ಸಂಗೊಳ್ಳಿರಾಯಣ್ಣ ಜಯಂತಿ 18 ರಂದು

 

ಕಲಬುರಗಿ ಆ 13: ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಜಯಂತ್ಯುತ್ಸವವನ್ನು ಆಗಸ್ಟ್ 18 ರಂದು ಮಧ್ಯಾಹ್ನ 2.30 ಕ್ಕೆ ಸಾರ್ವಜನಿಕ ಉದ್ಯಾನದ ವೀರಶೈವ ಕಲ್ಯಾಣ ಮಂಟಪದಲ್ಲಿ ಆಚರಿಸಲಾಗುವದು. ಅಂದು ಬೆಳಿಗ್ಗೆ 9.30 ಕ್ಕೆ ನಗರೇಶ್ವರ ಶಾಲೆಯಿಂದ ವೀರಶೈವ ಕಲ್ಯಾಣ ಮಂಟಪದವರೆಗೆ ರಾಯಣ್ಣನವರ ಮೂರ್ತಿಯ ಮೆರವಣಿಗೆ ನಡೆಯಲಿದ್ದು,ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಚಾಲನೆ ನೀಡುವರು ಎಂದು ರಾಯಣ್ಣೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ.ಬಾಬು ಈ.ಪೂಜಾರಿ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವೇದಿಕೆ ಕಾರ್ಯಕ್ರಮವನ್ನು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ಉದ್ಘಾಟಿಸುವರು.ಸಂಸದರಾದ ಡಾ ಉಮೇಶ ಜಾಧವ,ಭಗವಂತ ಖೂಬಾ. ಮಾಜಿ ಸಚಿವರಾದ ಬಂಡೆಪ್ಪ ಕಾಶಂಪುರ,ಪ್ರಿಯಾಂಕ್ ಖರ್ಗೆ,ಶಾಸಕರಾದ ಸುಭಾಷ ಗುತ್ತೇದಾರ,ಡಾ ಅಜಯಸಿಂಗ್,ಎಂ.ವೈ ಪಾಟೀಲ,ರಾಜಕುಮಾರ ಪಾಟೀಲ ತೇಲ್ಕೂರ,ಖನೀಜ್ ಫಾತಿಮಾ, ಬಸವರಾಜ ಮತ್ತಿಮೂಡ,ಡಾ ಅವಿನಾಶ ಪಾಟೀಲ, ವಿಧಾನ ಪರಿಷತ್ತು ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ ,ಬಿ.ಜಿ ಪಾಟೀಲ,ಶರಣಪ್ಪ ಮಟ್ಟೂರ,ಡಾ ಚಂದ್ರಶೇಖರ ಪಾಟೀಲ ಸೇರಿದಂತೆ ಅನೇಕ ಗಣ್ಯರು ಸಮಾಜದ ಮುಖಂಡರು ಪಾಲ್ಗೊಳ್ಳುವರು.ನಿಕೇತರಾಜ ಮೌರ್ಯ ಮತ್ತು ಶಿಲ್ಪಾ ಕುದುರಗೊಂಡ ಉಪನ್ಯಾಸ ನೀಡುವರು .ತಿಂಥಣಿಬ್ರಿಜ್ ಕನಕ ಗುರುಪೀಠದ ಸಿದ್ಧರಾಮಾನಂದ ಪುರಿ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು ಎಂದು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಕಾಶ ಕುರನಳ್ಳಿ,ನಿಂಗಣ್ಣ ಪೂಜಾರಿ ಕುಸನೂರ,ರವಿಗೊಂಡ ಕಟ್ಟಿಮನಿ,ರಮೇಶ ಕಂಟೀಕರ ಸೇರಿದಂತೆ ಹಲವರಿದ್ದರು..

Leave a Comment