ಶ್ರೀ ಶಿವಂ ಆಸ್ಪತ್ರೆ : ತ್ರಿವಳಿ ಶಿಶು ಜನನ

ರಾಯಚೂರು.ಸೆ.11- ನಗರದ ಶ್ರೀ ಶಿವಂ ಆಸ್ಪತ್ರೆಯಲ್ಲಿ ಅಪರೂಪದ ತ್ರಿವಳಿ ಶಿಶುಗಳು ಜನಿಸಿವೆ.
ಹೊಸಪೇಟೆಯ ಸುಲೋಚನಾ ಹಾಗೂ ರವಿಕುಮಾರ ದಂಪತಿಗಳಿಗೆ ತ್ರಿವಳಿ ಶಿಶು ಜನಿಸಿದ್ದು, ತಾಯಿ ಮತ್ತು ಮೂವರು ಮಕ್ಕಳು ಆರೋಗ್ಯವಾಗಿದ್ದಾರೆ. ಡಾ.ದೀಪಾಶ್ರೀ ಪಾಟೀಲ್ ಹಾಗೂ ಡಾ.ಜೆ.ಬಸವನಗೌಡ ಶಸ್ತ್ರ ಚಿಕಿತ್ಸೆ ಮೂಲಕ ಅತ್ಯಂತ ಸುರಕ್ಷಿತ ಹಾಗೂ ಆರೋಗ್ಯಪೂರ್ಣ ಹೆರಿಗೆ ಮಾಡಲಾಯಿತು. ಸುಲೋಚನಾ (28) ಅವರು ಅಧಿಕ ರಕ್ತದೊತ್ತಡ ಹಾಗೂ ರಕ್ತ ಹೀನತೆಯಿಂದ ಬಳಲುತ್ತಿದ್ದರು. ಅವಧಿ ಪೂರ್ವ 7 ತಿಂಗಳಲ್ಲಿ ಹೆರಿಗೆ ಮಾಡಲಾಗಿದೆ. ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಗರ್ಭೀಣಿ ಸುಲೋಚನಾ ಅವರು ಆಸ್ಪತ್ರೆಗೆ ದಾಖಲಾಗಿದ್ದರು.
ಸ್ತ್ರೀ ರೋಗ ತಜ್ಞರಾದದ ಡಾ.ದೀಪಾಶ್ರೀ ಪಾಟೀಲ್ (ಎಕ್ಸ್ ಮೇಸರ್) ಹಾಗೂ ಮಕ್ಕಳ ತಜ್ಞರಾದ ಡಾ.ಜೆ.ಬಸವನಗೌ‌ಡ ಪಾಟೀಲ್ ಅವರ ನಿಗಾದಲ್ಲಿ ಹೆರಿಗೆ ಮಾಡಲಾಗಿತ್ತು. ತ್ರಿವಳಿ ಶಿಶುಗಳಲ್ಲಿ ಎರಡು ಗಂಡು ಅನುಕ್ರಮವಾಗಿ 1.49 ಕೆಜಿ ಮತ್ತು 1.54 ಕೆಜಿ ಹೆಣ್ಣು ಮಗು 1.31 ತೂಕ ಹೊಂದಿದ್ದು, ಮೂರು ಮಕ್ಕಳು ಆರೋಗ್ಯವಾಗಿದ್ದಾರೆಂದು ಆಸ್ಪತ್ರೆಯ ವ್ಯವಸ್ಥಾಪಕರಾದ ರಾಜಾ ಪುರೋಹಿತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment