ಸಂಗೀತ ವಿದೂಷಿ ಡಾ. ಶಾಮಲಾ ಭಾವೆ ಪಂಚ ಭೂತಗಳಲ್ಲಿ ಲೀನ

ಬೆಂಗಳೂರು, ಮೇ 22 – ನಾಡಿನ ಹೆಸರಾಂತ ಶಾಸ್ತ್ರೀಯ ಸಂಗೀತ ಕಲಾವಿದೆ, ಸಂಗೀತ ವಿದೂಷಿ ಡಾ.ಶಾಮಲಾ ಜಿ.ಭಾವೆ ಅವರ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರ ಚಾಮರಾಜಪೇಟೆಯ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. ಈ ಮೂಲಕ ಪಂಚ ಭೂತಗಳಲ್ಲಿ ಲೀನವಾದರು.
ಡಾ. ಶಾಮಲಾ ಭಾವೆ ಅವರು ಇಂದು ಮುಂಜಾನೆ ನಿಧನರಾದರು. ಅವರಿಗೆ ೭೯ ವರ್ಷ ವಯಸ್ಸಾಗಿತ್ತು.
ಕರ್ನಾಟಕ ಮತ್ತು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಲಾವಿದರಾಗಿದ್ದ ಅವರು, ಸುಗಮ ಸಂಗೀತ, ಭಜನ್ ಮತ್ತು ಸಂಗೀತ ಸಂಯೋಜನೆಯಲ್ಲೂ ಪರಿಣತರಾಗಿದ್ದರು. ಚಲನಚಿತ್ರ, ಸಾಕ್ಷ್ಯಚಿತ್ರ, ಗ್ರಾಮಫೋನ್ ಮತ್ತು ಕೆಸೆಟ್‌ಗಳಿಗೆ ಸಂಗೀತ ನಿರ್ದೇಶನ ಮತ್ತು ಧ್ವನಿ ನೀಡಿದ್ದರು.
ಶಾಮಲಾ ಭಾವೆ 9 ಭಾಷೆಗಳಲ್ಲಿ 1,500 ಕ್ಕೂ ಹೆಚ್ಚು ಗೀತೆಗಳಿಗೆ ರಾಗಸಂಯೋಜನೆ ಮಾಡಿದ್ದರು.
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸುರಮಣಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾ ತಿಲಕ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರಗಳು ಸಂದಿದ್ದವು.
ಬೆಂಗಳೂರು ಆಕಾಶವಾಣಿಯ ವಾರ್ಷಿಕ ಸಂಗೀತ ಸ್ಪರ್ಧೆಗಳ ತೀರ್ಪುಗಾರರಾಗಿ ಆಕಾಶವಾಣಿಯ ಸಂಗೀತ ಧ್ವನಿ ಪರೀಕ್ಷಾ ಮಂಡಳಿಯ ಸದಸ್ಯರಾಗಿಯೂ ಶಾಮಲಾ ಜಿ.ಭಾವೆ ಸೇವೆ ಸಲ್ಲಿಸಿದ್ದರು.ಅವರ ನಿಧನಕ್ಕೆ ಸಂಗೀತ ಕ್ಷೇತ್ರದ ಗಣ್ಯರು ತೀವ್ರ ಸಂಪಾಪ ವ್ಯಕ್ತಪಡಿಸಿದ್ದಾರೆ

Leave a Comment