ಶ್ರೀದೇವಿ ಸಾವಿನ ಸುತ್ತ ಕೊಲೆಯ ಸಂಶಯ..!

ಮುಂಬೈ, ಜು 12- ನಟಿ ಶ್ರೀದೇವಿ ಸಾವಿನ ಸುತ್ತ ಹಲವು ಅನುಮಾನಗಳು ಸುಳಿದಾಡುತ್ತಿದ್ದು, ಸಹಜ ಸಾವಲ್ಲ ಎಂಬ ಶಂಕೆ ವ್ಯಕ್ತವಾಗಿದೆ.

ಡಿಜಿಪಿ ರಿಷಿರಾಜ್‌ ಸಿಂಗ್‌ ಅವರ ಶ್ರೀದೇವಿ ಸಾವಿನ ಕುರಿತಾದ ವರದಿಯಲ್ಲಿ , ಇದು ಸಹಜ ಸಾವಲ್ಲ, ಕೆಲವು ಸಂದರ್ಭೋಜಿತ ಸಾಕ್ಷಿಗಳು ಇದು ಸಹಜ ಸಾವಲ್ಲ ಎಂಬುದಕ್ಕೆ ಪೂರಕವಾಗಿವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಕೇರಳ ಕೌಮುದಿ ಎಂಬ ಪತ್ರಿಕೆಯಲ್ಲಿ ಪ್ರಕಟವಾದ ಒಂದು ಬರಹದಲ್ಲಿ ರಿಷಿರಾಜ್‌ ಸಿಂಗ್‌ ಈ ಕುರಿತು ಕೆಲವು ಮಾಹಿತಿಗಳನ್ನು ನೀಡಿದ್ದಾರೆ. ಶ್ರೀದೇವಿಯ ಮರಣೋತ್ತರ ಪರೀಕ್ಷೆ ನಡೆಸಿದ ಡಾ. ಉಮಾದತ್ತನ್‌ ಶ್ರೀದೇವಿ ಒಂದು ಅಡಿ ನೀರಿನಲ್ಲಿ ಮುಳುಗಿ ಸಾಯಲು ಸಾಧ್ಯವೇ ಇಲ್ಲ. ಯಾರಾದರೂ ಉದ್ದೇಶ ಪೂರಕವಾಗಿ ಮುಳುಗಿಸಿದರೇ ಮಾತ್ರ ಸಾಯಲು ಸಾಧ್ಯ ಎಂದು ಹೇಳಿದ್ದರು. ಇದು ಶ್ರೀದೇವಿ ಅವರದ್ದು ಸಹಜ ಸಾವು ಎಂದು ನಂಬಿದ್ದ ನನಗೆ ಶಾಕ್‌ ನೀಡಿತ್ತು ಎಂದು ಡಿಜಿಪಿ ರಿಷಿರಾಜ್‌ ಸಿಂಗ್‌ ಹೇಳಿದ್ದಾರೆ.

2018ರ ಫೆಬ್ರವರಿ 24 ರಂದು ದುಬೈನ ಹೋಟೇಲ್‌ ರೂಂ ನ ಬಾತ್‌ ಟಬ್‌ ನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಇದು ಸಹಜ ಸಾವು ಎಂದೇ ನಂಬಲಾಗಿತ್ತಾದರೂ, ಈಗ ಇದು ಉದ್ದೇಶ ಪೂರಿತ ಕೊಲೆಯಾಗಿರಬಹುದೆಂಬ ಸಂಶಯ ವ್ಯಕ್ತವಾಗುತ್ತಿದೆ.

Leave a Comment