ಶ್ರೀರಾಮ ಸಕ್ಕರೆ ಕಾರ್ಖಾನೆ ಪುನಾರಂಭಕ್ಕೆ ನಿರ್ಧಾರ

20 ಕೋಟಿ ರೂ ನೆರವಿಗೆ ಸರ್ಕಾರಕ್ಕೆ ಪ್ರಸ್ತಾವನೆ
ಮೈಸೂರು, ಜು. 17- ಕಾರ್ಖಾನೆಯು ಹೊಂದಿರುವ ಜಮೀನಿನ ಪೈಕಿ 50 ಎಕರೆ ಭೂಮಿಯನ್ನು ಬ್ಯಾಂಕಿಗೆ ಒತ್ತೆ ಇಟ್ಟು ಸರ್ಕಾರದ ಗ್ಯಾರಂಟಿಯೊಂದಿಗೆ ಮೈಸೂರು ಜಿಲ್ಲೆಯ ಬ್ಯಾಂಕ್‍ಗಳು ಕಾರ್ಖಾನೆಗೆ ಆರ್ಥಿಕ ನೆರವನ್ನು ನೀಡಲು ಸರ್ಕಾರದ ಒಪ್ಪಿಗೆ ಇದೆ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದರು.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಇಂದು ಬೆಳಿಗ್ಗೆ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ 2014ನೇ ಮಾರ್ಚಿನಿಂದ ವೇತನ ಸ್ಥಗಿತವಾದ ಕಾರಣ ನೌಕರರ ಸಂಘದವರು ದಿನಾಂಕ 1/3/2016 ರಂದು ಮನವಿ ಸಲ್ಲಿಸಿ, ಅನಿಶ್ಚಿತ ವೇತನ ಪಾವತಿಯಿಂದಾಗಿ ಜೀವನ ನಿರ್ವಹಣೆ ಕಷ್ಟವಾಗಿದ್ದು, ಮತ್ತು ನೌಕರ ಸಂಘದ ಮೇರೆಗೆ ಕಾರ್ಖಾನೆಯ ಆರ್ಥಿಕ ಪರಿಸ್ಥಿತಿ ಗಮನಿಸಿ ಈ ಉಭಯತ್ರರ ಹಿತದೃಷ್ಠಿಯಿಂದ ಕಾರ್ಖಾನೆಯನ್ನು ಪುನರರಾಂಭಿಸಲು ತಿಳಿಸಿದರು.
ಈ ಮೆಮೋರ್ಯಾಂಡಮ್ ಆಫ್ ಸೆಟ್ಲಮೆಂಟ್‍ನಲ್ಲಿ ಕಟ್-ಆಫ್ ದಿನಾಂಕ 30.11.2015ರಂದು 2014ನೇ ಮಾರ್ಚಿಯಿಂದ 2015ನೇ ನೆವಂಬರ್ ಅತ್ಯಂದವರೆಗೆ ನಿವೃತ್ತ ಮತ್ತು ಸೇವೆಯಲ್ಲಿರುವ 296 ಮಂದಿ ನೌಕರ/ಕಾರ್ಮಿಕರ ಬಾಕಿ ವೇತನ ಮತ್ತಿತ್ತರೆ ಕಾನೂನು ಬದ್ಧ ಸೌಲಭ್ಯಗಳ ಬಾಬ್ತು ರೂ. 14,69,95,892-00ಗಳನ್ನು ಪಾವತಿಸಬೇಕಾಗಿರುತ್ತದೆ ಎಂದರು.
ಇದನ್ನು ವಿವಿಧ ಹಂತಗಳಲ್ಲಿ ಪರಿಶೀಲಿಸಿ ಅಂತಿಮವಾಗಿ ಮೆಮೋರ್ಯಾಂಡಮ್ ಆಫ್ ಸೆಟ್ಲಮೆಂಟ್‍ರನ್ವಯ ಪಾವತಿಸಬೇಕಾದ ಹಣವನ್ನು ಕಾರ್ಖಾನೆಯ ಸ್ಥಿರ ಆಸ್ತಿಯನ್ನು ಬ್ಯಾಂಕಿಗೆ ಅಡವು ಮಾಡಿ
ಕಾರ್ಖಾನೆಯ ಜಮೀನಿನ ಪೈಕಿ ಭಾಗಶಃ ಜಮೀನನ್ನು ಬ್ಯಾಂಕಿಗೆ ಒತ್ತೆ ಇಟ್ಟು ಸರ್ಕಾರದ ಗ್ಯಾರಂಟಿಯೊಂದಿಗೆ 14.70ಕೋಟಿಗಳನ್ನು ಸರ್ಕಾರದಿಂದ ಸಾಲವನ್ನಾಗಿ ನೀಡಲು ಒಪ್ಪಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಶ್ರೀರಾಮ ಕಾರ್ಖಾನೆಯ ಚೀಫ್ ಇಂಜಿನಿಯರಿಂಗ್ ಪುಂಡರೀಕಗಾಂಧಿ, ಅಕೌಂಟೆಂಟ್ ಆರ್.ರಾಮಕೃಷ್ಣ, ಸೂಪರ್‍ಇನ್‍ಟೆಂಡೆಂಟ್ ಕೆ.ವಿ ಅಶೋಕ್, ಮೀಟಿಂಗ್ ಸೆಕ್ಷನ್ ಸೂಪರ್‍ಇನ್‍ಟೆಂಡೆಂಟ್ ಹೆಚ್.ವಿ ಸಣ್ಣಪ್ಪಾಜಿ, ಲೀಡ್ ಬ್ಯಾಂಕ್ ಮ್ಯಾನೇಜರ್ ಶಿವಲಿಂಗಯ್ಯ ಇನ್ನಿತರರು ಉಪಸ್ಥಿತರಿದ್ದರು.

Leave a Comment