ಸಂಗೀತ ಸಾಧಕಿ ಹಿರಣ್ಯಮಯಿ

ತಾಯಿಯಿಂದಲೇ ಸಂಗೀತಾಭ್ಯಾಸ ಆರಂಭಿಸಿ ಇಂದು ಉತ್ತಮ ಸಂಗೀತಗಾರ್ತಿ ಸಾಲಿನಲ್ಲಿ ನಿಲ್ಲುವ ಮೂಲಕ ಹಿರಣ್ಯಮಯಿ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸುವ ಮೂಲಕ ಮುಂದಡಿ ಇಡುತ್ತಿದ್ದಾರೆ.

ಕಲೆಗಳಲ್ಲಿ ಎಲ್ಲರೂ ರಮಿಸುವ ಕಲೆಯೆಂದರೆ ಸಂಗೀತ. ಎಲ್ಲ ಹಾಡುಗಳ ಮೂಲ ಸಂಗೀತ. ಚರಿತ್ರೆಯನ್ನು ನೋಡಿದರೆ, ಸಂಗೀತವು ಉತ್ಪತ್ತಿಯಾದ ಬಗ್ಗೆ ಬಹಳ ಊಹೆಗಳಿವೆ. ಅದರ ಮೂಲ ತಿಳಿಯುವುದು ಅಸಾಧ್ಯ. ಇನ್ನು ಸಪ್ತ ಸ್ವರಗಳು, ರಾಗಗಳು, ತಾಳಗಳು ಇವೆಲ್ಲ ಸಂಗೀತದ ಶಾಸ್ತ್ರಗಳು. ಕೀರ್ತನೆಗಳನ್ನು ಹಾಗು ವರ್ಣ ಗಳನ್ನು ಕೃತಿಗಳೆನ್ನುತ್ತಾರೆ. ರಾಗ ಆಲಾಪನೆ, ನೆರವಲ್, ಕಲ್ಪನಾಸ್ಪರ, ತಾನ, ರಾಗ ತಾನ ಪಲ್ಲವಿಯನ್ನು ಮನೋಧರ್ಮ ಸಂಗೀತವೆನ್ನುತ್ತಾರೆ. ಅಂತಹ ಸಂಗೀತಕ್ಕೆ ದಾಸಿಯಾದ ಹಿರಣ್ಯಮಯಿ ಭವಿಷ್ಯದಲ್ಲಿ ಉತ್ತಮ ಸಂಗೀತ ಕಲಾವಿದೆಯಾಗುವುದರಲ್ಲಿ ಯಾವುದೇ ಸಂಶಯ ಇಲ್ಲ ಎನ್ನಬಹುದು. ಆಕೆಯ ಕಲೆ ಪ್ರಕಾರ ನಿಜಕ್ಕೂ ಸಂಗೀತ ಪ್ರಿಯರನ್ನು ಸೆಳೆಯವಲ್ಲಿ ಯಶಸ್ವಿಯಾಗಿದೆ.

ಉಸ್ತಾದ್ ಫಯಾಜ್ ಖಾನ್ ಅವರ ಬಳಿ ೧೧ ವರ್ಷ ಮತ್ತು ಹರ್ಷದ್ ಅಲಿಖಾನ್ ಅವರ ಬಳಿ ೨ ವರ್ಷ ಒಟ್ಟು ೧೪ ವರ್ಷಗಳ ಕಾಲ ಸತತ ಅಭ್ಯಾಸ ನಡೆಸಿದ ಹಿರಣ್ಯಮಯಿಗೆ ಸಂಗೀತದಲ್ಲಿ ತಾಯಿ ಪದ್ಮ ಅಡಿಗಾ ಅವರೇ ಮೊದಲ ಗುರು.

ಸಾರ್ವಜನಿಕ ಸಭೆಗಳಲ್ಲಿ, ರಾಮಸೇವಾ ಮಂಡಳಿಗಳಲ್ಲಿ ೨೦೧೨-೧೩ರ ಬೆಂಗಳೂರು ಸಂಗೀತ ಉತ್ಸವದಲ್ಲಿ ಎಸ್‌ವಿಎನ್ ಮ್ಯೂಸಿಕ್ ಅಕಾಡೆಮಿ ಮೂಲಕ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಇಂದಿರಾನಗರ ಸಂಗೀತ ಸಹ ಮತ್ತು ಗಾಯನ ಸಮಾಜ, ಕರ್ನಾಟಕ ಚಿತ್ರೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಾಡಿರುವ ಹಿರಣ್ಯಮಯಿಗೆ ಸಂಗೀತವೆಂದರೆ ಬಲು ಪ್ರೀತಿ.

ಸಂಗೀತದ ಕಡೆ ಹಿರಣ್ಯಮಯಿ ಅವರಿಗಿರುವ ಅಪಾರ ಆಸಕ್ತಿ ಮತ್ತು ಪ್ರೀತಿ ಇನ್ನೂ ಹಲವಾರು ಕಡೆ ಅವರು ತಮ್ಮ ಸಂಗೀತ ಛಾಪು ಮೂಡಿಸುವಲ್ಲಿ ನೆರವಾಗಿದೆ. ಬೆಂಗಳೂರು ಅರಮನೆ ಮೈದಾನ, ಕಾಲಾಯ ಆರ್ಟಿ ಫೌಂಡೇನ್ಸ್‌ನ ಜೆಎಸ್‌ಎಸ್ ಸಭಾಂಗಣ, ತಾರಾನಾತ್ ಸಂಗೀತ ಸಂಸ್ಥೆಯಿಂದ ಮೈಸೂರಿನಲ್ಲಿ ನಡೆದ ಸಂಗೀತ ಉತ್ಸವ ಮೀರತ್, ಮುಂಬೈ, ಕೊಚ್ಚಿ, ಉಳಿದಂತೆ ಐಟಿಸಿ ಸಂಗೀತ ಸಂಶೋಧನಾ ಅಕಾಡೆಮಿ ಕೊಲ್ಕತಾ ಪ್ರವೀಣ್ ಗೋಡ್ಕಂಡಿ ಅವರೊಂದಿಗೆ ದಸರಾ ಸಂಗೀತೋತ್ಸವ ಮತ್ತು ವಾಡೆಯ ನಾಡಿಗರ್ ಕುಂಡಗೋಲ್, ಉಡುಪಿ, ಬಳ್ಳಾರಿ ಸಂಗೀತೋತ್ಸವಗಳಲ್ಲೂ ಮಿಂಚಿರುವ ಅಪರೂಪದ ಕಿರಿಯ ವಯಸ್ಸಿನ ಪ್ರತಿಭೆ ಹಿರಣ್ಯಮಯಿ. ಕಿರಿಯ ವಯಸ್ಸಿನ ಈ ಸಾಧಕಿಯ ಸಾಧನೆ ಇನ್ನೂ ಎತ್ತರಕ್ಕೆ ಬೆಳೆದು ಸಂಗೀತ ಸಂಸ್ಕೃತಿ ವಿಸ್ತರಿಸುವಲ್ಲಿ ತಮ್ಮದೇ ಕೊಡುಗೆ ನೀಡಲಿ ಎಂದು ನಾವೆಲ್ಲ ಹಾರೈಸೋಣ.

ಹಿರಣ್ಯಮಯಿ ಸಾಧನೆಗೆ  ಸಂದಿರುವ ಗೌರವ

೨೦೧೪ರ ಆಲ್ ಇಂಡಿಯಾ ರೇಡಿಯೋದ ರಾಷ್ಟ್ರಮಟ್ಟದ ಸಂಗೀತ ಸ್ಪರ್ಧೆಯಲ್ಲಿ ೩ ಬಹುಮಾನಗಳು (ಬಿ ಗ್ರೇಡ್), ಹಿಂದೂಸ್ತಾನಿ ಕ್ಲಾಸಿಕಲ್ ಓಕಲ್‌ನಲ್ಲಿ ಸಂದಿವೆ. ತನ್ನ ೭ನೇ ವಯಸ್ಸಿನಲ್ಲೇ ಕನ್ನಡದ ಕಂದ ಚಿತ್ರದ ಹಾಡಿಗೆ ಪ್ರಥಮ ಬಾರಿಗೆ ಹಾಡಿ ಪಡೆದ ಮೆಚ್ಚುಗೆ. ಭಜನಾ ಮತ್ತು ತುಂಬ್ರಿ ಸಹ ೭ನೇ ವಯಸ್ಸಿನಲ್ಲಿಯೇ ಹಾಡಿದ್ದ ಹಿರಣ್ಯಮಯಿ. ಇದುವರೆಗೂ ಆಕೆ ನೀಡಿರುವ ಸಂಗೀತ ಕಾರ್ಯಕ್ರಮಗಳಿಗೆ ಹಾಗೂ ಸ್ಪರ್ಧೆಗಳಿಂದ ಒಟ್ಟು ೨೦೦ಕ್ಕೂ ಅಧಿಕ ಬಹುಮಾನಗಳು ರಾಜ್ಯಮಟ್ಟ ಸೇರಿದಂತೆ ರಾಷ್ಟ್ರ ಮಟ್ಟದಲ್ಲಿಯೂ ದೊರೆಕಿವೆ. ಬಾಲ ಭವನದಿಂದ ಕಲಾಶ್ರೀ ರಾಜ್ಯಮಟ್ಟದ ಪ್ರಶಸ್ತಿ, ಬಿಬಿಪಿಯಿಂದ ಕೆಂಪೇಗೌಡ ಪ್ರಶಸ್ತಿ, ಕೋಟೇಶ್ರೀ ರಾಮಸೇವಾ ಮಂಡಳಿಯಿಂದ ಪ್ರತಿಭಾ ಪ್ರಾಂಕ್ಷಿ ಪುರಸ್ಕಾರಗಳು ಲಭಿಸಿವೆ.

Leave a Comment