ಶ್ರೀನಗರದಲ್ಲಿ ಜೈಶ್ ಎ ಸಂಘಟನೆಯ ಸಂಚಿಗೆ ತಡೆ : ಐವರ ಬಂಧನ

 ಶ್ರೀನಗರ, ಜ 17 –  ಗಣರಾಜ್ಯೋತ್ಸವದ ಮುನ್ನ ಜೈಶ್-ಎ-ಮೊಹಮ್ಮದ್ (ಜೆಇಎಂ) ಭಯೋತ್ಪಾದಕ ಸಂಘಟನೆ ಕಣಿವೆಯಲ್ಲಿ ನಡೆಸಲು ಸಜ್ಜುಗೊಳಿಸಿದ್ದ ಪ್ರಮುಖ ಭಯೋತ್ಪಾದಕ ದಾಳಿಯನ್ನು ಶ್ರೀನಗರ ಪೊಲೀಸರು ಪತ್ತೆ ಹಚ್ಚಿ ತಪ್ಪಿಸಿದ್ದಾರೆ.

ಜಮ್ಮು ಕಾಶ್ಮೀರ ಪೊಲೀಸರು ಐವರು ಭಯೋತ್ಪಾದಕ ಕಾರ್ಯಕರ್ತರನ್ನು ಬಂಧಿಸಿದ್ದು, ಅವರಿಂದ ಅಪಾರ ಪ್ರಮಾಣದ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಇದೇ ಐದು ಮಂದಿ ಇತ್ತೀಚೆಗೆ ಹಬಕ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮತ್ತು ಶ್ರೀನಗರದ ಸಮೀಪ ನಡೆದ ಎರಡು ಗ್ರೆನೇಡ್ ದಾಳಿಯಲ್ಲಿ ಭಾಗಿಯಾಗಿರುವುದು ವಿಚಾರಣೆಯ ವೇಳೆ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಐವರು ಜೆಇಎಂಗಳು ಕಾಶ್ಮೀರದಲ್ಲಿ ಗಣರಾಜ್ಯೋತ್ಸವದ ಆಚರಣೆ ಸಂದರ್ಭದಲ್ಲಿ ಪ್ರಮುಖ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಿದ್ದರು ಎನ್ನಲಾಗಿದೆ.

ಬಂಧಿತ ವ್ಯಕ್ತಿಗಳನ್ನು ಉಮರ್ ಹಮೀದ್ ಶೇಖ್, ಇಮ್ತಿಯಾಜ್ ಅಹ್ಮದ್ ಚಿಕ್ಲಾ, ಐಜಾಜ್ ಅಹ್ಮದ್ ಶೇಖ್, ನಸೀರ್ ಅಹ್ಮದ್ ಮಿರ್ ಮತ್ತು ಸಾಹಿಲ್ ಫಾರೂಕ್ ಗೋಜ್ರಿ ಎಂದು ಗುರುತಿಸಲಾಗಿದೆ.

Leave a Comment