಶ, ವನಿತಾ.ಎನ್ ಅವರು ಆಯ್ಕೆಯಾಗಿದ್ದಾರೆ.

ಸಂಘದ ಮಹಾ ಸಭೆ
ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಪ್ರಸಕ್ತ ಸಾಲಿನ ಸರ್ವಸದಸ್ಯರ ಸಭೆಯನ್ನು ಸೆ ೨೩ರಂದು ಬೆಳಿಗ್ಗೆ ೧೦ಕ್ಕೆ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಸುವರ್ಣ ಕೃಷಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಸಭೆಯು ಸಂಘದ ನೂತನ ಅಧ್ಯಕ್ಷ ಎಂ.ಎಸ್.ರಾಜೇಂದ್ರ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಸಭೆಗೆ ತಪ್ಪದೇ ಹಾಜರಾಗುವಂತೆ ಸೂಚಿಸಲಾಗಿದೆ. ಮಾಹಿತಿಗಾಗಿ ೦೮೦-೨೨೮೬೬೨೦೮

Leave a Comment