ಶ್ರೀನಿವಾಸನಿಗೆ ಮೋಕ್ಷ

ಚಿತ್ರ: ಶ್ರೀನಿವಾಸ ಕಲ್ಯಾಣ
ನಿರ್ದೇಶನ: ಎಂ.ಜಿ ಶ್ರೀನಿವಾಸ್
ತಾರಾಗಣ: ಶ್ರೀನಿವಾಸ್, ಕವಿತಾ,ನಿಖಿಲ, ದತ್ತಣ್ಣ, ಅಚ್ಯುತ, ಅರುಣಾ ಬಾಲರಾಜ್ ಮತ್ತಿತರರು
ರೇಟಿಂಗ್: **

’ಶ್ರೀನಿವಾಸ ಕಲ್ಯಾಣ’ ಎಂದಾಕ್ಷಣ ಥಟ್ಟನೆ ನೆನಪಿಗೆ ಬರುವುದು ವೆಂಕಟೇಶ್ವರನ ಕುರಿತಾದ ಚಿತ್ರ ಇರಬಹುದು ಎನ್ನುವ ಭಾವನೆ ಸಹಜವಾಗಿ ಬಂದುಬಿಡುತ್ತದೆ. ಇಲ್ಲಿ ಕಲ್ಯಾಣವಿದೆ. ಆದರೆ ಇದು ದೇವರ ಚಿತ್ರವಲ್ಲ.
ಪ್ರೀತಿ,ಪ್ರೇಮ,ಹುಟುಗಾಟ,ತುಂಟತನ,ಬಾಲ್ಯದ ಮೋಹ,ಕನವರಿಕೆಯ ಸುತ್ತಾ ಚಿತ್ರ ಸಾಗಿದೆ. ಕೆಲವೇ ಕೆಲವು ಪಾತ್ರಗಳು ಇಡೀ ಚಿತ್ರವನ್ನು ಆವರಿಸಿಕೊಂಡಿವೆ. ಅದರಲ್ಲಿಯೂ ನಾಯಕನ ಪಾತ್ರ ಪ್ರತಿ ಫ್ರೇಂಗಳನ್ನು ರಾರಾಜಿಸಿದೆ.
ಬದುಕು ಯಾವಾಗಲೂ ನಿರಾಸೆ ಮಾಡುವುದಿಲ್ಲ. ಅರ್ಥ ಮಾಡಿಕೊಳ್ಳಿ, ಪಕ್ಕದಲ್ಲಿ ಇರುವ ಮೋಕ್ಷವನ್ನು ಕಂಡುಕೊಳ್ಳಿ ಅದನ್ನು ಬಿಟ್ಟು ಹುಡುಕಿಕೊಂಡು ಹೋಗಬೇಡಿ ಎಂದು ಹೇಳುವುದಕ್ಕೆ ನಿರ್ದೇಶಕ ಶ್ರೀನಿವಾಸ್ ಹಳೆಯ ಹುಡುಗಿ ಮತ್ತು ಹೊಸ ಹುಡುಗಿಯ ಪ್ರೀತಿಯ ವಿಷಯವನ್ನು ಮುಂದೆ ತಂದಿದ್ದಾರೆ. ಜೊತೆಗೆ ಕಾಮ ಕ್ರೋಧ ಮಧ ಮಾತ್ಸರ್ಯದ ವಿಷಯವನ್ನೂ ಎಳೆ ತಂದಿದ್ದಾರೆ.
ನಿನ್ ಅಕ್ಕನ್, ನಿನ್ ಅಮ್ಮನ್,ತಿ…ನಾಯ್ ಮರಿ…. ಲೌ…..ಬಾಲ್ ಸೇರಿದಂತೆ ಕೆಲ ಪೋಲಿ ಪದಗಳೇ ಹೆಚ್ಚಾಗಿ ಕಾಣಿಸಿಕೊಂಡಿವೆ. ಸೆನ್ಸಾರ್ ಮಂಡಳಿಯೂ ಕೂಡ ಅವುಗಳಿಗೆ ಮ್ಯೂಟ್ ಹೇಳದೆ ದಾರಾಳತನ ತೋರಿಸಿದೆ. ಇದರಿಂದಾಗಿ ಅಲ್ಲಲ್ಲಿ ಒಂದಷ್ಟು ಶಿಳ್ಳೆ ಕೇಕೆಗೂ ಅವಕಾಶ ಮಾಡಿದೆ.
ಪ್ರೀತಿ, ವಿರಹವನ್ನು ಹೆಚ್ಚಾಗಿ ಪ್ಲಾಶ್‌ಬ್ಯಾಕ್‌ನಲ್ಲಿ ಹೇಳುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ.
ಶ್ರೀನಿವಾಸ್ (ಶ್ರೀನಿವಾಸ್) ಶಾಲಾ ದಿನಗಳಲ್ಲಿ ಅಕ್ಷರ (ಕವಿತಾ)ಳ ಮೋಹದ ಬಲೆಗೆ ಬೀಳುತ್ತಾನೆ. ಆಕೆಯ ಜೊತೆಗೆ ಆರಾಮಾಗಿ ಕಾಲ ಕಳೆಯುವುದಾಗ ಮಾವನ ಮಗಳ ಎಂಟ್ರಿ ಇಬ್ಬರ ಪ್ರೀತಿಗೆ ಎಳ್ಳು ನೀರು ಬಿಡುವಂತಾಗತ್ತದೆ. ಅದರ ವಿರಹ ವೇದನೆಯಲ್ಲಿದ್ದವನಿಗೆ ಮತ್ತೊಬ್ಬಳು ರಾಧ (ನಿಖಿಲ) ಜೀವನದಲ್ಲಿ ಪ್ರವೇಶ ಮಾಡುತ್ತಾಳೆ. ಇನ್ನೇನು ಮದುವೆಯ ಹಂತಕ್ಕೆ ಬಂದರು ಎನ್ನುವಾಗಲೇ ಆ ಸಂಬಂಧವೂ ಬಂದಷ್ಟೇ ವೇಗವಾಗಿ ಕಿತ್ತು ಹೋಗುತ್ತದೆ.ಮೊದಲಳನೆಯವಳು ಇಲ್ಲದೇ ಇರಡನೇಯವಳು ಇಲ್ಲದೆ ಪರತಪಿಸುತ್ತಾನೆ.
ಮೊದಲ ಹುಡುಗಿ ಮತ್ತು ಎರಡನೇ ಹುಡುಗಿನ ದುಡುಕಿನ ನಿರ್ಧಾರ ಮತ್ತು ಅದರ ಪರಿತಾಪ. ಜ್ಞಾನೋದಯವಾಗುವ ವೇಳೆಗೆ ಶ್ರೀನಿವಾಸ ಅಲಿಯಾಸ್ ಲಕ್ಷ್ಮಿಕಾಂತ ಬಾಲು ಮತ್ತೊಬ್ಬಳಲ್ಲಿ ಮೋಕ್ಷ ಹುಡುಕಿಕೊಳ್ಳಲು ಮುಂದಾಗುತ್ತಾಳೆ. ಅವಳು ಯಾರು ಎನ್ನುವುದು ಚಿತ್ರದ ತಿರುಳು.
ನಿರ್ದೇಶನ ಮತ್ತು ನಟನೆ ಎಡರೂ ವಿಭಾಗದಲ್ಲಿ ಕೈಯಾಡಿಸಿರುವುದರಿಂದ ಅಂದುಕೊಂಡ ವಿಷಯವನ್ನು ತೆರೆಗೆ ತರುವ ಕಡೆ ಗಮನ ಹರಿಸಿದ್ದಾರೆ. ಹೀಗಾಗಿ ಚಿತ್ರದಕತೆ ಕುಂಟುತ್ತಾ ಸಾಗಿದೆ. ಅದಕ್ಕೆ ವೇಗ ನೀಡುವ ಜೊತೆಗೆ ಅನಗತ್ಯವಾಗಿ ಬರುವ ಕೆಲ ದೃಶ್ಯಗಳಿಗೆ ಕಡಿವಾಣ ಹಾಕುವ
ಕಡೆಗೆ ಗಮನ ಹರಿಸಿದ್ದರೆ ಉತ್ತಮ ಪ್ರಯತ್ನ ಮಾಡಬಹುದಿತ್ತು. ಇರುವುದರಲ್ಲಿ ಚಿತ್ರ ಪರವಾಗಿಲ್ಲ.
ಹೊಸ ಹುಡುಗಿಯಲ್ಲಿ ಒಬ್ಬರು ಮೊದಲರ್ಧ ಮತ್ತು ಇನ್ನೊಬ್ಬರು ಉಳಿದರ್ಧ ಭಾಗದಲ್ಲಿ ಕಾಣಿಸಿಕೊಳ್ಳುತ್ತಾರೆ. ಕವಿತಾ ನಗುವಿನ ಮೂಲಕವೇ ಗಮನ ಸೆಳೆದರೆ ಮತ್ತೊಬ್ಬ ಹುಡುಗಿ ನಿಖಿಲ, ಕೈಯಲ್ಲಿ ಬೀಯರ್ ಬಾಟಲ್ ಹಿಡಿದುಕೊಂಡು ಬಿಂದಾಸ್ ಆಗಿ ಸಂಸ್ಕೃತ ಪದ ಬಳಸಿದ್ದಾರೆ ಅಷ್ಟರ ಮಟ್ಟಿಗೆ ಅವರು ಮೊದಲ ಯತ್ನದಲ್ಲಿ ಕಾಣಿಸಿಕೊಂಡಿದ್ದಾರೆ.
ದತ್ತಣ್ಣ,ಅಚ್ಯುತ ಕುಮಾರ್, ಅರುಣಾ ಬಾಲರಾಜ್ ಮತ್ತಿತರ ತಾರಾಬಳಗವಿದೆ.
-ಚಿಕ್ಕನೆಟಕುಂಟೆ ಜಿ.ರಮೇಶ್

Leave a Comment