ಶ್ರೀದೇವಿ ಪುರಾಣ ಮಂಗಳ ಮಹೋತ್ಸವ

ಹೊಸಪೇಟೆ.ಅ.1 ಸ್ಥಳೀಯ ಬಳ್ಳಾರಿ ರಸ್ತೆಯಲ್ಲಿರುವ ಶ್ರೀಕಾಳಿಕಾದೇವಿ ದೇವಸ್ಥಾನದಲ್ಲಿ ವಿಜಯದಶಮಿ ಅಂಗವಾಗಿ ಆಯೋಜಿಸಲಾಗಿದ್ದ ಶ್ರೀದೇವಿ ಮಹಾತ್ಮೆ ಪುರಾಣ ಮಹಾ ಮಂಗಳೋತ್ಸವ ಅದ್ದೂರಿಯಾಗಿ ಜರುಗಿತು.

ತಾಲೂಕು ವಿಶ್ವಕರ್ಮ ಸಮಾಜದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ಅಂಗವಾಗಿ ಕಾಳಿಕಾ ಮಾತೆಗೆ ಕಳೆದ 21 ರಿಂದ ನಿತ್ಯವೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ವಿಶೇಷ ಪೂಜಾಕೈಂಕರ್ಯಗಳು ಜರುಗಿದವು. ನವಬಾಲಿಕೆಯರು ದುಗೆರ್ಯ ವೇಷ ಧರಿಸಿ ದೇವಿ ಅವತಾರ ಪ್ರದರ್ಶಿಸಿದರು. ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮಗಳೊಂದಿಗೆ ಶನಿವಾರ ಪುರಾಣ ಮಹಾಮಂಗಳೋತ್ಸವ ಜರುಗಿತು.

ಬನ್ನಿ ಹಬ್ಬದ ಪ್ರಯುಕ್ತ ರಥದ ಅಲಂಕಾರ, ಬನ್ನಿ ಮುಡಿಯುವ ಕಾರ್ಯಕ್ರಮ, ಪುರಾಣ ಮಹಾಮಂಗಲ, ದೇವಿಗೆ ಮಹಾಮಂಗಳಾರತಿ, ಪ್ರಸಾದ ವಿತರಣೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಪುರಾಣ ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಕ ಮ.ಬ. ಸೋಬಣ್ಣ ನಡೆಸಿಕೊಟ್ಟರು. ಶಿಕ್ಷಕ ವಿಜಯಕುಮಾರ್ ಬಡಿಗೇರ ಕಾರ್ಯಕ್ರಮ ನಿರ್ವಹಿಸಿದರು, ಮಲ್ಲಿಕಾರ್ಜುನ ಬಡಿಗೇರ ಸಂಗೀತ ಸೇವೆ ಸಲ್ಲಿಸಿದರು. ಸಕಲ ಭಕ್ತಾದಿಗಳು, ವಿಶ್ವಕರ್ಮ ಮಹಿಳಾ ಮಂಡಳಿಯ ಸದಸ್ಯರು, ವಿಶ್ವಕರ್ಮ ಸಮಾಜದ ತಾಲೂಕ ಘಟಕದ ಕಾಳಿಕಾ ದೇವಿ ದೇವಸ್ಥಾನದ ಸಮಿತಿ ಸದಸ್ಯರು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದರು.

Leave a Comment