ಷಷ್ಠಿ ವೈಭವ

ಸಂಕಷ್ಟಗಳ ಪರಿಹಾರಕ ರಾಮೋಹಳ್ಳಿಯ ಮುಕ್ತಿನಾಗದಲ್ಲಿ ಸ್ಕಂದ ಷಷ್ಠಿ, ತುಳವ ಷಷ್ಠಿ ಹಾಗೂ ಕುಮಾರ ಷಷ್ಠಿ ವೈಭವ

ವಿಶ್ವದಲ್ಲೇ ಅತಿಎತ್ತರವಾದ ನಾಗ ವಿಗ್ರಹವಿರುವ ಬೆಂಗಳೂರಿನ ರಾಮೋಹಳ್ಳಿಯ ದೊಡ್ಡ ಆಲದ ಮರದ ರಸ್ತೆಯಲ್ಲಿರುವ ಮುಕ್ತಿನಾಗ ಕ್ಷೇತ್ರ ತನ್ನ ಮಹಿಮೆಯ ಮೂಲಕ ದಿನೇದಿನೇ ಬಾನೆತ್ತರಕ್ಕೆ ಅಭಿವೃದ್ಧಿ ಹೊಂದುತ್ತಿದೆ. ಲಕ್ಷಾಂತರ ಜನರಿಂದ ಸೇವೆ ಸ್ವೀಕರಿಸುತ್ತಿದೆ.

ಘಟಸರ್ಪಗಳ ಬೀಡಾಗಿರುವ ಇಲ್ಲಿ ಸರ್ಪಸಂಸ್ಕಾರ, ಕಾಳಸರ್ಪ ಶಾಂತಿ, ಆಶ್ಲೇಷ ಬಲಿ, ನಾಗಪ್ರತಿಷ್ಠೆ, ನಾಗಬಲಿ, ಕುಜ ಮತ್ತು ಶನಿ ಶಾಂತಿಗಳನ್ನು ನಡೆಸಿಕೊಡಲಾಗುತ್ತದೆ. ಹಲವಾರು ಸಮಸ್ಯೆಗಳಿಗೆ ಇಲ್ಲಿ ಪರಿಹಾರ ದೊರೆಯುತ್ತಿದೆ. ಶ್ರೀ ಸುಬ್ರಮಣ್ಯ ಸ್ವಾಮಿ ಅವರ ನಂತರ ಅವರ ಪತ್ನಿ ಶ್ರೀಮತಿ ಗೌರಿ ಸುಬ್ರಮಣ್ಯ ಅವರ ಸಾರಥ್ಯದಲ್ಲಿ ಮುಕ್ತಿ ನಾಗ ದೇವಸ್ಥಾನ ಅತ್ಯಂತ ವ್ಯವಸ್ಥಿತ ಮತ್ತು ಅಚ್ಚುಕಟ್ಟಾಗಿ ನಡೆದುಕೊಂಡು ಹೋಗುತ್ತಿದೆ.

temple1ರಥೋತ್ಸವ: ಮುಕ್ತಿ ನಾಗದಲ್ಲಿ ೨೦೦೪ರಲ್ಲಿ ವಿಶೇಷವಾದ ಕುಂಭಾಭಿಷೇಕ ನಡೆಯಿತು. ಪ್ರತಿ ವರ್ಷಜೇಷ್ಠ ಮಾಸ ಶುದ್ಧ ತ್ರಯೋದಶಿಯಲ್ಲಿ ಬ್ರಹ್ಮರಥೋತ್ಸವ, ಪ್ರತಿ ಮಾಘ ಶುದ್ಧ ಷಷ್ಠಿಯಲ್ಲೂ ರಥೋತ್ಸವ ನಡೆಯುತ್ತದೆ.

ಷಷ್ಠಿಪೂಜೆ: ಕಳೆದ ೧೪ ವರ್ಷಗಳಿಂದ ನಿರಂತರವಾಗಿ ಷಷ್ಠಿಪೂಜೆ ಹಾಗೂ ಇನ್ನಿತರ ವಿಶೇಷ ಸೇವಾ ಕೈಂಕರ್ಯಗಳು ನಿರಂತರವಾಗಿ ನಡೆಯುತ್ತಿದ್ದು, ಮುಕ್ತಿನಾಗ ಕ್ಷೇತ್ರದಲ್ಲಿ ಎಂದಿನಂತೆ ೧೫ನೇ ವರ್ಷದ ಷಷ್ಠಿಪೂಜೆಯನ್ನು ಆಯೋಜಿಸಲಾಗಿದೆ.

೧೦.೦೨.೧೯ ರಂದು ಕುಮಾರ ಷಷ್ಠಿ ನಡೆಯಲಿದ್ದು, ಭಕ್ತಾದಿಗಳು ಸೇವೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.  ಸ್ಕಂದ ಷಷ್ಠಿಯಂದು ಮಯೂರ ವಾಹನೋತ್ಸವ ಹಾಗೂ ಸ್ವಾಮಿಗೆ ಅರಿಶಿನ ಅಲಂಕಾರ ಇರುತ್ತದೆ.  ಆದಿಮೂಲದಲ್ಲಿ ಭಕ್ತಾದಿಗಳ ಕೈಯಲ್ಲಿ ನೇರವಾಗಿ ಹಾಲಿನ ಅಭಿಷೇಕ ಮಾಡಿಸಲಾಗುತ್ತದೆ.  ತುಳುವ ಷಷ್ಠಿ ಹಾಗೂ ಕುಮಾರ ಷಷ್ಠಿಯಲ್ಲೂ ಕ್ಷೀರಾಭಿಷೇಕಕ್ಕೆ ಅವಕಾಶವಿರುತ್ತದೆ.  ಅಭಿಷೇಕ ಮಾಡುವಾಗ ಭಕ್ತರು ತಮ್ಮ ಮನದಲ್ಲಿ ಇಚ್ಛಿಸಿದ ಎಲ್ಲ ಕಾರ್ಯಗಳು ನೆರವೇರುತ್ತದೆ ಎಂಬ ನಂಬಿಕೆಯಿದೆ.

ಆ ಜಮೀನಿನಲ್ಲಿ ಸರ್ಪಶಾಂತಿ ಮಾಡಲು ನಾಗಭೂಷಣ ಅವರಿಂದ ಅನುಮತಿ ಪಡೆದು ಹಿಂದಿರುಗಿದ ಶಾಸ್ತ್ರಿಗಳ ಕನಸಿನಲ್ಲಿ ಮತ್ತೆ ಕಾಣಿಸಿಕೊಂಡ ನಾಗರಾಜ, ತಾನು ದರ್ಶನ ನೀಡಿದ ಸ್ಥಳದಲ್ಲೇ ಆಲಯ ನಿರ್ಮಿಸುವಂತೆ ಆಜ್ಞಾಪಿಸಿತು.ಅವನ ದಯೆಯಿಂದಲೇ ಕಾಂಚೀಪುರದ ಖ್ಯಾತ ಶಿಲ್ಪಿ ಪದ್ಮಶ್ರೀ ಗಣಪತಿ ಸ್ಥಪತಿ ಹಾಗೂ ಅವರ ೧೫ ಜನರತಂಡ ಏಕಶಿಲೆಯಲ್ಲಿ ೧೬ ಅಡಿಯ ೭ ಹೆಡೆ ನಾಗನ ವಿಗ್ರಹವನ್ನು ಸಿದ್ಧಪಡಿಸಿತು.

ಕಾರ್ಯಸಿದ್ಧಿ ವಿನಾಯಕ: ಮುಕ್ತನಾಗದಲ್ಲಿರುವ ಕಾರ್ಯಸಿದ್ಧಿ ವಿನಾಯಕ, ಪಟಾಲಮ್ಮ, ಆದಿಮೂಲ ಹಾಗೂ ಮುಕ್ತಿನಾಗನನ್ನು ಕಳೆದ ೧೪ ವರ್ಷಗಳಿಂದ ನಂಬಿರುವ ಭಕ್ತರು ಅಭೀಷ್ಟಗಳನ್ನು ಈಡೇರಿಸಿಕೊಳ್ಳುತ್ತ ಸಂಕಷ್ಟಗಳನ್ನು ದೂರಮಾಡುತ್ತಿದ್ದಾರೆ. ಜುಂಜಪ್ಪ(ನಾಗಪ್ಪ)ನ ಸ್ಥಳವಾಗಿರುವ ಇಲ್ಲಿನ ಷಷ್ಠಿಪೂಜೆಗಳಲ್ಲಿ ಭಾಗಿಯಾಗಿ ನಾಗರಾಜನ ಕೃಪೆಗೆ ಪಾತ್ರರಾಗುತ್ತಿದ್ದಾರೆ. ಈ ಭವ್ಯ ಕ್ಷೇತ್ರ ಈಗಾಗಲೇ ತನ್ನ ಹೆಗ್ಗುರುಗಳನ್ನು ಮೂಡಿಸುತ್ತಿದ್ದು, ಮತ್ತಷ್ಟು ಹೆಮ್ಮರವಾಗಿ ಬೆಳೆಯುವತ್ತ ದಾಪುಗಾಲಿಟ್ಟಿದೆ.

Leave a Comment