ಶ್ರೀರಾಮ ಮಂದಿರದಲ್ಲಿ ಎರಡು ದಿನಗಳ ಕಾಲ ಪೂಜಾ ಮಹೋತ್ಸವ

ಮಂಡ್ಯ : ನ.10- ತಾಲೂಕಿನ ಹೊಳಲು ಗ್ರಾಮದಲ್ಲಿ ಶ್ರೀ ರಾಮ ಭಕ್ತ ಮಂಡಳಿ ವತಿಯಿಂದ ಶ್ರೀರಾಮ ಮಂದಿರದಲ್ಲಿ ಎರಡು ದಿನಗಳ ಕಾಲ ಪೂಜಾ ಮಹೋತ್ಸವ ಹಾಗೂ ಅನ್ನಸಂತರ್ಪಣೆ ನಡೆಯಿತು.
ಶುಕ್ರವಾರ ರಾತ್ರಿ ಅಲಂಕೃತ ಶ್ರೀರಾಮ ಭಾವಚಿತ್ರವನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ಬಳಿಕ ಪ್ರಸಾದ ವಿತರಣೆ ಮಾಡಲಾಯಿತು.
ಶನಿವಾರ ಬೆಳಗ್ಗೆ ರಾಮಮಂದಿರದಲ್ಲಿ  ನವಗ್ರಹ ಹೋಮ, ಗಣಪತಿ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆದವು. ಮಾಜಿ ಶಾಸಕ ಎಚ್.ಡಿ. ಚೌಡಯ್ಯ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಗ್ರಾಮಕ್ಕೆ ಒಳ್ಳೆಯದಾಗಬೇಕು. ಎಲ್ಲಾ ಜಾತಿ, ಧರ್ಮದ ಜನತೆ ಶಾಂತಿ-ಸೌಹಾರ್ಧಯುತವಾಗಿ ಹೊಂದಿಕೊಂಡು ಹೋಗಬೇಕು. ಎಲ್ಲರೂ ಒಟ್ಟಿಗೇ ಬಾಳಬೇಕು. ದೇವರ ಕಾರ್ಯಕ್ರಮಗಳನ್ನು ಮಾಡಿದಾಗ ಮನಸ್ಸಿಗೆ ಶಾಂತಿ-ನೆಮ್ಮದಿ ದೊರೆಯುತ್ತದೆ ಎಂದು ಹೇಳಿದರು.
ರಾಮಭಕ್ತ ಮಂಡಳಿ ವತಿಯಿಂದ ಡಾ. ಚೌಡಯ್ಯ, ಮಾಜಿ ಶಾಸಕ ಎಚ್.ಬಿ. ರಾಮು, ರಾಜ್ಯ ಒಕ್ಕಲಿಗರ ಸಂಘದ ಮಾಜಿ ಉಪಾಧ್ಯಕ್ಷ ಎಚ್.ಎಲ್. ಶಿವಣ್ಣ, ಜಾ.ದಳ ಮುಖಂಡ ಕುಮಾರ್ ಅವರನ್ನು ಅಭಿನಂದಿಸಲಾಯಿತು.
ಸಂಘದ ಪದಾಧಿಕಾರಿಗಳಾದ ಶ್ರೀಧರ್, ಗೋಪಿ, ಚೆನ್ನಪ್ಪ, ಚಿಕ್ಕೋನು, ಕಾಳಚೆನ್ನಯ್ಯ, ಶಿವತೇಜ, ಶಂಕರ್, ಕರಿಯಪ್ಪ, ಬದ್ರಿನಾರಾಯಣ, ಪ್ರದೀಪ್‍ಕುಮಾರ್, ನಾರಾಯಣ, ಭಗವಂತ ಹಾಗೂ ಗ್ರಾಮ ಎಲ್ಲಾ ಜನರು ಭಾಗವಹಿಸಿ ಯಶಸ್ವಿಗೊಳಿಸಿದರು. ಸಹಸ್ರಾರು ಮಂದಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು.

Leave a Comment