ಶ್ರೀಲಂಕಾ ಸರಣಿ ಗೆಲುವು: ಭಾವನಾತ್ಮಕ ಟ್ವೀಟ್ ಮಾಡಿದ ರೋಹಿತ್

ಹೈದರಾಬಾದ್, ಡಿ. ೧೯- ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಗೆದ್ದ ರೋಹಿತ್‌ ಶರ್ಮಾ ಭಾವನಾತ್ಮಕವಾಗಿ ಟ್ವೀಟ್‌ ಮಾಡಿದ್ದಾರೆ.

ನನ್ನ ಜೀವನದ ಕೊನೆ ಕ್ಷಣದವರೆಗೂ ಈ ದಿನವನ್ನು ನೆನಪಿಸಿಕೊಳ್ಳುತ್ತೇನೆ. ಇದೇ ಮೊದಲ ಬಾರಿಗೆ ಇಂತಹದೊಂದು ಭಾವನೆ ವ್ಯಕ್ತವಾಗಿದೆ. ಈ ಭಾವನೆಯನ್ನು ಅಳೆಯುವುದಕ್ಕೂ ಮತ್ತು ಹೋಲಿಕೆ ಮಾಡುವುದಕ್ಕೂ ಆಗುವುದಿಲ್ಲ. ನನ್ನ ತಂಡದ ಸಹ ಆಟಗಾರರೊಂದಿಗೆ ಇಂತಹ ಅತ್ಯುತ್ತಮ ಸಾಧನೆ ಮಾಡಿದ್ದು ನಿಜಕ್ಕೂ ಗೌರವ ತಂದಿದೆ. ಇದಕ್ಕಿಂತ ಸಂತೋಷ ಬೇರೆ ಇಲ್ಲವೆಂದು ರೋಹಿತ್ ಶರ್ಮಾ ಟ್ವೀಟ್ ಮಾಡಿದ್ದಾರೆ.

ಭಾನುವಾರ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡ ಪ್ರವಾಸಿ ಶ್ರೀಲಂಕಾ ವಿರುದ್ಧ ಭರ್ಜರಿ ಜಯಸಾಧಿಸಿ ಸರಣಿ ಕೈವಶ ಮಾಡಿಕೊಂಡಿತ್ತು. ಸರಣಿ ಜಯದ ಕುರಿತು ಸೋಮವಾರದಂದು ರೋಹಿತ್ ಶರ್ಮಾ ತಮ್ಮ ಭಾವನೆಗಳನ್ನು ಟ್ವೀಟರ್ ಮೂಲಕ ಹಂಚಿಕೊಂಡಿದ್ದರು.

Leave a Comment