ಶ್ರೀ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಸಚಿವರ ಭೇಟಿ

ನಂಜನಗೂಡು, ಮೇ 29: ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಇಂದು ಶ್ರೀ ಶ್ರೀಕಂಠೇಶ್ವರ ದೇವಾಲಯಕ್ಕೆ ಭೇಟಿ ನೀಡಿ ನಂಜುಂಡೇಶ್ವರನ ದರ್ಶನ ಪಡೆದರು.
ಸಚಿವರಿಗೆ ದೇವಾಲಯದ ವತಿಯಿಂದ ಹೂವಿನ ಹಾರ ಹಾಕಿ ಬರಮಾಡಿಕೊಂಡರು. ಸ್ಥಳೀಯ ಶಾಸಕ ಹರ್ಷವರ್ಧನ್ ಜೊತೆಗೂಡಿ ದರ್ಶನ ಮಾಡಿ ಹತ್ತು ನಿಮಿಷಗಳ ಕಾಲ ಪ್ರಾರ್ಥನೆ ಮಾಡಿಕೊಂಡರು. ಉಪಚುನಾವಣೆಯಲ್ಲಿ ಕೂಡ ದೇವರ ದರ್ಶನ ಪಡೆದು ಚುನಾವಣೆ ಅಖಾಡಕ್ಕೆ ಇಳಿದಿದ್ದರು. ವಿಜಯಮಾಲೆ ಲಭಿಸಿತು. ಜೊತೆಗೆ ಇವರು ಇಷ್ಟಪಟ್ಟು ಕೇಳಿದ ಜಲಸಂಪನ್ಮೂಲ ಖಾತೆಯನ್ನು ಪಡೆದುಕೊಂಡರು. ಆದ್ದರಿಂದ ಇವತ್ತು ಹತ್ತು ನಿಮಿಷಗಳ ಕಾಲ ತಮ್ಮ ಬೇಡಿಕೆಯನ್ನು ಶ್ರೀಕಂಠೇಶ್ವರ ಮುಂದೆ ಇಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ದೇವಾಲಯದ ಅರ್ಚಕರು ಮಂಗಳಾರತಿ ನೀಡಿ ನೀವು ಬೇಡಿಕೊಂಡ ವರಗಳನ್ನು ಈಡೇರಿಸಲಿ ಎಂದು ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಕೊಳ್ಳೇಗಾಲದ ಶಾಸಕ ಮಹೇಶ್, ಮಾಜಿ ಶಾಸಕ ಯೋಗೇಶ್ವರ್, ಪಕ್ಷದ ಮುಖಂಡ ಎಸ್. ಮಹಾದೇವಯ್ಯ, ನಂಜನಗೂಡು ತಾಲೂಕು ಅಧ್ಯಕ್ಷ ಮಹೇಶ್, ನಗರ ಅಧ್ಯಕ್ಷ ಶ್ರೀನಿವಾಸರೆಡ್ಡಿ, ಮಾಜಿ ಅಧ್ಯಕ್ಷ ಬಾಲಚಂದ್ರ, ನಗರಸಭಾ ಸದಸ್ಯ, ನಗರ ಕಾರ್ಯದರ್ಶಿ ಶ್ರೀಕಂಠ, ಮುಖಂಡರಾದ ಕೆಂಪಣ್ಣ, ಕೃಷ್ಣ, ಗಿರೀಶ್, ಕೃಷ್ಣಪ್ಪ ಗೌಡ ಸೇರಿದಂತೆ ಇತರರು ಇದ್ದರು

Share

Leave a Comment