ಸಂಘದ ಧೇಯೋದ್ದೇಶ ಪಾಲಿಸಿ

ರಾಯಚೂರು.ಆ.12- ಸಂಘದ ಧೇಯೋದ್ದೇಶಗಳನ್ನು ಕಾರ್ಯಕರ್ತರು ಚಾಚು ತಪ್ಪದೆ ಪಾಲಿಸಿ ಸಂಘಟನೆಯನ್ನು ಬಲಪಡಿಸಬೇಕೆಂದು ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಹೆಚ್.ಎನ್.ದೀಪಕ್ ಹೇಳಿದರು.
ಸ್ಥಳೀಯ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಕಾರ್ಯಕರ್ತರ ಸಮಾವೇಶ ಹಾಗೂ ರಾಜ್ಯಾಧ್ಯಕ್ಷರಿಗೆ ಸನ್ಮಾನ ಮತ್ತು ಅಂಧ ಮಕ್ಕಳ ಶಾಲಾ ವಿದ್ಯಾರ್ಥಿಗಳಿಗೆ ವಾಕಿಂಗ್ ಸ್ಟಿಕ್ ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಳೆದ 10 ವರ್ಷಗಳಿಂದ ಜಿಲ್ಲೆಯಲ್ಲಿ ಸಂಘಟನೆ ಬಲಪಡಿಸುವಲ್ಲಿ ಶ್ರಮಿಸುತ್ತಿರುವ ಜಿಲ್ಲಾಧ್ಯಕ್ಷ ಶಿವಕುಮಾರ ಅವರ ಕಾರ್ಯ ಶ್ಲಾಘನೀಯ.
ಸಂಸ್ಥಾಪಕ ಅಧ್ಯಕ್ಷರಾದ ಮುತ್ತಪ್ಪ ರೈ. ಅವರ ಆಶಯ ಈಡೇರಿಸಲು ಮುಂದಾಗುವಂತೆ ತಿಳಿಸಿದರು. ರಾಜ್ಯದಲ್ಲಿ ಕನ್ನಡ ಭಾಷೆಗೆ ಧಕ್ಕೆ, ನೀರು ಹಂಚಿಕೆ ಸೇರಿ ಇತರೆ ವಿಷಯಗಳಲ್ಲಿ ಅನ್ಯಾಯವಾದಾಗ ಹೋರಾಟ ನಡೆಸಲಾಗುತ್ತದೆ. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸಂಘಟನೆಯನ್ನು ಬಲಪಡಿಸಬೇಕೆಂದು ತಿಳಿಸಿದರು. ರಾಜ್ಯದ ಉಪಾಧ್ಯಕ್ಷ ರಾಮಚಂದ್ರಯ್ಯ ಮಾತನಾಡಿ, ಕಾರ್ಯಕರ್ತರು ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ತಿಳಿಸಿದರು.
ಅಮರೇಶ, ಎಸ್.ಶಿವಕಮಾರ ಯಾದವ್, ಶಿವಪುತ್ರ ಗಾಣದಾಳ, ಸುರೇಶ ಮಡಿವಾಳ, ಬಸವರಾಜ, ಬಾಲನಗೌಡ, ಎನ್.ಮಾಲಿಪಾಟೀಲ್, ಬಸವರಾಜ ಬಡಿಗೇರ, ಚಂದ್ರಶೇಖರ ನಾಯಕ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Comment