ಶ್ರೀಗಳಿಂದ ಕೊರೊನಾ ಜಾಗೃತಿ

ದಾವಣಗೆರೆ.ಮಾ. 24 – ಔಷಧಿ ಇಲ್ಲದ ರೋಗ ಕೊರೊನಾ ವಿಶ್ವಕ್ಕೆ ಕಾಲಿಟ್ಟಿದೆ. ಅಷ್ಟೇ ಅಲ್ಲದೆ ನಮ್ಮ ದೇಶ ಹಾಗೂ ರಾಜ್ಯಕ್ಕೂ ವ್ಯಾಪಿಸಿದೆ. ಕೊರೊನಾ ಸೋಂಕು ಹರಡದಂತೆ ಪ್ರತಿಯೊಬ್ಬರು ತಮ್ಮ ಮನೆಯೋಳಗೆ ಇದ್ದು ಈ ಮಹಾಮಾರಿಯನ್ನು ಹೊಡೆದೊಡಿಸಬೇಕೆಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಮನವಿ ಮಾಡಿದರು.
ನಗರದ ಗಡಿಯಾರದ ಕಂಬದ ಬಳಿ ಇರುವ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರಿಗೆ ಸ್ಯಾನಿಟೈಸರ್ ನೀಡಿ ಸ್ವಚ್ಚತೆಯ ಅರಿವು ಮೂಡಿಸಿದ ಶ್ರೀಗಳು ಮನೆಯಿಂದ ಹೊಬಾರದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು. ನಂತರ ಮಾತನಾಡಿದ ಅವರು
ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಜನರು ಮರಣಿಸಿದ್ದಾರೆ. ಔಷಧಿ ಇಲ್ಲದ ರೋಗ ಕೋರೊನಾ ಆದ್ದರಿಂದ
ಸಾರ್ವಜನಿಕರು ಮುಂಜಾಗ್ರತಾ ಕ್ರಮ ಪಾಲಿಸಬೇಕು. ಮನೆ ಬಿಟ್ಟು ಹೊರಗೆ ಬರಬಾರದು. ಒಬ್ಬರಿಗೋಬ್ಬರು ಒಂದು ಮೀಟರ್ ದೂರದಲ್ಲಿದ್ದು ವ್ಯಾಪಾರ ಮಾಡಿದರೆ ಉತ್ತಮ. ಈಗಾಗಲೇ ಮಾಧ್ಯಮಗಳಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಬ್ಬದ ಹಿನ್ನಲೆಯಲ್ಲಿ ವ್ಯಾಪಾರಕ್ಕೆಂದು ಹೊರಗೆ ಬರಬಾರದು. ಜೀವಂತವಾಗಿದ್ದರೆ ಹಬ್ಬ ಮಾಡಬಹುದು. ಇದೊಂದು ಅಂಟು ರೋಗ ಆದ್ದರಿಂದ ಜನಸಂಪರ್ಕದಿಂದ ದೂರವಿರುವುದು ಉತ್ತಮ. ಕೊರೊನಾ ಹಬ್ಬದಂತೆ ನೋಡಿಕೊಳ್ಳಬೇಕು. ಸರ್ಕಾರದ ಸೂಚನೆಗಳನ್ನು ಪಾಲಿಸಬೇಕು ಎಂದು ತಿಳಿಸಿದರು.ಈ ವೇಳೆ ಅಜ್ಜಂಪುರ ಶೆಟ್ರು ಮೃತ್ಯುಂಜಯ, ರಾಘವೇಂದ್ರ, ಪಾಲಿಕೆ ನಾಮನಿರ್ದೇಶನ ಸದಸ್ಯ ಶಿವನಗೌಡ ಪಾಟೀಲ್, ಪಾಲಿಕೆ ಮಾಜಿ ಸದಸ್ಯ ಚಂದ್ರಶೇಖರ್ ಮತ್ತಿತರರಿದ್ದರು.
23ಡಿಪಿಹೆಚ್ 5

Leave a Comment