ಶ್ರೀಲಂಕಾ ಪ್ರಬಲ ಹೋರಾಟ

ಕೊಲಂಬೊ, ಆ. ೬- ಕೊಲಂಬೋ ಟೆಸ್ಟ್‌ನಲ್ಲಿ ಇನ್ನಿಂಗ್ಸ್ ಅಂತರದ ಸೋಲು ತಪ್ಪಿಸಿಕೊಳ್ಳಲು ಲಂಕಾ ಬ್ಯಾಟ್ಸ್‌ಮನ್‌ಗಳು ಹೋರಾಟ ಮುಂದುವರಿಸಿದ್ದಾರೆ. ೨ ವಿಕೆಟ್ ಕಳೆದುಕೊಂಡು ೨೦೯ ರನ್‌ಗಳಿಂದ ೪ನೇ ದಿನದಾಟ ಆರಂಭಿಸಿದ್ದ ಅತಿಥೇಯರು, ಬೋಜನಾ ವಿರಾಮದ ವೇಳೆಗೆ ೪ ವಿಕೆಟ್ ನಷ್ಟದಲ್ಲಿ ೩೦೨ ರನ್‌ಗಳಿಸಿದ್ದು, ಇನ್ನಿಂಗ್ಸ್ ಮುನ್ನಡೆಗೆ ಇನ್ನೂ ೧೩೫ ರನ್‌ಗಳಿಸಬೇಕಾಗಿದೆ. ದಿನದ ಮೊದಲ ಅವಧಿಯಲ್ಲೇ ಲಂಕಾದ ೨ ವಿಕೆಟ್ ಕೀಳುವಲ್ಲಿ ಭಾರತದ ಬೌಲರ್‌ಗಳು ಯಶಸ್ವಿಯಾಗಿದ್ದರು.

ಸಂಕ್ಷಿಪ್ತ ಸ್ಕೋರ್ ಬೋರ್ಡ್
ಭಾರತ ಮೊದಲ ಇನ್ನಿಂಗ್ಸ್ ೬೨೨/೯ ಡಿಕ್ಲೇರ್
ಶ್ರೀಲಂಕಾ ೧೮೩ & ೩೦೨/೪ (ಫಾಲೋಅನ್)
ದಿಮುತ್ ಕರುಣರತ್ನೆ ೧೩೬* ೨೮೮ ಎಸೆತ, ೧೬ ಬೌಂಡರಿ
ಉಪುಲ್ ತರಂಗ ೨, ೯ ಎಸೆತ
ಕುಸಲ್ ಮೆಂಡಿಸ್ ೧೧೬, ೧೩೫ ಎಸೆತ,  ೧೭ಬೌಂಡರಿ
ಪಿ.ಪುಷ್ಪಕುಮಾರ ೧೬, ೫೮ ಎಸೆತ,  ೩ ಬೌಂಡರಿ
ದಿನೇಶ್ ಚಂಡಿಮಾಲ್ ೨, ೫ ಎಸೆತ,
ಆಂಜಲೋ ಮ್ಯಾಥ್ಯೂಸ್ ೨೮* ೫೨ ಎಸೆತ,  ೨ ಬೌಂಡರಿ, ೧ ಸಿಕ್ಸರ್

ಎಂದಿನಂತೆ ಆರ್ ಆಶ್ವಿನ್ ಭಾರತದ ವಿಕೆಟ್ ಬೇಟೆಗೆ ಮುಹೂರ್ತವಿಟ್ಟರು. ೧೬ ರನ್ ಗಳಿಸಿ ಆಡುತ್ತಿದ್ದ ಪುಷ್ಪಕುಮಾರ್, ಆಶ್ವಿನ್ ಸ್ಪಿನ್ ಬಲೆಯಲ್ಲಿ ಸಿಲುಕಿ ಕ್ಲೀನ್ ಬೌಲ್ಡ್ ಆದರು. ಬಳಿಕ ಬಂದ ನಾಯಕ ಚಾಂಡಿಮಾಲ್ ಮತ್ತೊಮ್ಮೆ ಜವಬ್ಧಾರಿಯುತ ಆಟವಾಡುವಲ್ಲಿ ವಿಫಲರಾದರು. ಮೊದಲ ಇನ್ನಿಂಗ್ಸ್‌ನಲ್ಲಿ ೧೦ ರನ್‌ಗಳಿಗೆ ವಿಕೆಟ್ ಒಪ್ಪಿಸಿದ್ದ ಚಾಂಡಿಮಾಲ್, ಇಂದು ಕೇವಲ ೨ ರನ್‌ಗಳಿಸಿ ಜಡೇಜಾ ಬೌಲಿಂಗ್‌ನಲ್ಲಿ ರಹಾನೆಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಆದರೆ ತಾಳ್ಮೆಯ ಬ್ಯಾಟಿಂಗ್ ನಡೆಸುತ್ತಿರುವ ಒಪನರ್ ಕರುಣರತ್ನೆ, ೩೦೦ ಎಸೆತಗಳನ್ನು ಎದುರಿಸಿ ೧೪೦ ರನ್‌ಗಳಿಸಿದ್ದು ತಂಡದ ಹೀನಾಯ ಸೋಲನ್ನು ತಪ್ಪಿಸುವಲ್ಲಿ ಪ್ರಯತ್ನ ಮುಂದುವರಿಸಿದ್ದಾರೆ.

ಕರುಣರತ್ನೆಗೆ ಸಾಥ್ ನೀಡಿರುವ ಅನುಭವಿ ಅಂಜಲೋ ಮ್ಯಾಥ್ಯೂಸ್ ೨೯ ರನ್‌ಗಳಿಸಿದ್ದಾರೆ. ನಾಳೆ ೨ನೇ ಟೆಸ್ಟ್‌ನ ಅಂತಿಮ ದಿನವಾಗಿದ್ದು ಉಳಿದ ೬ ವಿಕೆಟ್‌ಗಳ ನೆರವಿನಿಂದ ಪಂದ್ಯವನ್ನು ಕನಿಷ್ಟ ಡ್ರಾ ಮಾಡಿಕೊಳ್ಳಲು ಲಂಕಾ ಭಾರೀ ಹೋರಾಟವನ್ನೇ ಮಾಡಬೇಕಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ೬೨೨ ರನ್‌ಗಳಿಗೆ ಡಿಕ್ಲೇರ್ ಘೋಷಿಸಿ ಬಳಿಕ ಕೇವಲ ಲಂಕಾ ಬ್ಯಾಟ್ಸ್‌ಮನ್‌ಗಳನ್ನು ಕೇವಲ ೧೮೩ರನ್‌ಗಳಿಗೆ ಭಾರತ ನಿಯಂತ್ರಿಸಿತ್ತು. ಇದೇ ಭರವಸೆಯಲ್ಲಿ ಲಂಕಾ ಮೇಲೆ ನಿನ್ನೆ ಫಾಲೋಅನ್ ಹೇರಿದ್ದ ಟೀಂ ಇಂಡಿಯಾ, ಸುಲಭ ಗೆಲುವಿನ ನಿರೀಕ್ಷೆ ಹೊಂದಿತ್ತು. ಆದರೆ ಭಾರತದ ಹುಮ್ಮಸ್ಸಿಗೆ ಕರುಣರತ್ನೆ-ಮೆಂಡಿಸ್ ಜೋಡಿ ಅಡ್ಡಿಯಾದರು.

೪೩೯ ರನ್‌ಗಳ ಹಿನ್ನಡೆಯೊಂದಿಗೆ ಫಾಲೋಅನ್ ಹೇರಲ್ಪಟ್ಟು ೨ನೇ ಇನ್ನಿಂಗ್ಸ್ ಆರಂಭಿಸಿದ್ದ ಲಂಕಾ ೭ ರನ್‌ಗಳಿಸುವಷ್ಟರಲ್ಲೇ ಮೊದಲ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಅದರೆ ಆ ಬಳಿಕ ಕರುಣರತ್ನೆ ಜೊತೆಗೂಡಿದ ಮೆಂಡಿಸ್ ಅಮೋಘ ೧೯೧ ರನ್‌ಗಳ ಜತೆಯಾಟದಲ್ಲಿ ಭಾಗಿಯಾದರು. ಇನ್ನೆನು ೩ನೇ ದಿನದಾಟ ಮುಗಿಯಲು ೫ ಓವರ್‌ಗಳು ಬಾಕಿ ಇರುವಾಗ ಪಾಂಡ್ಯ ಬೌಲಿಂಗ್‌ನಲ್ಲಿ ಕೀಪರ್ ಸಹಾಗೆ ಕ್ಯಾಚಿತ್ತು ೧೧೦ ರನ್‌ಗಳಿಸಿ ನಿರಾಸೆಯಿಂದ ನಿರ್ಗಮಿಸಿದ್ದರು

Leave a Comment