ಶ್ರೀಮಂತ ಅಥ್ಲೀಟ್‌ಗಳ ಪಟ್ಟಿಯಲ್ಲಿ ಸಿಂಧುಗೆ ಸ್ಥಾನ

ನವದೆಹಲಿ,ಆ೨೨- ವಿಶ್ವದ ಶ್ರೀಮಂತ ಮಹಿಳಾ ಅಥ್ಲೀಟ್‌ಗಳ ಪಟ್ಟಿಯಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಅಗ್ರ-೧೦ನೇ ಸ್ಥಾನದಲ್ಲಿದ್ದಾರೆ.

ಅಮೆರಿಕದ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್ ಸತತ ಮೂರನೇ ವರ್ಷವೂ ವಿಶ್ವದ ಅತ್ಯಂತ ಶ್ರೀಮಂತ ಅಥ್ಲೀಟ್ ಆಗಿ ಮುಂದುವರಿದಿದ್ದಾರೆ ಎಂದು ಫೋರ್ಬ್ಸ್ ಬಿಡುಗಡೆ ಮಾಡಿರುವ ತನ್ನ ವಾರ್ಷಿಕ ಪಟ್ಟಿಯಲ್ಲಿ ಬಹಿರಂಗಪಡಿಸಿದೆ.
ಬ್ಯಾಡ್ಮಿಂಟನ್ ಆಟಗಾರ್ತಿ ಸಿಂಧು ೫೯,೪೫ ಕೋಟಿ ರೂಪಾಯಿ (೮.೫ ಮಿಲಿಯನ್ ಡಾಲರ್) ಹಣ ಹೊಂದಿದ್ದರೆ, ನಿವೃತ್ತ ರೇಸ್ ಕಾರು ಚಾಲಕಿ ಡನಿಕಾ ಪ್ಯಾಟ್ರಿಕ್ (೭.೫ ಮಿಲಿಯನ್ ಡಾಲರ್) ಹಣ ಹೊಂದಿದ್ದು ವಿಶ್ವದ ಶ್ರೀಮಂತ ಮಹಿಳಾ ಅಥ್ಲೀಟ್‌ಗಳ ಪಟ್ಟಿಯಲ್ಲಿ ಅಗ್ರ-೧೦ನೇ ಸ್ಥಾನಗಳನ್ನು ಗಳಿಸಿ ಟೆನಿಸ್‌ಯೇತರ ಶ್ರೀಮಂತ ಕ್ರೀಡಾಪಟುವಾಗಿದ್ದಾರೆ.
ಇಬ್ಬರೂ ಕ್ರಮವಾಗಿ ಏಳನೇ ಹಾಗೂ ೯ನೇ ಸ್ಥಾನದಲ್ಲಿದ್ದಾರೆ.
ಸೆರೆನಾ ಕಳೆದ ಒಂದು ವರ್ಷದಿಂದ ೬೨,೦೦೦ ಡಾಲರ್ ಆದಾಯ ಗಳಿಸಿದ್ದಾರೆ. ಡೆನ್ಮಾರ್ಕ್‌ನ ಕರೊಲಿನ್ ವೋಝ್ನಿಯಾಕಿ (೧೩ ಮಿ.ಡಾಲರ್) ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಹಾಲಿ ಯುಎಸ್ ಓಪನ್ ಚಾಂಪಿಯನ್ ಸ್ಲೊಯಾನೆ ಸ್ಟೀಫನ್ಸ್ (೧೧.೨ ಮಿ.ಡಾಲರ್) ಮೂರನೇ ಸ್ಥಾನದಲ್ಲಿದ್ದಾರೆ.

Leave a Comment