ಸಂಘಟನೆಯ ಕೊರತೆಯಲ್ಲಿ ಬಂಜಾರ ಸಮುದಾಯ

ದಾವಣಗೆರೆ.ಆ.26- ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದಾಗ ಬಂಜಾರ ಸಮಾಜ ಸಾಮಾಜಿಕವಾಗಿ, ರಾಜಕೀಯವಾಗಿ ಶೈಕ್ಷಣಿಕವಾಗಿ ಮುಂದೆ ಬರಲು ಸಾಧ್ಯವಾಗುತ್ತದೆ ಎಂದು ಶಾಸಕ ಪಿ.ಟಿ ಪರಮೇಶ್ವರನಾಯ್ಕ ಹೇಳಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿಂದು ಜಿಲ್ಲಾ ಬಂಜಾರ (ಲಂಬಾಣಿ) ಸೇವಾ ಸಂಘದ ವತಿಯಂದ ಸಮಾಜದ ನಿವೃತ್ತ ನೌಕರರಿಗೆ ಸನ್ಮಾನ ಹಾಗೂ 2017-18 ನೇ ಸಾಲಿನ ಎಸ್ ಎಸ್ ಎಲ್ ಸಿ, ದ್ವಿತೀಯ ಪಿಯುಸಿಯಲ್ಲಿ ಶೇ 80ಕ್ಕಿಂತ ಹೆಚ್ಚು ಅಂಕಗಳಿಸಿದ್ದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರತಿಭಾಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ನಿವೃತ್ತ ನೌಕರರರು ತಮ್ಮ ಸೇವಾ ಅವಧಿಯಲ್ಲಿ ಅನೇಕ ಜಂಜಾಟಗಳ ನಡುವೆ ಕೆಲಸ ಮಾಡಿರುತ್ತಾರೆ ನಿವೃತ್ತರಾದ ಮೇಲೆ ಅವರಿಗೆ ಮಾನಸಿಕ ಸ್ಥೈರ್ಯ ತುಂಬಬೇಕು.ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇಂತಹ ಪ್ರೋತ್ಸಾಹಿಸುವ ಕಾರ್ಯಕ್ರಮ ಆಯೋಜಿಸಿರುವುದು ಅವರಿಗೆ ಸೂರ್ತಿದಾಯಕವಾಗಿದೆ ಇದೊಂದು ಶ್ಲಾಘನೀಯ. ಸಮಾಜದಲ್ಲಿ ಸಮಸ್ಯೆಗಳು ಬಂದಾಗ ಅವುಗಳನ್ನು ನಿಭಾಯಿಸುವ ಕೆಲಸವನ್ನು ಸಮರ್ಥವಾಗಿ ನಿಭಾಯಿಸಿದ್ದೇವೆ. ಸಮಾಜದ ರಕ್ಷಣೆ ನನ್ನ ಮೊದಲ ಆದ್ಯತೆಯಾಗಿದೆ. ಸಮಾಜದಲ್ಲಿ ನಾಲ್ಕೈದು ಸಂಘಟನೆಗಳಿರುವುದರಿಂದ ಸಂಘಟನೆಯ ಕೊರೆತೆ ಎದ್ದು ಕಾಣುತ್ತಿದೆ. ಎಲ್ಲವೂ ಒಂದೇ ವೇದಿಕೆಯಡಿ ಬರಬೇಕು ಎಂದು ಹೇಳಿದರು.
ಮಾಜಿ ಸಚಿವೆ ಬಿಟಿ ಲಲಿತಾನಾಯ್ಕ ಮಾತನಾಡಿ ಎಲ್ಲಾ ಕ್ಷೇತ್ರಗಳಲ್ಲೂ ನಮ್ಮ ಸಮಾಜ ಅತ್ಯಂತ ಹಿಂದುಳಿದೆ. ನಮ್ಮ ಸಮಾಜ ಮುಖ್ಯವಾಹಿನಿಗೆ ಬರುವ ಅವಶ್ಯಕತೆ ಇದೆ. ಈ ಬಗ್ಗೆ ಸಾಕಷ್ಟು ಚರ್ಚೆಯಾಗಬೇಕಾಗಿದೆ.ದೆಹಲಿಯಲ್ಲಿ ನಮ್ಮ ಸಮಾಜದ ಬೇಡಿಕೆಗಳ ಬಗ್ಗೆ ಮಾತನಾಡಲು ಕೇವಲ ಒಬ್ಬ ಸಂಸದರಿಲ್ಲ. ಇಂದಿಗೂ ಸಹ ಸಮಾಜ ನಿರ್ಲಕ್ಷಿತ ಜನಾಂಗವಾಗಿ ಸರ್ಕಾರದ ಕಣ್ಣಲ್ಲಿ ಉಳಿದಿದೆ. ಹಟ್ಟಿ, ಹಾಡಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಅವಶ್ಯಕತೆಯಿದೆ.ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರವಿದ್ದಾಗ ಕ್ರಾಂತಿಕಾರಕ ಹೆಜ್ಜೆಯಿಟ್ಟಿದ್ದರು. ಈ ದೇಶವನ್ನು ಮೌಢ್ಯ ಬಹಳಷ್ಟು ಆವರಿಸುತ್ತಿದೆ. ಬಡ ಜನರನ್ನು ಬಲಿ ತೆಗೆದುಕೊಳ್ಳುತ್ತಿದೆ. ಇದರಿಂದ ಬಡಜನರನ್ನು ಹೊರತರಬೇಕೆಂಬ ಉದ್ದೇಶದಿಂದ ಮೌಢ್ಯ ನಿಯಂತ್ರಣ ಮಸೂದೆಯನ್ನು ಜಾರಿಗೆ ತರಲಾಯಿತು.ಆದರೆ ಅದರಲ್ಲಿ ಕೆಲ ಅಂಶಗಳು ಜಾರಿಯಾಗದಿರುವುದು ಬೇಸರದ ಸಂಗತಿ. ತಾಂಡಗಳು ಕಂದಾಯ ಗ್ರಾಮಗಳಾಗಬೇಕೆಂಬ ಕಾಯ್ದೆ ಬಂದರೂ ಸಹ ಸರ್ಕಾರ ನಿರ್ಲಕ್ಷ್ಯತೆ ತೋರುತ್ತಿದೆ. ನಾಗರೀಕತೆ ಬೆಳೆದಂತೆಲ್ಲಾ ಜಾತಿ, ಕೌರ್ಯ ಸೃಷ್ಠಿಯಾಗುತ್ತಿದೆ. ನಾವು ನಿಜವಾದ ಗೋರಕ್ಷಕರು, ಕೃಷ್ಣನ ಆರಾಧಕರು ಆದರೆ ಕೃಷ್ಣನ ಹೆಸರಿನಲ್ಲಿ ಬೇರೆಯವರು ಟ್ರಸ್ಟ್ ಗಳನ್ನು ಸ್ಥಾಪಿಸಿಕೊಂಡು ಹಣ ಲೂಟಿ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಮಾಜಿ ಶಾಸಕ ಎಂ ಬಸವರಾಜ ನಾಯ್ಕ, ಕೆ. ಶಿವಮೂರ್ತಿ ನಾಯ್ಕ, ಹೀರಾನಾಯ್ಕ, ಜಯದೇವನಾಯ್ಕ, ಡಾ.ರಾಜಾನಾಯ್ಕ, ಬೋಜನಾಯ್ಕ,ರಾಜಾನಾಯ್ಕ, ಗೀತಾ ಗಂಗಾಧರ ನಾಯ್ಕ, ಸುರೇಂದ್ರ ನಾಯ್ಕ ಮತ್ತಿತರರಿದ್ದರು.
26dph9

Leave a Comment