ಶ್ರೀ ಬನಶಂಕರಿ ಅಮ್ಮನವರ ರಥೋತ್ಸವ

ಬೆಂಗಳೂರು, ಜ. ೭- ನಗರದ ಮಲ್ಲೇಶ್ವರದ ಶ್ರೀ ಮಹಾಗಣಪತಿ ದೇವಸ್ಥಾನದ ಆವರಣದಲ್ಲಿರುವ ಶ್ರೀ ಬನಶಂಕರಿ ಅಮ್ಮನವರ 20ನೇ ವರ್ಷದ ಬನದ ಹುಣ್ಣಿಮೆ ಪ್ರಯುಕ್ತ ಜ. 9 ರಿಂದ 15ರವರೆಗೆ ರಥೋತ್ಸವ, ಹೋಮಗಳು ಹಾಗೂ ಕಲ್ಯಾಣೋತ್ಸವಗಳು ನಡೆಯಲಿವೆ.
ಜ. 9 ರಂದು ಬೆಳಿಗ್ಗೆ 8ಕ್ಕೆ ಗಣಪತಿ ಪೂಜೆ, ಗಂಗಾಪೂಜೆ, ಯಾಗಶಾಲ ಪ್ರವೇಶ, ಸಂಜೆ 6ಕ್ಕೆ ವೇದಪಾರಾಯಣ, ಅಂಕುರಾರ್ಪಣೆ ಮತ್ತು ಧ್ವಜಾರೋಹಣ, 10 ರಂದು ಶುಕ್ರವಾರ ಬನದ ಹುಣ್ಣಿಮೆಯ ಪ್ರಯುಕ್ತ ಶ್ರೀ ಬನಶಂಕರಿ ಅಮ್ಮನವರ ರಥೋತ್ಸವ, ಬೆಳಿಗ್ಗೆ 108 ಲೀಟರ್ ಹಾಲಿನ ಅಭಿಷೇಕ, ರಥೋತ್ಸವಾಂಗ ಹೋಮ, 11ಕ್ಕೆ ವಿಶೇಷ ಅಲಂಕಾರ ಮಾಂಗಲ್ಯಧಾರಣೆ, ಸುಮಂಗಲಿಯರಿಂದ ತಂಬಿಟ್ಟಿನ ಆರತಿ, ಮಡ್ಲಕ್ಕಿ ಸೇವೆ, 12.40ಕ್ಕೆ ಅಮ್ಮನವರ ರಥಾರೋಹಣ, ತೀರ್ಥಪ್ರಸಾದ ವಿನಿಯೋಗ.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ, ಬಿಬಿಎಂಪಿ ಸದಸ್ಯ ಜಿ. ಮಂಜುನಾಥ್ ರಾಜು ಅವರುಗಳು ಆಗಮಿಸಲಿದ್ದಾರೆ.
ಜ. 11 ರಂದು ಬೆಳಿಗ್ಗೆ 8ಕ್ಕೆ ರುದ್ರಹೋಮ, ಧನ್ವಂತರಿ ಹೋಮ, 12.30ಕ್ಕೆ ಪೂರ್ಣಾಹುತಿ, ಸಂಜೆ 6.30ಕ್ಕೆ ಶ್ರೀ ಗಿರಿಜಾ ಶಂಕರ ಕಲ್ಯಾಣೋತ್ಸವವನ್ನು ಏರ್ಪಡಿಸಲಾಗಿದೆ.

Leave a Comment