ಸಂಘಟನೆ, ಒಗ್ಗಟ್ಟಿದ್ದರೆ ಮಾತ್ರ ಅಭಿವೃದ್ದಿ ಸಾಧ್ಯ

ಮುಂಡಗೋಡ,ಸೆ.20-ಯಾವುದೇ ಸಮಾಜದಲ್ಲಿ ಸಂಘಟನೆ ಮತ್ತು ಒಗ್ಗಟ್ಟಿದ್ದರೆ ಮಾತ್ರ ಅಭಿವೃದ್ದಿ ಸಾಧ್ಯವಾಗುತ್ತದೆ ಎಂದು ಜಿ.ಪಂ.ಸದಸ್ಯ ಎಲ್.ಟಿ.ಪಾಟೀಲ ಹೆಳಿದರು.
ಮುಂಡಗೋಡ ತಹಶೀಲದಾರ ಕಾರ್ಯಾಲಯ ಹಾಗೂ ತಾಲೂಕಾ ಶ್ರೀವಿಶ್ವಕರ್ಮ ಸಮಾಜ, ಶ್ರೀವಿಶ್ವಕರ್ಮ ಜಯಂತ್ಯುತ್ಸವ ಸಮಿತಿ ಆಶ್ರಯದಲ್ಲಿ ಮಿನಿ ವಿಧಾನಸೌಧದ ಸಭಾಭವನದಲ್ಲಿ ನಡೆದ ಶ್ರೀವಿಶ್ವಕರ್ಮ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಮಾಜದ ಅಭಿವೃದ್ದಿಯಲ್ಲಿ ಸರಕಾರ, ರಾಜಕೀಯ ಹಿತಾಸಕ್ತಿಗಳ ಶ್ರಮ ಅತೀ ಮುಖ್ಯ. ಸಂಘಟನೆ, ಶಿಕ್ಷಣಕ್ಕೆ ಒತ್ತು ಕೊಟ್ಟರೆ ಮಾತ್ರ ಸಮಾಜ ಮುಂದೆ ಬರಲು ಸಾಧ್ಯ ಎಂದು ಅವರು ಹೇಳಿದರು.
ಗ್ರೇಡ್-2 ತಹಶೀಲ್ದಾರ ಜಿ.ಬಿ.ಭಟ್ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ.ಅಧ್ಯಕ್ಷೆ ದಾಕ್ಷಾಯಣಿ ಸುರಗೀಮಠ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ತಾ.ಪಂ.ವ್ಯವಸ್ಥಾಪಕರಾದ ಪ್ರಕಾಶ ಎಂ.ಕೆ., ತೋಟಗಾರಿಕಾ ನಿರ್ದೇಶಕರಾದ ನಾಗಾರ್ಜುನ ಗೌಡ, ಬಿ.ಎಚ್.ನಾಯ್ಕ, ವಸಂತ ಕೊಣಸಾಲಿ, ರಾಮದಾಸ ನಾಯ್ಕ, ಶಿವಾನಂದ ಕಡಪಟ್ಟಿ, ಕೃಷಿ ಅಧಿಕಾರಿ ಅರವಿಂದ ಕಮ್ಮಾರ, ಸಿಡಿಪಿಒ ಎಚ್.ಬಿ.ಬೈಲಪತ್ತಾರ, ಗ್ರಾ.ಪಂ.ಸದಸ್ಯರಾದ ಬಸವರಾಜ ಅರ್ಕಸಾಲಿ, ಸುರೇಶ ಕಮ್ಮಾರ, ರುದ್ರವ್ವ ಬಡಿಗೇರ, ಪ.ಪಂ.ಸದಸ್ಯೆ ನಿರ್ಮಲಾ ಬೆಂಡ್ಲಗಟ್ಟಿ, ಎಸ್.ಎಸ್.ಪಾಟೀಲ, ಹಸನಪೀರ,     ಮುಂಡಗೋಡ ತಾಲೂಕಾ ಶ್ರೀವಿಶ್ವಕರ್ಮ ಸಮಾಜದ ಕಾರ್ಯದರ್ಶಿ ಉಮೇಶ ಬಡಿಗೇರ, ಪ್ರಮುಖರಾದ ವಿರುಪಾಕ್ಷ ಬಡಿಗೇರ, ಮುನೇಶ್ವರ ಬಡಿಗೇರ, ಶಿವಾನಂದ ಬಡಿಗೇರ, ಗಂಗಾಧರ ಬಡಿಗೇರ, ಈರಣ್ಣ ಬಡಿಗೇರ ಮುಂತಾದವರಿದ್ದರು.
ಮುಂಡಗೋಡ ತಾಲೂಕಾ ಶ್ರೀವಿಶ್ವಕರ್ಮ ಸಮಾಜದ ಅಧ್ಯಕ್ಷರಾದ ಆರ್.ವಿ.ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷ ಎಂ.ವಿ.ಬಡಿಗೇರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Leave a Comment