ಶ್ರೀ ಶಿವಂ ಆಸ್ಪತ್ರೆ : 24 ಗಂಟೆ ತುರ್ತು ಚಿಕಿತ್ಸೆ

ರಾಯಚೂರು.ಜು.18- ಜಿಲ್ಲೆಯ ಜನತೆಗೆ ಸತತ 24 ಗಂಟೆ ತುರ್ತು ಚಿಕಿತ್ಸೆ ನೀಡಲು ಏಳು ಜನರ ವೈದ್ಯಕೀಯ ತಂಡ ಪ್ರತಿನಿತ್ಯ ಒಬ್ಬರಂತೆ ಕಾರ್ಯ ನಿರ್ವಹಿಸುತ್ತಿದೆಂದು ವೈದ್ಯರಾದ ವಿಶ್ವನಾಥ ರೆಡ್ಡಿ ತಿಳಿಸಿದರು.
ಅವರಿಂದು ನಗರದ ಶ್ರೀ ಶಿವಂ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿವಂ ಆಸ್ಪತ್ರೆಯಲ್ಲಿ ಉತ್ತಮವಾದ ವೈದ್ಯಕೀಯ ಸೇವೆ ಹೊಂದಿದೆ. ಆಸ್ಪತ್ರೆಯಲ್ಲಿ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯ ಹೊಂದಿದೆ. ನಗರ ಮತ್ತು ಗ್ರಾಮೀಣ ಪ್ರದೇಶದ ಜನರು ಉತ್ತಮ ಆರೋಗ್ಯ ಸೇವೆ ಸಲ್ಲಿಸಲು ದಿನದ 24 ಗಂಟೆಯಲ್ಲಿ ತುರ್ತು ಚಿಕಿತ್ಸೆ ಒದಗಿಸಲಾಗುತ್ತಿದೆ. ಆಸ್ಪತ್ರೆಯಲ್ಲಿ 44 ಹಾಸಿಗೆ, ಐಸಿಯು, ಹೃದಯ ಸಂಬಂಧಿ ಚಿಕಿತ್ಸೆ ಲಭ್ಯವಿದೆ.
ಕಡಿಮೆ ವೆಚ್ಚದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹತ್ತು ದಿನಗಳ ಹಿಂದೆ ಹೃದಯ ಸಂಬಂಧಿತ ಕಾಯಿಲೆ ಹಾಗೂ ಉಸಿರಾಟ ತೊಂದರೆಯಿಂದ ಪದ್ಮಾ ಎಂಬುವವರು ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ವೈದ್ಯರಾದ ಸಂಕೇತ್ ಪಾಟೀಲ್ ಅವರು ಒಂದು ಗಂಟೆವರೆಗೂ ಚಿಕಿತ್ಸೆ ನೀಡಿ ಉಸಿರಾಟ ಕ್ರಿಯೆ ಮರು ಕಳುಹಿಸುವಂತೆ ಮಾಡಿ, ರೋಗಿಯ ಜೀವ ಉಳಿಸಿದರೆಂದು ಹೇಳಿದರು.
ಈ ಸಂದರ್ಭದಲ್ಲಿ ಡಾ.ಎಸ್.ಎಸ್. ರೆಡ್ಡಿ, ಡಾ.ಬಸವನಗೌಡ ಪಾಟೀಲ್, ದೀಪಾ ಇನ್ನಿತರರು ಉಪಸ್ಥಿತರಿದ್ದರು.

Leave a Comment