ಶ್ರೀ ತ್ರಿನೇತ್ರ ಮಹಂತ ಶಿವಯೋಗಿಸ್ವಾಮಿಜೀಗೆ ಅಭಿನಂದನೆ

ಪಾಂಡವಪುರ, ಜೂ.13- ಇಂಡಿಯನ್ ವರ್ಚಿಯಲ್ ಫಾರ್ ಪೀಸ್ ಆಂಡ್ ಎಜುಕೇಷನ್, ಗರ್ವಮೆಂಟ್ ಆಫ್ ಇಂಡಿಯಾ ಸಂಸ್ಥೆಯಿಂದ ಗೌರವ ಡಾಕ್ಟರೇಟ್ ಪಡೆದ
ತಾಲೂಕಿನ ಬೇಬಿಗ್ರಾಮದ ದುರ್ದಂಡೇಶ್ವರ ಮಠ ಹಾಗೂ ಚಂದ್ರವನ ಆಶ್ರಮದ ಪೀಠಾಧ್ಯಕ್ಷ ಶ್ರೀ ತ್ರಿನೇತ್ರ ಮಹಂತ ಶಿವಯೋಗಿಸ್ವಾಮಿಜೀ ಅವರನ್ನು ತಾಲೂಕಿನ ವೀರಶೈವಲಿಂಗಾಯತ ಹಿತರಕ್ಷಣ ಸಮಿತಿಯ ಮುಖಂಡರು ಶ್ರೀತ್ರಿನೇತ್ರಮಹಂತಶಿವಯೋಗಿಸ್ವಾಮಿಜೀ ಅಭಿನಂಧಿಸಿದರು.
ಶ್ರೀರಂಗಪಟ್ಟಣದ ಚಂದ್ರವನ ಆಶ್ರಮಕ್ಕೆ ತೆರಳಿದ ಮುಖಂಡರು ಡಾ.ಶ್ರೀತ್ರಿನೇತ್ರಮಹಂತಶಿವಯೋಗಿಸ್ವಾಮಿಜೀಗಳನ್ನು ಆತ್ಮೀಯವಾಗಿ ಅಭಿನಂಧಿಸಿ ಶುಭಕೋರಿದರು.
ಅಭಿನಂಧನೆ ಸ್ವೀಕರಿಸಿ ಮಾತನಾಡಿದ ಡಾ.ಶ್ರೀತ್ರಿನೇತ್ರಮಹಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, ನನ್ನ ಆರಾದ್ಯಧೈವ ಗುರುಗಳಾದ ಲಿಂಗೈಕ್ಯೆ ಮರೀದೇವರುಸ್ವಾಮೀಜಿಗಳು ನಿಧನರಾದ ಬಳಿಕ ನನ್ನ ಮನಸ್ಸಿಗೆ ತುಂಬಾ ನೋವುಂಟಾಯಿತು. ಆ ಸಂದರ್ಭದಲ್ಲಿ ನಾನು ಯಾವುದೇ ಮಠಮಾನ್ಯಗಳು ಬೇಡ ಎಂದು ತ್ಯಜಿಸಿ ಹಿಮಾಲಯಕ್ಕೆ ಹೋಗಲು ನಿರ್ಧರಿಸಿದ್ದೆ. ಆದರೆ ನನ್ನ ಗುರುಗಳಾದ ಮರೀದೇವರುಸ್ವಾಮೀಜಿಯವರು ಧೈವದರ್ಶನದಂತೆ ನೆನಪಾಗಿ ನೀನು ಈ ಮಠವನ್ನು ಮುಂದುವರಸಿಕೊಂಡು ಹೋಗಬೇಕು ಎನ್ನುವ ಧೈವಸ್ಪರ್ಶನೀಡಿದ್ದರಿಂದ ನಾನು ಈ ಮಠವನ್ನು ಮುಂದುವೆರೆಸಿಕೊಂಡು ಹೋಗುತ್ತಿದ್ದೇನೆ. ನನ್ನ ಗುರುಗಳ ಆಶೀರ್ವಾದದಿಂಲೇ ನನ್ನಗೆ ಗೌರವ ಡಾಕ್ಟರೇಟ್ ಸಿಕ್ಕಿದೆ ಎಂದು ಮರೀದೇವರುಸ್ವಾಮೀಜಿನ್ನು ಭಕ್ತಿಯಿಂದ ನೆನೆದುಕೊಂಡರು.
ವೀರಶೈವ ಲಿಂಗಾಯತ ಹಿತರಕ್ಷಣ ಸಮಿತಿಯ ಅಧ್ಯಕ್ಷ ಎಸ್.ಎ.ಮಲ್ಲೇಶ್ ಮಾತನಾಡಿ, ಬೇಬಿ ಗ್ರಾಮದ ದುರ್ದಂಡೇಶ್ವರ ಮಠ ಹಾಗೂ ಚಂದ್ರವನ ಆಶ್ರಮದ ಪೀಠಾಧ್ಯಕ್ಷ ಶ್ರೀತ್ರಿನೇತ್ರಮಹಂತಶಿವಯೋಗಿಸ್ವಾಮಿಜೀ ಅವರಿಗೆ ಅವರ ಸಮಾಜ ಸೇವೆ, ಸಾಧನೆಯನ್ನು ಮೆಚ್ಚಿನ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿರುವುದು ನಮ್ಮ ತಾಲೂಕಿಗೆ ಕೀರ್ತಿತಂದಿದ್ದಾರೆ. ಸ್ವಾಮೀಜಿಗಳು ಎರಡು ಮಠಗಳ ಪೀಠಾಧ್ಯಕ್ಷರಾಗಿ ಸಾಕಷ್ಟ ಸಮಾಜ ಸೇವೆಯನ್ನು ಮಾಡಿ ಜನಮೆಚ್ಚಿಗೆಯನ್ನು ಪಡೆದಿದ್ದಾರೆ. ಜತೆಗೆ ಮಠದ ಹಿಂದಿನ ಪೀಠಾಧ್ಯಕ್ಷರಾಗಿದ್ದ ಲಿಂಗೈಕ್ಯ ಮರೀದೇವರು ಸ್ವಾಮೀಜಿಗಳನ್ನು ತ್ರಿನೇತ್ರಸ್ವಾಮೀಜಿಗಳು ಕೊನೆಯ ದಿನಗಳಲ್ಲಿ ತುಂಬಾ ಚನ್ನಾಗಿ, ಸಂತೋಷದಿಂದ ನೋಡಿಕೊಂಡರು ಅದರ ಫಲವಾಗಿ ಸ್ವಾಮೀಜಿಯವರಿಗೆ ಡಾಕ್ಟರೇಟ್ ಪದವಿ ದೊರೆತಿದೆ ಎಂದು ಬಣ್ಣಿಸಿದರು.
ಸಂದರ್ಭದಲ್ಲಿ ವೀರಶೈವ ಲಿಂಗಾಯತ ಹಿತರಕ್ಷಣ ಸಮಿತಿಯ ಉಪಾಧ್ಯಕ್ಷ ನಂಜುಂಡಸ್ವಾಮಿ, ಮುಖಂಡರಾದ ಸಿದ್ದಪ್ಪ, ಪದ್ಮರಾಜು, ರಾಜಣ್ಣ, ಜಗದೀಶ್, ಚಂದ್ರಶೇಖರಪ್ಪ, ಸೋಮಶೇಖರ್, ಮಹೇಶ್, ಯೋಗೀಶ್, ರಾಜೇಂದ್ರ, ದಯಾನಂದ, ಮಹದೇವಪ್ಪ, ಬೇಬಿಶಿವಣ್ಣ ಸೇರಿದಂತೆ ಹಲವರು ಹಾಜರಿದ್ದರು.

Leave a Comment